ಶನಿವಾರಸಂತೆ: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತ್ತು ಮತದಾನದ ಹಕ್ಕು ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.

ಶಾಲಾ ವಿದ್ಯಾರ್ಥಿ ಸಂಘದ 13 ಸ್ಥಾನಗಳಿಗಾಗಿ ನಡೆದ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನೀತಿಸಂಹಿತೆ ಪ್ರಕಾರ ನಡೆಸಲಾಯಿತು ಹಾಗೂ ಮೊಬೈಲ್ನಲ್ಲಿ ಸಿದ್ದಪಡಿಸಿದ ‘ಇವಿಎಂ’ ಆ್ಯಪ್ ಮೂಲಕ ವಿದ್ಯಾರ್ಥಿ ಮತದಾರರು ಗೌಪ್ಯವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಅಭಿಲಾಷ್ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಎಸ್.ಧನಲಕ್ಷ್ಮಿ ಮತ್ತು ಚುನಾವಣಾ ಸಿಬ್ಬಂದಿಯಾಗಿ ಶಾಲಾ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು ಹಾಗೂ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಚುನಾವಣಾ ಪ್ರಕ್ರಿಯೆ ಸಂದರ್ಭ ವಿದ್ಯಾಸಂಸ್ಥೆಯ ಮಹಾಂತಸ್ವಾಮೀಜಿ ಪಾಲ್ಗೊಂಡು ಶುಭ ಹಾರೈಸಿದರು.

ಶಾಲಾ ಸಂಸತ್ ಆಡಳಿತ ಮಂಡಳಿಗೆ ಆಯ್ಕೆ

ಮುಖ್ಯಮಂತ್ರಿಯಾಗಿ ಕೆ.ಎ.ವಿಕಾಶ್ ಉಪಮುಖ್ಯಮಂತ್ರಿಯಾಗಿ ಎಂ.ಎಂ.ತನ್ಮಯ್ ಕಾರ್ಯದರ್ಶಿಯಾಗಿ ಎ.ವೈ.ತನ್ಮಯಿ ಕ್ರೀಡಾ ಸಚಿವೆಯಾಗಿ ಕೆ.ಕೆ.ಸಾನ್ವಿ ಉಪಕ್ರೀಡಾ ಸಚಿವ-ಮಿಥುನ್ ಆಹಾರ ಸಚಿವ-ಕೆ.ಎಂ.ಪ್ರೀತಂಗೌಡ ಆಹಾರ ಉಪಸಚಿವ-ಎಚ್.ವಿ.ದುಶ್ಯಂತ್ಗೌಡ ಆರೋಗ್ಯ ಸಚಿವ- ಕುಲದೀಪ್ಗೌಡ ಉಪ ಆಹಾರ ಸಚಿವ-ವೈ.ಪಿ.ಸಮೃದ್ ಕೃಷಿ ಮತ್ತು ತೋಟಗಾರಿಕಾ ಸಚಿವ-ಬಿ.ಎಸ್.ಬೆನಕ ಸಾಂಸ್ಕೃತಿಕ ಸಚಿವ-ಎನ್.ಎಂ.ಮೋಹಕ ಉಪ ಸಾಂಸ್ಕೃತಿಕ ಸಚಿವ-ಕೆ.ಎಂ.ಧ್ಯಾನವಿ ಹಾಗೂ ಹಣಕಾಸು ಸಚಿವ-ಮಹಮದ್ ಕಲಂದರ್ ಆಯ್ಕೆಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.