ನಾಪೋಕ್ಲು: ಜಿಲ್ಲೆಯಲ್ಲಿ ಬುಧವಾರ (ಸೆ.3) ಕೈಲ್ ಮುಹೂರ್ತ ಹಬ್ಬ ಆಚರಣೆ ನಡೆಯಲಿದೆ.

ಮಳೆ ಕಡಿಮೆಯಾಗುತ್ತಿದ್ದಂತೆ ಕೃಷಿಕರು ಕೈಲ್ ಪೋಳ್ದ್ ಹಬ್ಬಕ್ಕೆ ಅಣಿಯಾಗುತ್ತಾರೆ. ಕೊಡಗಿನ ಹಬ್ಬಗಳಲ್ಲಿ ಹುತ್ತರಿ ಹಬ್ಬಕ್ಕೆ ಮೊದಲ ಸ್ಥಾನ ಇದ್ದರೆ ನಂತರದ ಸ್ಥಾನ ಕೈಲ್ ಮೂಹೂರ್ತಕ್ಕಿದೆ.

ಕೈಲ್ ಪೊಳ್ದ್ ಎಂದರೆ ಆಯುಧ ಪೂಜೆ ಎಂಬ ಅರ್ಥ. ರೈತರು ಭತ್ತದ ಗದ್ದೆಯನ್ನು ನಾಟಿ ಮಾಡಿ ದಣಿದ ಸಂದರ್ಭದಲ್ಲಿ ಸಂತೋಷದಿಂದ ಆಚರಿಸುವ ಹಬ್ಬವೇ ಕೈಲ್ ಮುಹೂರ್ತ. ಹಬ್ಬದ ದಿನದಂದು ಗದ್ದೆ ಕೆಲಸದಲ್ಲಿ ದಣಿದ ಎತ್ತುಗಳನ್ನು ಸ್ಥಾನ ಮಾಡಿಸಿ ನಂತರ ಉಳುವುದಕ್ಕೆ ಉಪಯೋಗಿಸಿದ ನೇಗಿಲು, ನೋಗಕ್ಕೆ ಪೂಜೆ ಸಲ್ಲಿಸಿ ಎತ್ತುಗಳಿಗೆ ಪಣಿ ಪುಟ್ಟು ತಿನಿಸುತ್ತಾರೆ. ನಂತರ ಮನೆಯಲ್ಲಿರುವ ಆಯುಧಗಳಾದ ಕೋವಿ, ಕತ್ತಿಗಳನ್ನು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟು ಪೂಜೆ ಸಲ್ಲಿಸಿ ಹಬ್ಬದಲ್ಲಿ ಮಾಡಿದ ಮಾಂಸದ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸುವುದು ರೂಢಿ.

ಮಾಂಸ ಸೇವನೆ ಎಲ್ಲ ಕೊಡವ ಭಾಷಿಕರ ಮನೆಗಳಲ್ಲಿ ಕಂಡು ಬರುತ್ತದೆ. ಈ ಸಂದರ್ಭ ನೆಂಟರಿಷ್ಟರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಊರುಗಳಲ್ಲೂ ಕೈಲ್ ಮುಹೂರ್ತ ಪ್ರಯುಕ್ತ ಆಟೋಟಗಳ ಸ್ವರ್ಧೆ ಏರ್ಪಡಿಸಿ ಸಂಭ್ರಮಿಸುತ್ತಾರೆ.

ಈ ಹಬ್ಬವನ್ನು ಒಂದೊಂದು ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಆಚರಿಸುತ್ತಾರೆ, ಗಾಳಿಬೀಡು ವಿಭಾಗದಲ್ಲಿ ಮೊದಲು ಹಬ್ಬವನ್ನು ಆಚರಿಸಲಾಗುತ್ತದೆ. ಭಾಗಮಂಡಲ ವ್ಯಾಪ್ತಿಯಲ್ಲಿ 27 ರಂದು ಆಚರಿಸಿದರೆ, ನಾಲ್ಕು ನಾಡಿನಲ್ಲಿ 28 ರಂದು ನಡೆಯುತ್ತದೆ. ನಂತರ ಕೊಡಗಿನಾದ್ಯಂತ ಸೆಪ್ಟೆಂಬರ್ 3 ರಂದು ಆಚರಿಸುತ್ತಾರೆ. ನಾಡಿನಾದ್ಯಂತ ವಿವಿಧ ಯುವಕಸಂಘಗಳು ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡು ಸಂಭ್ರಮಿಸುತ್ತಾರೆ. ನಾಪೋಕ್ಲು ಸಮೀಪದ ಮೂರ್ನಾಡು, ಕಬಡಕೇರಿ, ಪೇರೂರು ಸೇರಿದಂತೆ ವಿವಿಧೆಡೆ ಯುವಕ ಸಂಘಗಳು ಗ್ರಾಮೀಣ ಕ್ರೀಡಾಕೂಟವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿವೆ.

ಕೈಲ್ ಮುಹೂರ್ತ ಗ್ರಾಮೀಣ ಜನರಿಗೆ ಮನರಂಜನಾ ಹಬ್ಬ. ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ಅದೃಷ್ಟದ ಆಟ, ಬಿಸ್ಕೆಟ್ ತಿನ್ನುವ ಸ್ಪರ್ಧೆ, ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, ರಸ್ತೆ ಓಟದ ಸ್ಪರ್ಧೆಗಳು ಸೇರಿದಂತೆ ದೇಸಿ ಕ್ರೀಡೆಗಳು ಊರಿನ ಆಟದ ಮೈದಾನಗಳಲ್ಲಿ ಜರುಗುತ್ತವೆ. ಪುರುಷರು ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟದ ಸ್ಪರ್ಧೆಗಳು ನಡೆಯುತ್ತವೆ.

‘ಮೊದಲೆಲ್ಲಾ ಭತ್ತದ ಗದ್ದೆಯಲ್ಲಿ ನಾಟಿ ಆದ ಬಳಿಕ ಪ್ರತಿ ಗ್ರಾಮದಲ್ಲಿ ಓಟ ನಡೆಯುತ್ತಿತ್ತು. ನಾಟಿ ಓಟದಲ್ಲಿ ವಿಜೇತರಾದವರಿಗೆ ಸಾಂಪ್ರದಾಯಿಕವಾಗಿ ಬಾಳೆಗೊನೆ, ತೆಂಗಿನಕಾಯಿ ಹಾಗೂ ವೀಳ್ಯೆದೆಲೆ ನೀಡಿ ಗೌರವಿಸಲಾಗುತ್ತಿತ್ತು. ಇತ್ತೀಚೆಗೆ ವಿಶೇಷ ಸ್ವರೂಪ ಪಡೆದುಕೊಂಡಿದೆ. ಕೈಲ್ ಮುಹೂರ್ತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ದೇಸಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಪೇರೂರು ಗ್ರಾಮದ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಹೇಳಿದರು.

ಕೋವಿ, ಕತ್ತಿ, ನೇಗಿಲು, ನೋಗಕ್ಕೆ ಪೂಜೆ | ಆಟೋಟಗಳ ಸ್ವರ್ಧೆ ಆಯೋಜನೆ | ಮಾಂಸದ ಖಾದ್ಯ ಸೇವನೆ

ಕೊಡವ ಸಮಾಜದ ಆಚರಣೆ 27ಕ್ಕೆ

ವಿರಾಜಪೇಟೆ: ಪಟ್ಟಣದ ಕೊಡವ ಸಮಾಜದಿಂದ ಕೈಲ್ ಪೊಲ್ದ್ ನಮ್ಮೆಯನ್ನು ಶನಿವಾರ (ಸೆ.27) ಕೊಡವ ಸಮಾಜ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೊಡವ ಸಮಾಜದ ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ರತ್ನಾ ಸುಬ್ರಮಣಿ ತಿಳಿಸಿದರು.

ಪಟ್ಟಣದ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಂದು ಬೆಳಿಗ್ಗೆ 9.30ಕ್ಕೆ ಸ್ಪರ್ಧೆಗಳಿಗೆ ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಚಾಲನೆ ನೀಡಲಿದ್ದಾರೆ. ಮಹಿಳೆಯರಿಗೆ ಮತ್ತು ಪುರುಷರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ವಾಲಗದ ಕುಣಿತ, ಶಾಟ್ಪಟ್ ಸೇರಿದಂತೆ ಹಲವು ಸ್ಪರ್ಧೆ ಇರಲಿವೆ ಎಂದರು.

ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಉಪಾಧ್ಯಕ್ಷ ಕಾಣತಂಡ ಜಗದೀಶ್, ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಮರಣನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.