ಗುರುವಾರ , ಸೆಪ್ಟೆಂಬರ್ 23, 2021
27 °C
ಜೋಡುಪಾಲದ ಬಳಿ ಹೆದ್ದಾರಿಯ ಒಂದು ಬದಿ ಕುಸಿತ 

ಮಡಿಕೇರಿ– ಕುಶಾಲನಗರ ರಸ್ತೆ ಸಂಚಾರ ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾವೇರಿ ಪ್ರವಾಹಕ್ಕೆ ಹಲವು ರಸ್ತೆಗಳ ಸಂಚಾರ ಬಂದ್‌ ಆಗಿದೆ. ಕುಶಾಲನಗರದ ತಾವರೆಕೆರೆ ಬಳಿ ಮಡಿಕೇರಿ– ಕುಶಾಲನಗರ ರಸ್ತೆಯ ಮೇಲೆ ನೀರು ಬಂದಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದೆ. 

ಇನ್ನು ಮಡಿಕೇರಿ– ವಿರಾಜಪೇಟೆಯ ನಡುವೆಯ ಭೇತ್ರಿ ಸೇತುವೆ ಮುಳುಗಡೆ ಸ್ಥಿತಿಯಲ್ಲೇ ಇದೆ. ಬಿಳಿಗೇರಿ ಸೇತುವೆ ಕೊಚ್ಚಿ ಹೋಗಿದೆ. ಬಿಳಿಗೇರಿ – ಹಾಕತ್ತೂರು ನಡುವೆ ಸಂಪರ್ಕ ಕಡಿತಗೊಂಡಿದೆ. 

ಮಡಿಕೇರಿ– ಮಂಗಳೂರು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲದ ಬಳಿ ಹೆದ್ದಾರಿಯ ಒಂದು ಬದಿ ಕುಸಿದಿದೆ. ಬೃಹತ್‌ ವಾಹನಗಳ ಸಂಚಾರ ನಿಷೇಧಿಸಲಾಗಿದೆ.


ಭಾಗಮಂಡಲ ಜಲಾವೃತವಾಗಿದೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು