ನಾಪೋಕ್ಲು ಸಮೀಪದ ಬಲಮುರಿ ಗ್ರಾಮದಲ್ಲಿ ಸ್ನಾನ ಘಟ್ಟಕ್ಕೆತೆರಳುವ ಹಾದಿಯನ್ನು ಸ್ವಚ್ಚಗೊಳಿಸಿ ಅಲಂಕರಿಸಲಾಯಿತು.
ಭಕ್ತರಿಗೆ ಕಾವೇರಿ ತೀರ್ಥ ವಿತರಿಸಲು ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಶುಕ್ರವಾರ ಕಾವೇರಿ ರಥಯಾತ್ರೆ ಆಯೋಜಿಸಿತ್ತು
ತೀರ್ಥ ವಿತರಣೆ ಇಂದು
‘ಮೂರ್ನಾಡಿನ ಗಜಾನನ ಯುವಕ ಸಂಘದ ವತಿಯಿಂದ ಶನಿವಾರ ಕಾವೇರಿ ತೀರ್ಥವನ್ನು ಮೂರ್ನಾಡಿನ ಪಟ್ಟಣದಲ್ಲಿ ವಿತರಣೆ ಮಾಡಲಾಗುವುದು.18ರಂದು ಬೆಳಿಗ್ಗೆ 7 ಗಂಟೆಗೆ ಮೂರ್ನಾಡಿನ ಅಯ್ಯಪ್ಪ ದೇವಸ್ಥಾನದಲ್ಲಿ ಕಾವೇರಿತೀರ್ಥ ವಿತರಣೆಯನ್ನು ಪ್ರಾರಂಭ ಮಾಡಲಾಗುವುದು’ ಎಂದು ಸಂಘದ ಅಧ್ಯಕ್ಷ ಕೊಟ್ಟಂಗಡ ನವೀನ್ ತಿಳಿಸಿದರು. ರಥಯಾತ್ರೆ: ‘ಕೊಡಗು ಹಕ್ಕು ಸಂರಕ್ಷಣಾ ಸಮಿತಿಯಿಂದ 30ನೇ ವರ್ಷದ ಕಾವೇರಿ ರಥಯಾತ್ರೆ ನಾಪೋಕ್ಲುವಿನಿಂದ ತಲಕಾವೇರಿಗೆ ತೆರಳಿದ್ದು ಶುಕ್ರವಾರ ವಿವಿಧ ಗ್ರಾಮಗಳ ಭಕ್ತರಿಗೆ ತೀರ್ಥ ವಿತರಿಸಲಾಯಿತು. ಭಾಗಮಂಡಲದಿಂದ ಅಯ್ಯಂಗೇರಿ ಬಲ್ಲಮಾವಟಿ ಮಾರ್ಗವಾಗಿ ನಾಪೋಕ್ಲುವರೆಗೆ ತೀರ್ಥ ವಿತರಿಸಲಾಯಿತು’ ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟoಡ ರೋಜಿ ಚಿನ್ನಪ್ಪ ತಿಳಿಸಿದರು.