ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿಗಾಗಿ ಆದಿವಾಸಿಗಳ ಆಗ್ರಹ: ಬೇಡಿಕೆ ಈಡೇರಿಸಲು ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಬೇಡಿಕೆ ಈಡೇರಿಸಲು ಒತ್ತಾಯ
Last Updated 19 ಮಾರ್ಚ್ 2021, 15:21 IST
ಅಕ್ಷರ ಗಾತ್ರ

ಮಡಿಕೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆದಿವಾಸಿ ಭಾರತ್ ಮಹಾಸಭಾದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಕಸ ವಿಲೇವಾರಿ ಘಟಕ ಮಾಡುವುದನ್ನು ರದ್ದುಗೊಳಿಸಬೇಕು, ಅಲ್ಲಿನ ಆದಿವಾಸಿಗಳಿಗೆ ತಲಾ 3 ಎಕರೆ ಭೂಮಿ ಹಾಗೂ ಹಕ್ಕುಪತ್ರ ಒದಗಿಸಬೇಕು ಎಂದು ಕೋರಿದರು.

ಗೋಣಿಗದ್ದೆ ಕೊಡಂಗೆ ಹಾಡಿ ಜನರಿಗೆ ಅರಣ್ಯದ ಅಂಚಿಗೆ ತಲಾ 3 ಎಕರೆ ಭೂಮಿ, ಪುನರ್ವಸತಿ ಕಲ್ಪಿಸಬೇಕು, ಲೈನ್‌ಮನೆ ವಾಸಿಗಳಿಗೆ ಕೃಷಿ ಭೂಮಿ, 94 ‘ಸಿ’, ‘ಸಿಸಿ’ ಹಾಗೂ 57ರಡಿಯಲ್ಲಿ ಆದಿವಾಸಿಗಳಿಗೆ ಹಕ್ಕು ಪತ್ರ, ಸಾಗುವಳಿ ಮಾಡಿರುವ ಕೃಷಿಭೂಮಿಗೆ ಹಕ್ಕುಪತ್ರ ನೀಡಬೇಕು, ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ತ್ವರಿತವಾಗಿ ನೀಡಬೇಕು, ಅರಣ್ಯ ಹಕ್ಕು ಕಾಯ್ದೆ ಸಮರ್ಥವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗೆ ಸ್ಪಂದಸದಿದ್ದಲ್ಲಿ ಆದಿವಾಸಿಗಳು ಒಂದಾಗಿ ಅಹೋರಾತ್ರಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ಅಧ್ಯಕ್ಷ ಚಿಣ್ಣಪ್ಪ, ಪ್ರಮುಖರಾದ ಅನಿತಾ, ಜಯಣ್ಣ, ಮುತ್ತಣ್ಣ, ರಘು, ಮಧು ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT