ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: 31ರಿಂದ ನಿಡ್ತ ಗ್ರಾಮದಲ್ಲಿ ‘ಕನ್ನಡ ಹಬ್ಬ’

ಎರಡು ದಿನ ಅಕ್ಷರ ಜಾತ್ರೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಗೇಶ್ ಕಾಲೂರು
Last Updated 28 ಜನವರಿ 2020, 12:22 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಜ.31 ಹಾಗೂ ಫೆ.1ರಂದು ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ನಿಡ್ತ ಗ್ರಾಮದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ಲೋಕೇಶ್ ಸಾಗರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಡ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೇಳನಾಧ್ಯಕ್ಷರೂ ಆಗಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಎರಡು ದಿನ ಅದ್ದೂರಿ ಸಮ್ಮೇಳನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 8ಕ್ಕೆ ಧ್ವಜಾರೋಹಣ, 8.30ಕ್ಕೆ ದ್ವಾರಗಳ ಉದ್ಘಾಟನೆ ನಡೆಯಲಿದೆ.ಬೆಳಿಗ್ಗೆ 9ಕ್ಕೆ ಸಮೇಳನಾಧ್ಯಕ್ಷರ ಮೆರವಣಿಗೆಯು ಮುಳ್ಳೂರು ವೃತ್ತದಿಂದ ಸಮ್ಮೇಳನದ ಮಂಟಪದ ತನಕ ಸಾಗಲಿದೆ. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಮೆರವಣಿಗೆ ಚಾಲನೆ ನೀಡಲಿದ್ದಾರೆ. ಮಂಗಳವಾದ್ಯ, ಪೂರ್ಣ ಕುಂಭ, ವೈವಿಧ್ಯಮಯಕಲಾ ತಂಡಗಳು, ಅಲಂಕೃತ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 10.30ಕ್ಕೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಉದ್ಘಾಟನೆ ನಡೆಯಲಿದೆ. ಸೋಮವಾರಪೇಟೆ ತಾ.ಪಂ ಅಧ್ಯಕ್ಷೆ ಪುಷ್ಪಾ ರಾಜೇಶ್‌, ಗ್ರಾ.ಪಂ ಸದಸ್ಯರಾದ ಯಶೋದಾ ಪುಟ್ಟಸ್ವಾಮಿ, ಅನಂತ್‌ ಕುಮಾರ್‌, ಲೀಲಾವತಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವೇದಿಕೆ ಉದ್ಘಾಟನಾ ಸಮಾರಂಭ:ಬೆಳಿಗ್ಗೆ 11ಕ್ಕೆ ಬೆಸೂರು ನಂಜಪ್ಪ ಸಭಾಂಗಣವನ್ನು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಉದ್ಘಾಟಿಸಲಿದ್ದಾರೆ. ಫೀಲ್ಡ್‌ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೇದಿಕೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌ ಚಾಲನೆ ನೀಡಲಿದ್ದಾರೆ.

ನಂತರ, ಮದ್ಯಾಹ್ನ 1ಕ್ಕೆ ನಡೆಯುವ ‘ಭಾವ ಸಂಗಮ’ ಕಾರ್ಯಕ್ರಮಕ್ಕೆ ಆಕಾಶವಾಣಿ ಕಲಾವಿದ ಶಾಂತಳ್ಳಿ ಗಣೇಶ್ ಚಾಲನೆ ನೀಡಲಿದ್ದಾರೆ. ಬಳಿಕ 3.45ರಿಂದ ಸಂಜೆ 4.45ರ ವರೆಗೆ ಪುಸ್ತಕ ‘ಅವಲೋಕನ’ ಕಾರ್ಯಕ್ರಮ, ಸಂಜೆ 5ರಿಂದ 8ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಕವಿಗೋಷ್ಠಿ:ಇನ್ನು ಸಮ್ಮೇಳನದ ಎರಡನೇ ದಿನವಾದ ಫೆ.1ರಂದು ಬೆಳಿಗ್ಗೆ 9ಕ್ಕೆ ಜನಪದ ಕ್ರೀಡೋತ್ಸವನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಲೀಲಾ ದಯಾನಂದ್‌ ವಹಿಸಲಿದ್ದಾರೆ. ಅತಿಥಿಗಳಾಗಿ ಹಿರಿಯ ಸಾಹಿತಿ ನಯನತಾರಾ, ಕವಿ ಪಿ.ಎಸ್‌.ವೈಲೇಶ್‌ ಹಾಗೂ ಶರ್ಮಿಳಾ, ರಾಣಿ ರವೀಂದ್ರ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ 32 ಕವಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಂದೇ 11.30ಕ್ಕೆ ಮಹಿಳಾಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12.45ಕ್ಕೆ ಜಾನಪದ ಕಲಾವಿದ ಬೆಸೂರ್ ಶಾಂತೇಶ್ ಅಧ್ಯಕ್ಷತೆಯಲ್ಲಿ ಜನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಗಾಯಕರಾದ ಪೊನ್ನಂಪೇಟೆ ಗಿರೀಶ್, ರೇಖಾ ಶ್ರೀಧರ್‌, ಕುಶಾಲನಗರದ ಧನ್‌ಪಾಲ್‌, ಪೂರ್ಣಶ್ರೀ ಮುಮಾರ್‌ ವಿವಿಧ ಗೀತೆಗಳನ್ನು ಹಾಡಲಿದ್ದಾರೆ. ಮಧ್ಯಾಹ್ನ 1.45ರಿಂದ 2.45ರ ವರೆಗೆ ‘ಭಾವೈಕ್ಯತೆ ಮತ್ತು ಬದುಕು’ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ಸದಾಶಿವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ ಗೌರವ ಕಾರ್ಯದರ್ಶಿ ಕೆ.ಎಸ್‌. ರಮೇಶ್‌, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಆರ್‌. ಹರೀಶ್‌ ಕುಮಾರ್‌, ನಿರ್ದೇಶಕ ಕಿಗ್ಗಾಲು ಗಿರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT