ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟಕ್ಕೆ ರಸ್ತೆ ಬದಿ, ಕಾಫಿ, ಬೆಟ್ಟದ ತಪ್ಪಲು...ಹೀಗೆ ನಾನಾ ಕಡೆ ಜಲಪಾತಗಳು ಧುಮ್ಮಿಕ್ಕುತ್ತಿವೆ.

ನಿರಂತರ ಮಳೆಗೆ ಜಲಪಾತಗಳು ಮೈದುಂಬಿಕೊಂಡು ಹಲವು ಜಲಪಾತಗಳು ಚೆಲುವು ಹೊರಸೂಸುತ್ತಿವೆ. ಹಸಿರ ಸಿರಿಯ ನಡುವೆ ಬಂಡೆಗಳ ನಡುವೆ ನರ್ತಿಸುತ್ತಾ ಹಾಲ್ನೊರೆಯಂತೆ ಧುಮ್ಮಿಕ್ಕುವ - ಜಲಕನ್ಯೆಯರನ್ನು ನೋಡುವುದೇ ಆನಂದ. ಮನಸ್ಸಿನ ಒಂದು ರೀತಿಯ ಮುದ.

ಈ ಮಳೆಗಾಲದಲ್ಲಿ ಜಲಧಾರೆಯಾಗಿ ಕಣ್ಮನ ಸೆಳೆಯುವ ಈ ಜಲಪಾತಗಳನ್ನು ನೋಡಲು ಪ್ರವಾಸಿಗರು ಕೊಡಗಿನತ್ತ ಧಾವಿಸುತ್ತಾರೆ. ಅದರಲ್ಲೂ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಣ ಬರುವ ಜಲಪಾತಗಳು ವೈಶಿಷ್ಟ್ಯತೆಗಳಿಂದ ಕೂಡಿವೆ.

ಕೊಡಗಿನ ಪ್ರಸಿದ್ಧ ಜಲಪಾತಗಳಲ್ಲಿ ‘ಹಾಲೇರಿ ಫಾಲ್ಸ್’ ಅತ್ಯಂತ ಪ್ರಸಿದ್ಧವಾಗಿದೆ. ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಿಂದ ಬೋಯಿಕೇರಿಯಿಂದ ಬಲಕ್ಕೆ ತಿರುಗಿ 2 ಕಿ.ಮೀ ದೂರದಲ್ಲಿರುವ ‘ಹಾಲೇರಿ ಫಾಲ್ಸ್’ ಧುಮ್ಮಿಕ್ಕುತ್ತಿದ್ದು, ಈ ರಮಣೀಯ ದೃಶ್ಯವನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಬೇಸಿಗೆಯಲ್ಲೂ ತನ್ನ ಸೌಂದರ್ಯವನ್ನು ತೋರಿಸುವ ಈ ಜಲಪಾತ ಮಳೆಗಾಲದಲ್ಲಂತೂ ಕಣ್ಮನ ಸೂರೆಗೊಳ್ಳುತ್ತದೆ. ಜಲಪಾತ ನೋಡಲು ಕಾಫಿ ತೋಟದ ನಡುವೆ ವಾಹನದಲ್ಲಿ ತೆರಳಿದರೆ ಈ ಸುಂದರ ಜಲಪಾತವನ್ನು ಆಸ್ವಾದಿಸಬಹುದಾಗಿದೆ.

‘ಡಿ’ ಬ್ಲಾಕ್ ಫಾಲ್ಸ್: ಸುಂಟಿಕೊಪ್ಪ ಕೆದಕಲ್ ‘ಡಿ’ ಬ್ಲಾಕ್ ಫಾಲ್ಸ್ ಕಾನನದ ಸುಂದರಿಯಾಗಿ ಹೊರಹೊಮ್ಮಿದ್ದು ಆಕರ್ಷಣೀಯವಾಗಿದೆ. ಸುಂಟಿಕೊಪ್ಪದಿಂದ 7 ಕಿ.ಮೀ ದೂರದಲ್ಲಿರುವ ಈ ಜಲಪಾತವು ಇದೀಗ ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಸುಂಟಿಕೊಪ್ಪದಿಂದ ರಾಷ್ಟ್ರೀಯ ಹೆದ್ದಾರಿ ಕೆದಕಲ್ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ‘ಡಿ’ ಬ್ಲಾಕ್ ಜಲಪಾತವು ಬೆಟ್ಟಗುಡ್ಡದ ಮೇಲಿಂದ ಜಲಧಾರೆಯಾಗಿ ದುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಮುಕ್ಕೊಡ್ಲು ಅಬ್ಬಿ ಜಲಪಾತ: ಸುಂಟಿಕೊಪ್ಪ ಸಮೀಪದ ಮಾದಾಪುರದ ಮುಕ್ಕೋಡ್ಲು ಅಬ್ಬಿ ಜಲಪಾತವು ನಿಸರ್ಗದ ಮಡಿಲಲ್ಲಿ ಮಂದಹಾಸ ಬೀರುತ್ತಿದೆ. ಸಾಗು ದಾರಿಯಲ್ಲಿನ ವನಸಿರಿ ಪ್ರವಾಸಿಗರಿಗೆ ಮನಸ್ಸಿಗೆ ಹಿತಾನುಭವ ನೀಡುತ್ತದೆ. ಈ ಜಲಪಾತ ನೋಡಲು ದೂರದ ಊರುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.