ಮಡಿಕೇರಿ: ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಆ.29ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಗುರುವಾರ ಆದೇಶಿಸಿದ್ದಾರೆ.

ಬುಧವಾರದಿಂದಲೇ ಶುರುವಾದ ಮಳೆ ಗುರುವಾರವೂ ನಿಲ್ಲಲಿಲ್ಲ. ಧಾರಾಕಾರವಾಗಿ ಸುರಿಯುತ್ತಲೆ ತೊಡಗಿತು. ನಿರಂತರ ಮಳೆಯಿಂದ ಜನಸಾಮಾನ್ಯರು ಪರದಾಡಿದರು.

ಒಂದೇ ಸಮನೆ ಸುರಿಯುತ್ತಿರುವ ಮಳೆಯ ಗೌರಿ, ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿದವರಿಗೂ ತೊಂದರೆ ನೀಡಿತು.

ಗುರುವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಿರುನಾಣಿಯಲ್ಲಿ 5.5 ಸೆಂ.ಮೀ, ವಿರಾಜಪೇಟೆ ಪಟ್ಟಣ, ಕದನೂರು, ಕೆದಮುಳ್ಳೂರು, ಕೊಣಂಗೇರಿಯಲ್ಲಿ ತಲಾ 5, ಬಿ.ಶೆಟ್ಟಿಗೇರಿ 4, ಕಡಗದಾಳು, ಚೆಂಬು, ಮದೆ, ಮರಗೋಡು, ಬೆಂಗೂರು ತಲಾ 4.5, ಚೆಂಬೆಬೆಳ್ಳುರು 3.8, ಕೆದಕಲ್, ಗೋಣಿಕೊಪ್ಪಲು ತಲಾ 3.4, ಪೊನ್ನಂಪೇಟೆ 3.2, ಕಂಬಿಬಾಣೆ 2.6, ವಾಲ್ನೂರು ತ್ಯಾಗತ್ತೂರು 2.5, ನಂಜರಾಯಪಟ್ಟಣ 2.3 ಸೆಂ.ಮೀನಷ್ಟು ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ಮತ್ತಷ್ಟು ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.