ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕೆರೆಯಲ್ಲಿ ಸಿಲುಕಿದ್ದ 3 ಕಾಡಾನೆಗಳ ರಕ್ಷಣೆ

Published 27 ಏಪ್ರಿಲ್ 2024, 6:12 IST
Last Updated 27 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಚೇಲಾವರ ಗ್ರಾಮದ ಕಾಫಿ ತೋಟವೊಂದರ ಕೆರೆಯಲ್ಲಿ ಮೂರು ಕಾಡಾನೆಗಳು ಸಿಲುಕಿ ಹೊರಬರಲಾಗದೇ ಪರದಾಡಿದವು.

ಇವುಗಳಲ್ಲಿ ಒಂದು ಮರಿಯಾನೆ, ಒಂದು ಹೆಣ್ಣಾನೆ ಹಾಗೂ ಒಂದು ಗಂಡಾನೆ ಇತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆಯ ಒಂದು ಬದಿಯಲ್ಲಿ ಮಣ್ಣು ತೆಗೆದು ಆನೆಗಳು ಸರಾಗವಾಗಿ ಹತ್ತಲು ಅನುವು ಮಾಡಿಕೊಟ್ಟರು.

ಡಿಸಿಎಫ್‌ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಸಿ.ಟಿ.ಅನಿಲ್ ಹಾಗೂ ಉಪವಲಯ ಅರಣ್ಯಾಧಿಕಾರಿ ಕೆ.ಆರ್.ಆನಂದ್ ಮತ್ತು ಚೇಲಾವರ ಕ್ಯಾಂಪ್ ಸಿಬ್ಬಂದಿ, ತುರ್ತು ಸ್ಪಂದನಾ ತಂಡದ ಸಿಬ್ಬಂದಿ, ವಿರಾಜಪೇಟೆ ವಲಯ ಹಾಗೂ ಆನೆ ಕಾರ್ಯಪಡೆಯ ಗಸ್ತು ಅಧಿಕಾರಿ ನಾಗರಾಜ್ ಈ ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT