ಗೋಣಿಕೊಪ್ಪ: ಪೊನ್ನಂಪೇಟೆ ತಾಲ್ಲೂಕಿನಲ್ಲಿ ಆನೆ ಹಾವಳಿ ಹೆಚ್ಚುತ್ತಿದೆ. 24 ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ತುಳಿತಕ್ಕೆ ಸಿಲುಕಿ ಒಬ್ಬರು ಮೃತಪಟ್ಟಿದ್ದರೆ, 3 ಮಂದಿ ಗಾಯಗೊಂಡಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ಭೀತಿ ಆವರಿಸಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ತಿತಿಮತಿ ಬಾಳೆಎಲೆ ಮುಖ್ಯ ರಸ್ತೆ ಕೋಣನ ಕಟ್ಟೆ ಮಾರಪಾಲ ಬೀಟ್ ಬಳಿ ಶನಿವಾರ ಬೈಕ್ನಲ್ಲಿ ತೆರಳುತ್ತಿದ್ದವರ ಮೇಲೆ ದಾಳಿ ನಡೆಸಿದ ಕಾಡಾನೆ ವ್ಯಕ್ತಿಯೊಬ್ಬರನ್ನು ತುಳಿದು ಹಾಕಿತು. ಮತ್ತಿಬ್ಬರು ಇಲ್ಲಿ ಗಾಯಗೊಂಡರೆ, ಶ್ರೀಮಂಗಲ ಬಳಿಯ ಬೀರುಗದಲ್ಲಿ ಶುಕ್ರವಾರ ರಾತ್ರಿ ಕಾಡಾನೆ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತು. ತಾಲ್ಲೂಕಿನಲ್ಲಿ ಈ ಎರಡೂ ಘಟನೆಗಳು ಜನರಲ್ಲಿ ತಲ್ಲಣ ಮೂಡಿಸಿವೆ.

ಮರಪಾಲ ಮಹದೇಶ್ವರ ಕಾಲೊನಿ ನಿವಾಸಿ ಚೋಮ (48) ಹಾಗೂ ಸಿದ್ದಪ್ಪ (45) ಮಾರಮ್ಮ ದೇವಸ್ಥಾನದಿಂದ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಕೋಣನಕಟ್ಟೆ ಸಮೀಪದ ಮುಖ್ಯರಸ್ತೆಯ ತಿರುವಿನಲ್ಲಿ ಕಾಡಾನೆ ಬೈಕ್ ಮೇಲೆ ದಾಳಿ ನಡೆಸಲು ಮುಂದಾಗಿದೆ. ಸವಾರ ಸಿದ್ದಪ್ಪ ಬೈಕ್ನಿಂದ ಹಾರಿ ತಪ್ಪಿಸಿಕೊಂಡಿದ್ದಾರೆ. ಆಗ ಬೈಕ್ ಕೆಳಗೆ ಬಿದ್ದಾಗ ತಪ್ಪಿಸಿಕೊಳ್ಳಲಾಗದೆ, ಚೋಮನನ್ನು ಆನೆ ತುಳಿದು ಕೊಂದಿದೆ. ‘ಕಣ್ಣೆದುರೇ ಜೀವ ಕಳೆದುಕೊಳ್ಳುತ್ತಿದ್ದ ಚೋಮನನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಸಿದ್ದಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ಇದೇ ಬೈಕಿನಲ್ಲಿ ತೆರಳುತ್ತಿದ್ದ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ನಂತರ ಸಮೀಪದ ತೋಟ ಸೇರಿಕೊಂಡಿರುವ ಆನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಮತ್ತಿಗೋಡು ವನ್ಯಜೀವಿ ವಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಸೆರೆಗೆ ಶಿಪಾರಸ್ಸು ಮಾಡುವ ಭರವಸೆ ನೀಡಿದ್ದಾರೆ.

ಇನ್ನೆಷ್ಟು ಸಾವು ಬೇಕು?

ಕಾರ್ಮಿಕರಾಗಿ ದುಡಿಯುತ್ತಿದ್ದ ಚೋಮ ಅವರ ಸಾವಿನಿಂದ ಕೋಪಗೊಂಡ ಸ್ಥಳೀಯರು ಹಾಗೂ ರೈತ ಸಂಘದ ಕಾರ್ಯಕರ್ತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾವಿಗೆ ಕಾರಣವಾದ ಕಾಡಾನೆಯನ್ನು ಸೆರೆ ಹಿಡಿಯಲು ಸರ್ಕಾರಕ್ಕೆ ಶಿಪಾರಸ್ಸು ಮಾಡುವುದಾಗಿ ಎಸಿಎಫ್ ಸತೀಶ್ ಮಾಹಿತಿ ನೀಡಿದರೂ ಪ್ರತಿಭಟನಕಾರರ ಕೋಪ ತಣಿಯಲಿಲ್ಲ. ತಕ್ಷಣವೇ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸಿಸಿಎಫ್ ಮಹೇಶ್ಕುಮಾರ್ ಸ್ಥಳದಲ್ಲೇ ₹2 ಲಕ್ಷ ಪರಿಹಾರದ ಚೆಕ್ ನೀಡಿದರು. ಉಳಿದ ಹಣವನ್ನು ಸದ್ಯದಲ್ಲಿಯೇ ವಿತರಿಸಲಾಗುವುದು. ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಕಾರರು ಪ್ರತಿಭಟನೆಯನ್ನು ಕೈಬಿಟ್ಟರು.

ಮುಖಂಡ ಅರುಣ್ ಮಾಚಯ್ಯ, ಸ್ಥಳೀಯ ಕಾಫಿ ಬೆಳೆಗಾರರು, ಕಾರ್ಮಿಕರು, ರೈತ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಂತರ,ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೆ ದಾಳಿ ತಡೆಗೆ ಉನ್ನತಾಧಿಕಾರ ಸಮಿತಿ ರಚಿಸಲು ಒತ್ತಾಯ

ಗೋಣಿಕೊಪ್ಪ: ಹೆಚ್ಚುತ್ತಿರುವ ಆನೆ ದಾಳಿ ತಡೆಗೆ ವೈಜ್ಞಾನಿಕ ಕಾರ್ಯಾಚರಣೆ ಕೈಗೊಳ್ಳಬೇಕು ಹಾಗೂ ಉನ್ನತಾಧಿಕಾರ ಸಮಿತಿ ರಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡಮುಕೋಂಡ ವಿಜು ಸುಬ್ರಮಣಿ, ‘ಕೊಡಗಿನಲ್ಲಿ ಕಾಡಾನೆ, ಹುಲಿ ಸೇರಿದಂತೆ ವನ್ಯಪ್ರಾಣಿಗಳ ಹಾವಳಿ ತಡೆಗೆ ವೈಜ್ಞಾನಿಕ ಕಾರ್ಯಾಚರಣೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಉನ್ನತಾಧಿಕಾರ ಸಮಿತಿಯನ್ನು ತುರ್ತಾಗಿ ರಚಿಸಬೇಕು’ ಎಂದು ಆಗ್ರಹಿಸಿದರು.

ಕೂಲಿ ಕಾರ್ಮಿಕರು ತೋಟಗಳಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣವಿಲ್ಲ. ಇದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ದಕ್ಷಿಣ ಕೊಡಗಿನ 50ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕಾಡಾನೆ ಹಾವಳಿ ವ್ಯಾಪಕವಾಗಿದೆ. ವನ್ಯಜೀವಿಗಳ ಉಪಟಳವನ್ನು ಕೊಡಗಿನ ಜನತೆ ಇನ್ನೆಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

‘ಕಾಡಾನೆ ಮತ್ತು ಹುಲಿ ದಾಳಿಯಿಂದ ಸಾವನ್ನಪ್ಪುವ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಕನಿಷ್ಠ ₹25 ಲಕ್ಷವಾದರೂ ಪರಿಹಾರ ಧನ ವಿತರಿಸಬೇಕು. ಕೇವಲ ₹7 ಲಕ್ಷ ಪರಿಹಾರ ನೀಡಿ ಇಲಾಖೆ ಕೈತೊಳೆದುಕೊಂಡರೆ ದಾಳಿಗೆ ಬಲಿಯಾದ ವ್ಯಕ್ತಿಯ ಸಾವಿಗೆ ನ್ಯಾಯ ದೊರೆಯುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.