ವಿರಾಜಪೇಟೆ: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ಸಮೀಪದ ಬಾಳುಗೋಡುವಿನಲ್ಲಿ ನ. 16 ರಿಂದ 19 ಅಂತರ ಕೊಡವ ಸಮಾಜಗಳ ನಡುವೆ ಹಾಕಿ, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ ಎಂದು ಒಕ್ಕೂಟದ ಕ್ರೀಡಾ ಸಮಿತಿಯ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಸಮಾಜಗಳ ಒಕ್ಕೂಟ ಅಧೀನದಲ್ಲಿ 33 ಕೊಡವ ಸಮಾಜಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸ್ಪರ್ಧೆಗಳು ಕೊಡವ ಸಮಾಜಗಳ ತಂಡಗಳ ನಡುವೆ ನಡೆಯಲಿದೆ. ಹಾಕಿ ಪಂದ್ಯಾಟ, ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟ, ಗುಂಡು ಎಸೆತ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆಗಳು ನಡೆಯಲಿವೆ. ಹಗ್ಗಜಗ್ಗಾಟ ತಂಡದಲ್ಲಿ 9 ಜನರಿಗೆ ಮಾತ್ರ ಅವಕಾಶವಿರುತ್ತದೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಒಂದು ಸಮಾಜದಿಂದ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಫರ್ಧೆಗಳಲ್ಲಿ ಭಾಗವಹಿಸುವ ಸಮಾಜಗಳು ನ.10 ರೊಳಗಾಗಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು.
ಮಹಿಳೆ ಹಾಗು ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯವ ಸ್ಪರ್ಧೆಗಳು ನ.18 ರಂದು ನಡೆದು ಹಗ್ಗಜಗ್ಗಾಟದ ಫೈನಲ್ ಪಂದ್ಯ ನ. 19ರಂದು ನಡೆಯಲಿದೆ. ಹೆಚ್ಚಿ ವಿವರಗಳಿಗೆ ದೂ.ಸಂ: 94800 03902 ಅಥವಾ 99723 89873 ಅನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಒಕ್ಕೂಟದ ಕ್ರೀಡಾ ಸಮಿತಿಯ ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ, ಕ್ರೀಡಾ ಸಮಿತಿ ಕಾರ್ಯದರ್ಶಿ ಕೋಟೆರ ರಘು ಕಾರ್ಯಪ್ಪ, ಹಗ್ಗಜಗ್ಗಾಟ ಕ್ರೀಡಾ ಸಮಿತಿ ಸಂಚಾಲಕ ಬೊಳ್ಳಿಯಂಗಡ ದಾದು ಪೂವಯ್ಯ, ಕ್ರೀಡಾ ಸಮಿತಿ ನಿರ್ದೇಶಕ ಕುಂಜಿಲೊಂಡ ದೊರೆ ಪೂಣಚ್ಚ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.