ಗೋಣಿಕೊಪ್ಪಲು: ಇಲ್ಲಿನ ದಸರಾ ಜನೋತ್ಸವದ ಅಂಗವಾಗಿ ಅ.2ರ ವಿಜಯದಶಮಿಯಂದು ಜರುಗುವ ಸ್ತಬ್ಧಚಿತ್ರ ಮೆರವಣಿಗೆ ಮತ್ತು ದಶಮಂಟಪ ಶೋಭಾಯಾತ್ರೆಗೆ ಭರದಿಂದ ಸಿದ್ಧತೆ ನಡೆದಿದೆ.

ವಿಜಯದಶಮಿಯಂದು ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿರುವ ಸ್ತಬ್ಧಚಿತ್ರ ಮೆರಣಿಗೆಯಲ್ಲಿ ಪಾಲ್ಗೊಳ್ಳುವ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಜನತೆಗೆ ಮೆಚ್ಚುಗೆಯಾಗುವ ಮತ್ತು ಸಮಕಾಲೀನ ಸನ್ನಿವೇಶಗಳನ್ನು ಪ್ರಚುರಪಡಿಸುವ ಕಥಾ ವಸ್ತುವನ್ನು ಹೊಂದಿದ ಚಿತ್ರ ರೂಪಿಸುತ್ತಿದ್ದಾರೆ.

ಗೋಣಿಕೊಪ್ಪಲು ಸೀಗೆತೋಡಿನ ಸರ್ವಂ ಗೆಳೆಯರ ಬಳಗದವರು ಈ ಬಾರಿಯೂ ಗಮನ ಸೆಳೆಯುವ ಸ್ತಬ್ಧ ಚಿತ್ರ ರೂಪಿಸಲು ಶ್ರಮಿಸುತ್ತಿದ್ದಾರೆ. ಭಗತ್ ಸಿಂಗ್ ಗೆಳೆಯವರ ಬಳಗದವರು ಕೂಡ ಹತ್ತಾರು ದಿನಗಳಿಂದ ದುಡಿಯುತ್ತಿದ್ದಾರೆ.

‘ಈ ಬಾರಿ ಸ್ತಬ್ಧಚಿತ್ರಗಳನ್ನು ಆಕರ್ಷಕಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ವಿವಿಧ ಸಂಘಸಂಸ್ಥೆಗಳ 15 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸರ್ಕಾರದ ವಿವಿಧ ಇಲಾಖೆಗಳ 8 ಸ್ತಬ್ಧ ಚಿತ್ರಗಳೂ ಇರಲಿವೆ’ ಎನ್ನುತ್ತಾರೆ ಸ್ತಬ್ಧ ಚಿತ್ರ ಆಯೋಜಕ, ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ

‘2ರಂದು ಮಧ್ಯಾಹ್ನ 2 ಗಂಟೆಗೆ ಆರ್ಎಂಸಿ ಆವರಣದಿಂದ ಸ್ತಬ್ಧ ಚಿತ್ರಗಳು ಹೊರಡಲಿವೆ. ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಸ್ತಬ್ಧ ಚಿತ್ರ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸ್ಥಳೀಯ ಉದ್ಯಮಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರದೊಂದಿಗೆ ಬಂಟ್ವಾಳದ ಭಜನಾ ನೃತ್ಯ, ಕೇರಳದ ಎರ್ನಾಕುಲಂನ ಚಂಡೆ, ಗೋಣಿಕೊಪ್ಪಲು ಭಗತ್ ಸಿಂಗ್ ಸಂಘದ ಮಹಿಳಾ ಬ್ಯಾಂಡ್ ಸೆಟ್, ಹುದಿಕೇರಿಯ ಕೊಡಗಿನ ಸಾಂಪ್ರದಾಯಕ ವಾಲಗ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

‘ಮೆರವಣಿಗೆ ಬಳಿಕ ಸಮುದಾಯ ಆರೋಗ್ಯ ಕೇಂದ್ರದ ಹಿಂಬದಿಯಲ್ಲಿ ನಡೆಯಲಿರುವ ಸಮಾರೋಪದಲ್ಲಿ ಪ್ರಥಮ ಬಹುಮಾನ ಪಡೆದ ಸ್ತಬ್ಧ ಚಿತ್ರಕ್ಕೆ ₹30 ಸಾವಿರ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₹20 ಸಾವಿರ, ಟ್ರೋಫಿ, ತೃತೀಯ ಬಹುಮಾನ ₹10 ಸಾವಿರ, ಟ್ರೋಫಿ ನೀಡಲಾಗುವುದು. ಜತೆಗೆ ಎರಡು ಸಮಾಧಾನಕರ ಬಹುಮಾನ್ನೂ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಪೊಲೀಸ್ ಬಂದೋಬಸ್ತ್: ಸೂಕ್ತ ಕಾನೂನು ವ್ಯವಸ್ಥೆ ಕಾಪಾಡಲು ಜಿಲ್ಲೆಯ ಪೊಲೀಸರ ಜತೆಗೆ ಹೊರ ಜಿಲ್ಲೆಯ ಪೊಲೀಸರು ಕರ್ತವ್ಯ ನಿರ್ವಹಿಸಿಲಿದ್ದಾರೆ. ಕೆಲವು ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿರಿಸಲಾಗಿದೆ ಎಂದು ಡಿವೈಎಸ್ಪಿ ಮಹೇಶ್ ಕುಮಾರ್ ಹೇಳಿದರು.

ದಶಮಂಟಪ ಶೋಭಾಯಾತ್ರೆ

ರಾತ್ರಿ ನಡೆಯುವ ದಶಮಂಟಪ ಶೋಭಾಯಾತ್ರೆಯಲ್ಲಿ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ಮಂಟಪ ಕೈಕೇರಿಯ ಭಗವತಿ ಮಂಟಪ ನಾಡಹಬ್ಬ ದಸರಾ ಸಮಿತಿ ಮಂಟಪ ಅರುವತ್ತೊಕ್ಕಲಿನ ಕಾಡ್ಲಯ್ಯಪ್ಪ ಮಂಟಪ 2ನೇ ಬ್ಲಾಕಿನ ಸರ್ವರಾ ದಸರಾ ಮಂಟಪ ಮೈಸೂರಮ್ಮ ನಗರದ ಶಾರದಾಂಭ ದಸರಾ ಮಂಟಪ ಹರಿಶ್ಚಂದ್ರಪುರದ ನಮ್ಮ ದಸರಾ ಮಂಟಪ ಮಾರುಕಟ್ಟೆಯ ನವಚೇತನ ಮಂಟಪ ಕೊಪ್ಪದ ಸ್ನೇಹಿತರ ಬಳಗ ಮಂಟಪ ಯುವ ದಸರಾ ಮಂಟಪಗಳ ಪದಾಧಿಕಾರಿಗಳು ವಿವಿಧ ಧಾರ್ಮಿಕ ಮತ್ತು ಪೌರಾಣಿಕ ಕಥಾ ಹಂದರವುಳ್ಳ ಚಲನಾಶೀಲಾ ಆಕೃತಿಗಳ ಮಂಟಪಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಮೂರು ನಾಲ್ಕು ಟ್ರಾಕ್ಟರ್ ಲಾರಿ ಜೆಸಿಬಿಗಳನ್ನು ಬಳಸಿ ಅವುಗಳಿಗೆ ಕಣ್ಣು ಕೋರೈಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಿ ಭೋರ್ಗರೆಯುವ ಧ್ವನಿವರ್ಧಕ ಮತ್ತು ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಲು ಅಣಿಯಾಗಿದ್ದಾರೆ. ಈ ದಶಮಂಟಪಗಳು 2ರಂದು ರಾತ್ರಿ 8 ಗಂಟೆಗೆ ತಮ್ಮ ತಮ್ಮ ಸ್ಥಳದಿಂದ ಹೊರಟು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಮೈಸೂರು ರಸ್ತೆಯ ಸೀಗೆತೋಡುವರೆಗೆ ಚಲಿಸಿ ಬಳಿಕ 3ರ ಬೆಳಿಗ್ಗೆ 6 ಗಂಟೆ ವೇಳೆಗೆ ಮರಳಿ ಬರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.