ಕುಶಾಲನಗರದಲ್ಲಿ ಪ್ರತಿಭಟನೆಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ವೇದಿಕೆ ಪ್ರವೇಶಿಸಿ ಜೈಶ್ರೀರಾಮ್ ಘೋಷಣೆ ಕೂಗಿದರು
ಕುಶಾಲನಗರದಲ್ಲಿ ಪ್ರತಿಭಟನೆ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ಭಾಷಣಕ್ಕೆ ಅವಕಾಶ ನೀಡದೆ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು
ಧಾರ್ಮಿಕ ಕ್ಷೇತ್ರಗಳ ಮೇಲೆ ವೈಚಾರಿಕತೆ ದಾಳಿ: ಸ್ವಾಮೀಜಿ
ಮುಳ್ಳೂರು ಮಠದ ಬಸವಲಿಂಗ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ ‘ಅನಾದಿ ಕಾಲದಿಂದಲೂ ಹಿಂದೂ ಧಾರ್ಮಿಕ ಕೇಂದ್ರ ಮಠಮಾನ್ಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪಿತೂರಿ ಹುನ್ನಾರ ನಡೆಯುತ್ತಿದೆ. ಧಾರ್ಮಿಕ ಕ್ಷೇತ್ರಗಳ ಮೇಲೆ ವೈಚಾರಿಕತೆ ಹೆಸರಿನಲ್ಲಿ ದಾಳಿ ನಡೆಸಲಾಗುತ್ತಿದೆ. ಪುಣ್ಯಕ್ಷೇತ್ರ ಧಾರ್ಮಿಕ ವೈಚಾರಿಕತೆ ಮುಂದಿಟ್ಟುಕೊಂಡು ದಾಳಿ ಮಾಡಿದರೂ ಹಿಂದೂ ಧರ್ಮ ಅಳಿಸಲು ಸಾಧ್ಯವಿಲ್ಲ’ ಎಂದರು.
ಕೆರೆಹಳ್ಳಿ ದಿಕ್ಸೂಚಿ ಭಾಷಣ
ಧರ್ಮಸ್ಥಳದ ಅವಹೇಳನ ಖಂಡಿಸಿ ಪ್ರತಿಭಟನೆ ವೇಳೆ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂಬ ಸಂದೇಶ ವಾಟ್ಸ್ ಅ್ಯಪ್ ಗ್ರೂಪ್ ಗಳಲ್ಲಿ ಬುಧವಾರ ಸಂಜೆ ಹರಿದಾಡಿತು. ಪೊಲೀಸ್ ಬಿಗಿ ಭದ್ರತೆ ನಡುವೆ ಪುನೀತ್ ಕೆರೆಹಳ್ಳಿ ವೇದಿಕೆಗೆ ಬಂದು ಭಾಷಣ ಮಾಡಲು ಮುಂದಾದ ಘಟನೆ ನಡೆಯಿತು. ಭಾಷಣ ಮಾಡಲು ಕೆರೆಹಳ್ಳಿಗೆ ಅವಕಾಶ ನೀಡುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿ ಕೆರೆಹಳ್ಳಿ ಬಂಧನಕ್ಕೆ ಅಡ್ಡಿ ಪಡಿಸಿದರು.