ಮಡಿಕೇರಿ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಾಲ್ಯವಿವಾಹಕ್ಕೆ ಸಹಕಾರ ನೀಡಿದ ಆರೋಪದ ಮೇರೆಗೆ ಕೊಡಗು ಜಿಲ್ಲೆಯ ಎಸ್ಟೇಟ್ ಮಾಲೀಕ ಸೇರಿ ಏಳು ಮಂದಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಬಾಲಕಿ ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಆರೋಪದ ಮೇರೆಗೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ, ಬಾಲಕಿಗೆ ಹೆರಿಗೆಯಾದಾಗ ವಯಸ್ಸನ್ನು ಪರಿಶೀಲಿಸದ ಆರೋಪದಲ್ಲಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಬಾಲಕಿಗೆ 22ರಿಂದ 25 ವರ್ಷವಾಗಿದೆ ಎಂದು ಸುಳ್ಳು ಪ್ರಮಾಣಪತ್ರ ನೀಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕ, ಬಾಲಕಿಯ ತಂದೆ, ತಾಯಿ, ಮದುವೆ ಮಾಡಿಕೊಂಡ ಸಂಬಂಧಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ವಿವರ:

ಪೋಷಕರೊಂದಿಗೆ ಎಸ್ಟೇಟ್ವೊಂದರ ಲೈನ್ಮನೆಯಲ್ಲಿ ವಾಸವಿದ್ದ ಬಾಲಕಿಯ ಮೇಲೆ ಎಸ್ಟೇಟ್ ಮಾಲೀಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಕೆಯ ಮೂಲ ದಾಖಲೆಗಳನ್ನು ತನ್ನಲ್ಲೇ ಇಟ್ಟುಕೊಂಡಿದ್ದ. ಎಸ್ಟೇಟ್ನಿಂದ ಹೊರ ಹೋಗಲು ಬಿಡುತ್ತಿರಲಿಲ್ಲ. ಆಕೆಯ ತಾಯಿಯ ತಮ್ಮನೊಂದಿಗೆ ಮದುವೆ ಮಾಡಿಸಿದ್ದ. ಗರ್ಭಿಣಿ ಎಂದು ತಿಳಿದ ಕೂಡಲೇ ಎಸ್ಟೇಟ್ನಿಂದ ಹೊರ ಹಾಕಿದ್ದ. ಹೆರಿಗೆ ಮಾಡಿಸಿದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೂ ಆಕೆಯ ವಯಸ್ಸನ್ನು ಪರಿಶೀಲಿಸಿರಲಿಲ್ಲ. ಶಾಲಾ ದಾಖಲಾತಿಯ ವಯಸ್ಸನ್ನು ಬಿಟ್ಟು ಬಾಲಕಿಗೆ 22–25 ವರ್ಷವಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಪ್ರಾಧ್ಯಾಪಕರೊಬ್ಬರು ಪ್ರಮಾಣಪತ್ರವನ್ನೂ ನೀಡಿದ್ದರು. ಈ ಕುರಿತು ಬಾಲಕಿ ದೂರು ಸಲ್ಲಿಸಿದ್ದರೂ ಸಿಡಿಪಿಓ ಕೂಡ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ.

ಬೇಸರಗೊಂಡ ಬಾಲಕಿಯು ಬರೆದ ಪತ್ರವನ್ನು ರಾಜ್ಯ ಮಹಿಳಾ ಆಯೋಗವು ರಾಜ್ಯ ಮಕ್ಕಳ ರಕ್ಷಣಾ ಆಯೋಗಕ್ಕೆ ರವಾನಿಸಿತು. ಆಯೋಗವು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕ್ರಮ ವಹಿಸುವಂತೆ ಸೂಚಿಸಿತು. ಬಾಲಕಿಯ ಶಾಲಾ ದಾಖಲಾತಿಗಳನ್ನು ಪಡೆದು, ಆಪ್ತಸಮಾಲೋಚನೆಗೆ ಒಳಪಡಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.