ಮಡಿಕೇರಿ: ಮಡಿಕೇರಿ ನಗರದ ದಸರಾ ಉತ್ಸವ ಕಳೆದೆಲ್ಲ ವರ್ಷಗಳಂತೆ ಈ ವರ್ಷವೂ ಯಾವುದೇ ಸುಧಾರಣೆ ಕಾಣದೆ ಅದೇ ಹಳೆಯ ಹಾದಿಯಲ್ಲೇ ಮುನ್ನಡೆಯುತ್ತಿದೆ. ಸಾಕಾಗಾದ ಅನುದಾನ, ಒಂದೆರಡು ದಿನಗಳು ಇದ್ದಾಗ್ಯೂ ಸುಧಾರಿಸದ ರಸ್ತೆಗಳು, ಮತ್ತದೇ ಹಳೆಯ ಸಮಸ್ಯೆಗಳೇ ಈ ವರ್ಷವೂ ಕಾಡುತ್ತಿದೆ.

ಕಳೆದ ಬಾರಿಗಿಂತ ಈ ಬಾರಿ ಒಂದು ದಿನ ಹೆಚ್ಚುವರಿಯಾಗಿ ದಸರಾ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಅನುದಾನ ಮಾತ್ರ ಕಳೆದ ಬಾರಿಯಂತೆ ₹ 1.5 ಕೋಟಿ ಮಾತ್ರವೇ ಈ ಬಾರಿಯೂ ನೀಡಲಾಗಿದೆ. ಇಷ್ಟು ಮಾತ್ರ ಏನೇನೂ ಸಾಲದು ಎಂಬ ಎಲ್ಲರ ಕೂಗು ಸರ್ಕಾರವನ್ನು ತಲುಪಿಲ್ಲ. ಅಂತಿಮ ಆದೇಶವೂ ಹೊರಬಿದ್ದಿದ್ದರಿಂದ ಸೀಮಿತ ಅನುದಾನದಲ್ಲಿ ಕಾರ್ಯಕ್ರಮ ಹೇಗೆ ಮಾಡಬೇಕು ಎಂಬ ಚಿಂತೆಯಲ್ಲಿ ನಗರ ದಸರಾ ಸಮಿತಿಯವರಿದ್ದಾರೆ.

ದಸರಾ ಉತ್ಸವದಲ್ಲಿ ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಬಿಟ್ಟರೆ ಪ್ರಧಾನ ಆಕರ್ಷಣೆ ಎಂದರೆ ನವರಾತ್ರಿಯಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹ 10ರಿಂದ 12 ಲಕ್ಷ ಮಾತ್ರವೇ ಅನುದಾನ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ಬಾರಿ 9 ದಿನ ಇದ್ದರೆ, ಈ ಬಾರಿ 10 ದಿನಗಳ ಕಾಲ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ಬಾರಿಗಿಂತಲೂ ಹೆಚ್ಚು ಅನುದಾನ ನೀಡಬೇಕಿತ್ತು. ಆದರೆ, ನಿರೀಕ್ಷೆ ಈಡೇರಿಲ್ಲ ಎಂದು ಸಾಂಸ್ಕೃತಿಕ ಸಮಿತಿಯ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರು.

ದಸರೆಗೆ ಇನ್ನೂ ₹ 30 ಲಕ್ಷ ಬೇಕಾಗಿದೆ. ಅದು ಸಿಗುವ ನಿರೀಕ್ಷೆಯಲ್ಲಿರುವೆ. ಸಿಗದೇ ಹೋದರೆ ಈಗ ಬಂದಿರುವ ₹ 1.5 ಕೋಟಿಯೊಳಗೆ ದಸರೆ ಆಚರಿಸಬೇಕಾಗುತ್ತದೆ.
ಅರುಣ್ಕುಮಾರ್, ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ

ಈ ಬಾರಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಗುರಿ ಹೊಂದಲಾಗಿದೆ.
ಕುಡೆಕಲ್ ಸಂತೋಷ್, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ

ಮಹಿಳಾ ದಸರಾ ಸಂಭ್ರಮ 28ರಂದು ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 8ನೇ ವರ್ಷದ ಮಹಿಳಾ ದಸರಾ ಸೆ. 28ರಂದು ನಡೆಯಲಿದ್ದು ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಮಡಿಕೇರಿ ದಸರಾ ಸಮಿತಿ ಮಡಿಕೇರಿ ನಗರಸಭೆ ಅಧ್ಯಕ್ಷರು ಸದಸ್ಯೆಯರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರೆ ನಡೆಯಲಿದೆ. ವಿವಿಧ ಸ್ಪರ್ಧೆಗಳು : ಮೆಹಂದಿ ಹಾಕುವುದು ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಕೇಶವಿನ್ಯಾಸ ಸೀರೆಗೆ ನಿಖರ ಬೆಲೆ ಹೇಳುವುದು ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು ಬಲೂನ್ ಗ್ಲಾಸ್ ಸ್ಪರ್ಧೆ ಬಾಂಬ್ ಇನ್ ದಿ ಸಿಟಿ ಕೆರೆ ದಡ ಆಟ ಹಣೆಯಲ್ಲಿ ಬಿಸ್ಕೆಟ್ ಇಟ್ಟು ತಿನ್ನುವುದು ಬಲೂನ್ ಕಾಲಲ್ಲಿ ಹಿಡಿದು ಓಡುವುದು ಜಾನಪದ ನೃತ್ಯ ವಾಲಗ ಕುಣಿತ (60 ವರ್ಷ ಒಳಗಿನವರಿಗೆ ಹಾಗೂ 60 ವರ್ಷ ತುಂಬಿದವರಿಗೆ ಎರಡು ವಿಭಾಗ) ದಸರಾಗೆ ಸಂಬಂಧಿಸಿದಂತೆ ರಸಪ್ರಶ್ನೆ ಸೇರಿದಂತೆ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇಕಪ್ ಮಾಡುವ ಸ್ಪರ್ಧೆ ಕೇಶವಿನ್ಯಾಸ ಮೆಹಂದಿ ಸ್ಪರ್ಧೆಗಳಿಗೆ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. 28 ರಂದು ಮಹಿಳಾ ದಸರಾ ದಿನದಂದೇ ಸ್ಪರ್ಧಿಗಳು ತಮ್ಮ ಹೆಸರನ್ನು ಬೆಳಿಗ್ಗೆ 9 ಗಂಟೆಗೆ ಆಗಮಿಸಿ ನೋಂದಾಯಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಈ ಬಾರಿ ಹೆಚ್ಚಿಗೆ ಸೀರೆಗಳನ್ನು ಸ್ಪರ್ಧೆಗೆ ಇರಿಸಲಾಗುವ ಉದ್ದೇಶ ಹೊಂದಲಾಗಿದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳು ಹಾಗೂ ಇತರ ಉತ್ಪನ್ನಗಳು ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ 15 ಮಳಿಗೆಗಳನ್ನು ತೆರೆಯಲು ಮೊ: 8660180251 9483785810) ಸಂಪರ್ಕಿಸಬಹುದು ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸಂತೋಷ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.