ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಹಾಕಿಯ ಕಲರವದ ನಡುವೆ ಆಹಾರದ ಪರಿಮಳ

Published 14 ಏಪ್ರಿಲ್ 2024, 14:23 IST
Last Updated 14 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿಯಲ್ಲಿ ಭಾನುವಾರ ಹಾಕಿ ಕಲರವದ ನಡುವೆ ವೈವಿಧ್ಯಮಯ ಆಹಾರಗಳ ಪರಿಮಳವೂ ಇಡೀ ಮೈದಾನದಲ್ಲಿ ಪಸರಿಸಿತು.

ಕ್ರೀಡಾಸಕ್ತರು ಒಂದೆಡೆ ಹಾಕಿ ಹಬ್ಬದ ಸಡಗರದಲ್ಲಿ ಮಿಂದೆದ್ದರೆ ಮತ್ತೊಂದೆಡೆ ವೈವಿಧ್ಯಮಯ ಆಹಾರಗಳನ್ನು ಸೇವಿಸಿ ಖುಷಿಪಟ್ಟರು. ಸುಡುಬಿಸಿಲಿಗೆ ಎಳನೀರು, ವಿವಿಧ ಬಗೆಯ ತಂಪು ಪಾನೀಯಗಳು ಇಲ್ಲಿ ನಡೆದ ಆಹಾರ ಮೇಳದಲ್ಲಿ ಬಿರುಸಿನಿಂದ ಮಾರಾಟವಾದವು.

ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ನಡುವೆ ಭಾನುವಾರ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ರಜಾ ದಿನವಾದ್ದರಿಂದ ಹೆಚ್ಚಿನ ಕ್ರೀಡಾಸಕ್ತರು ಮೈದಾನದತ್ತ ಜಮಾಯಿಸಿದರು. ತಂಪು ಪಾನೀಯಗಳು, ಕುಲ್ಫಿ, ಐಸ್ ಕ್ರೀಂಗಳನ್ನು ಸೇವಿಸಿ ಬಗೆಬಗೆಯ ಆಹಾರದ ರುಚಿ ಸವಿದರು.

ಹಾಕಿ ಉತ್ಸವದ ನಡುವೆ ಆಹಾರ ಉತ್ಸವವು ಹಲವರ ಮನತಣಿಸಿತು.

ಮೈಸೂರಿನ ದಿ ಕಂಟ್ರಿ ಸೈಡ್ ಫ್ರೂಟ್ ಬಾರ್, ದಿ ಮಾಲ್ಗುಡಿ ಕಾಫಿ ಶಾಪ್ ಮತ್ತು ಬೇಕರಿ, ಮೈಸೂರಿನ ಬಿಗ್ ಕಪ್ ಕೆಫೆ, ಕ್ಲಬ್ ಮಹಿಂದ್ರ, ಸಿದ್ದಾಪುರದ ಅಕ್ವವೆಂಚರ್, ದಿ ಪೋರ್ಟ್ ಮರ್ಕರ್ ಸೇರಿದಂತೆ ಹಲವು ಆಹಾರದ ಮಳಿಗೆಗಳು ಕ್ರೀಡಾಸಕ್ತರ, ಆಹಾರಪ್ರಿಯರನ್ನು ಆಕರ್ಷಿಸಿದವು.

ಕೊಡಗಿನ ಆಹಾರ ವೈವಿಧ್ಯಗಳಾದ ನೂಪುಟ್, ಪಾಪುಟ್, ಕಡುಂಬುಟ್, ರೊಟ್ಟಿ ಕಬಾಬು.. ನತ್ತ ಜನ ಆಕರ್ಷಿತರಾದರು. ಸಸ್ಯಾಹಾರಗಳ ಜೊತೆಗೆ ಮಾಂಸಾಹಾರವೂ ಹಲವರಿಗೆ ಖುಷಿ ಕೊಟ್ಟಿತು. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಚಿಕನ್ ಮೊಮೋಸ್‌ಗಳ ರುಚಿಯನ್ನು ಗ್ರಾಹಕರು ಸವಿದು, ಖುಷಿಪಟ್ಟರು.

ವೈವಿಧ್ಯಮಯ ದೋಸೆಗಳ ಘಮಲು ಮೈದಾನದಲ್ಲಿ ಪಸರಿಸಿತು. ಪ್ಲೇನ್ ದೋಸೆ, ಪೇಪರ್ ದೋಸೆ, ಮಸಾಲೆ ದೋಸೆ, ಮೈಸೂರ್ ದೋಸೆ, ಮೈಸೂರ್ ಮಸಾಲೆ ದೋಸೆ, ಚೆಟ್ಟಿನಾಡು ದೋಸೆ, ಚೆಟ್ಟಿನಾಡು ಚಿಕನ್ ದೋಸೆ.. ಹೀಗೆ ಹಲವು ಬಗೆಯ ದೋಸೆಗಳ ವೈವಿಧ್ಯಗಳನ್ನು ಮಕ್ಕಳಾದಿಯಾಗಿ ಹಲವರು ಸೇವಿಸಿ ಆನಂದಪಟ್ಟರು. ಕುಟುಂಬದ ಎಲ್ಕ್ಕಯೋಮಾನದ ಜನರು ಆಹಾರಮೇಳದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಆಹಾರ ಉತ್ಸವದಲ್ಲಿ ಕುಟುಂಬಸ್ಥರು ಒಟ್ಟಾಗಿ ಆಹಾರ ಸೇವಿಸಿದರು.
ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಆಹಾರ ಉತ್ಸವದಲ್ಲಿ ಕುಟುಂಬಸ್ಥರು ಒಟ್ಟಾಗಿ ಆಹಾರ ಸೇವಿಸಿದರು.
ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆದ ಆಹಾರ ಉತ್ಸವದಲ್ಲಿ ಸೇರಿದ್ದ ಜನರು
ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆದ ಆಹಾರ ಉತ್ಸವದಲ್ಲಿ ಸೇರಿದ್ದ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT