ನಾಪೋಕ್ಲು: ಹಿಂದೆ ಬಹು ಹೇರಳವಾಗಿ ಮಳೆಗಾಲದಲ್ಲಿ ಸಿಗುತ್ತಿದ್ದ ಮರಕೆಸು ವರ್ಷಗಳು ಉರುಳುತ್ತಿದ್ದಂತೆ ಕಡಿಮೆಯಾಗತೊಡಗಿದೆ. ನಗರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿರುವ ಸ್ಥಳಕ್ಕೆ ಬಂದು ಗ್ರಾಮೀಣ ಮಂದಿಯೂ ಖರೀದಿಸುವಂತಹ ಸ್ಥಿತಿ ಬಂದಿದೆ.

ದೊಡ್ಡ ದೊಡ್ಡ ಮರಗಳ ಕೊಂಬೆಗಳ ಸಂದುಗಳಲ್ಲಿ, ಅವುಗಳ ಪೊಟರೆಗಳಲ್ಲಿ ಪರಾವಲಂಬಿ ಸಸ್ಯವಾಗಿ ಬೆಳೆಯುವ ಮರಕೆಸುವಿನ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಮೊದಲು ಜಿಲ್ಲೆಯ ಕಾಡುಗಳಲ್ಲಿ ಹೇರಳವಾಗಿ ಲಭಿಸುತ್ತಿದ್ದ ಮರಕೆಸು ತೋಟಗಳ ವ್ಯಾಪಕ ವಿಸ್ತರಣೆಯಿಂದಾಗಿ ಇಳಿಮುಖಗೊಂಡಿದೆ. ವಿಶೇಷವಾಗಿ, ತೋಟಗಳ ಅಭಿವೃದ್ಧಿ ಆಗುತ್ತಿದ್ದಂತೆ ನೆರಳು ಮರಗಳನ್ನು ತೆಗೆಯುವ ಪ್ರಕ್ರಿಯೆಗೆ ಬೆಳೆಗಾರರು ಮುಂದಾದರು. ಕಾಡು ಮರಗಳು ನಾಶವಾಗುತ್ತಾ ಬಂದಂತೆ ಮರಕೆಸುವಿನ ಪ್ರಮಾಣವೂ ಇಳಿಮುಖಗೊಳ್ಳತೊಡಗಿತು.

ಆಧುನಿಕತೆಗೆ ಒಗ್ಗಿಕೊಂಡ ಜನರ ಆಹಾರ ಶೈಲಿಯೂ ಬದಲಾದಂತೆ ಮರಕೆಸು ಬಳಸುವವರೂ ಕಡಿಮೆಯಾಗಿದ್ದಾರೆ. ಈ ಹಿಂದೆ ಪ್ರಕೃತಿಜನ್ಯ ವಸ್ತುಗಳನ್ನು ಆಹಾರವಾಗಿ ಬಳಸುತ್ತಿದ್ದರು. ‘ರೆಡಿಮೇಡ್’ ಯುಗದಲ್ಲಿ ಮನೆ ಬಾಗಿಲಿಗೆ ಆಧುನಿಕ ಆಹಾರ ವಸ್ತುಗಳು ತಲುಪುತ್ತಿರುವ ಈ ವೇಳೆಯಲ್ಲಿ ಸಾಂಪ್ರದಾಯಿಕ ತಿನಿಸುಗಳು ಮರೆಯಾಗುತ್ತಿವೆ. ಪ್ರಕೃತಿದತ್ತ ವಸ್ತುಗಳಿಂದ ಮಾಡುವಂತಹ ರುಚಿಕರ ಅಡುಗೆಗೆ ಈಗಿನ ಯುವಜನರು, ಮಕ್ಕಳು ಇಷ್ಟಪಡುತ್ತಿಲ್ಲ. ಪಿಜ್ಜಾ, ಬರ್ಗರ್, ಪಾನಿಪುರಿ, ಮಸಾಲೆಪುರಿಗಳ ಮಧ್ಯೆ ಹಿಂದಿನ ಕಾಲದ ಪತ್ರೊಡೆ ಅಂದರೆ ತಮಾಷೆ ಎನಿಸುವಂತೆ ಆಗಿದೆ.

ಕಾಡುಗಳಲ್ಲಿ ಅಡ್ಡಾಡಿ ಮರಕೆಸುವನ್ನು ಅರಸುವ ಮನಸ್ಸೂ ಈಗಿನವರಿಗಿಲ್ಲ. ವಾರದ ಸಂತೆಯಲ್ಲಿ ಹಣ ನೀಡಿದರೆ ಮರಕೆಸುಗಳ ಕಟ್ಟು ವ್ಯಾಪಾರಸ್ಥರಲ್ಲಿ ಲಭ್ಯ. ಬೇಕೆನಿಸಿದರೆ ಖರೀದಿಸಿದರಾಯಿತು ಬಿಡಿ ಎಂಬ ಪಟ್ಟಣಿಗರ ಜೊತೆಗೆ ಗ್ರಾಮೀಣ ಜನರ ಮನೋಭಾವವೂ ಬದಲಾಗಿದ್ದು, ಮರಕೆಸು ಬಳಕೆ ಕಡಿಮೆಯಾಗುತ್ತಿದೆ. ಅದರ ರುಚಿ, ಸೊಗಡು ಆಸ್ವಾದಿಸಲು ಹೊಟೇಲುಗಳಿಗೆ ತೆರಳುವಂತಾಗಿದೆ.

ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಏಲಕ್ಕಿ ತೋಟಗಳು ಹೆಚ್ಚಿನ ಪ್ರಮಾಣದಲ್ಲಿತ್ತು. ಕಾಫಿ ತೋಟಗಳು ಕಡಿಮೆ ಪ್ರಮಾಣದಲ್ಲಿದ್ದವು. ಗದ್ದೆಯ ಬಯಲುಗಳು ಹೆಚ್ಚಿದ್ದರಿಂದ ದನಗಳನ್ನು ಸಾಕಲು ಮತ್ತು ಅವುಗಳ ಮೇವಿಗಾಗಿ ಹೆಚ್ಚಿನ ಜಾಗಗಳನ್ನು ಬಿಡುತ್ತಿದ್ದರು. ಅಲ್ಲಿ ಬಿದಿರು ಮೆಳೆಗಳು, ಕಾಡುಗಳಿದ್ದವು. ಈ ಕಾಡುಗಳಲ್ಲಿ ವಿವಿಧ ಜಾತಿಯ ಕಾಡುಹಣ್ಣುಗಳು, ಔಷಧಿ ಸಸ್ಯಗಳು ಬೆಳೆಯುತ್ತಿದ್ದವು. ಮಳೆಗಾಲದಲ್ಲಿ ಇದೇ ಕಾಡುಗಳಿಂದ ಅಡುಗೆಗೆ ತರಕಾರಿ, ಸೊಪ್ಪುಗಳನ್ನು ಬಳಸುತ್ತಿದ್ದರಲ್ಲದೆ, ಜ್ವರ, ಶೀತವಾದರೆ ಇಲ್ಲಿ ಸಿಗುವ ಸಸ್ಯಗಳಿಂದಲೇ ಕಷಾಯ ತಯಾರಿಸಿ ಕುಡಿದು ಕಾಯಿಲೆ ವಾಸಿ ಮಾಡಿಕೊಳ್ಳುತ್ತಿದ್ದರು. ಎಲ್ಲೆಡೆ ತೋಟಗಳಾಗಿದ್ದು, ಮರದಲ್ಲಿ ಸಿಗುವ ಮರಕೆಸುವಿನ ಪ್ರಮಾಣವೂ ಕಡಿಮೆಯಾಗುತ್ತಿದೆ.

ಕೆಸು ಎಲೆಯಿಂದ ಮಾಡುವ ಪತ್ರೊಡೆಗೆ ಮರ ಕೆಸು ಅತ್ಯುತ್ತಮ. ಗ್ರಾಮೀಣ ಜನ ಮರ ಹತ್ತಿ ಎಲೆ ಕೊಯ್ದು ಪತ್ರೊಡೆ ಮಾಡುತ್ತಾರಾದರೂ, ಇತ್ತೀಚಿನ ವರ್ಷಗಳಲ್ಲಿ ಅದು ಕಡಿಮೆಯಾಗುತ್ತಿರುವುದರಿಂದ ನಗರ ವಾಸಿಗಳ ಬೇಡಿಕೆ ಈಡೇರಿಸಲು ಪಕ್ಕದ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ವ್ಯಾಪಾರಿಗಳೂ ಮುಂದಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪೂರ್ವ ಭಾಗದ ಘಟ್ಟದ ಇಳಿಜಾರು ಪ್ರದೇಶದ ಕಾಡುಗಳಲ್ಲಿ, ಕೊಡಗು ಜಿಲ್ಲೆಯಲ್ಲಿ ಸಿಗುತ್ತಿರುವ ಮರ ಕೆಸುವನ್ನು ಕತ್ತರಿಸಿ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಾರೆ. ವಿಶೇಷವೆಂದರೆ, ಪೇಟೆಯಲ್ಲಿ ಮರ ಕೆಸು ಎಲೆ ಸಿಗುತ್ತದೆ ಎಂದು ಗೊತ್ತಾದ ಕಾರಣ ಹಳ್ಳಿಯವರು ಕೂಡಾ ನಗರಕ್ಕೆ ಬಂದಾಗಲೇ ಒಂದಷ್ಟು ಖರೀದಿಸಿಕೊಂಡು ಹೋಗುತ್ತಾರೆ. ಹಳ್ಳಿಯಲ್ಲಿ ಬೆಟ್ಟ, ಗುಡ್ಡ ಏರಿ ಎಲೆ ಹುಡುಕುವ ಶ್ರಮವೂ ಉಳಿಯುತ್ತದೆ. ಹಳ್ಳಿಗಳಿಗೆ ಹೋಗಿ ಎಲೆ ಹುಡುಕಿ ತರುವ ವ್ಯವಧಾನ, ಸಮಯ ನಮ್ಮಲ್ಲಿಲ್ಲ. ನಗರದ ಮಾರುಕಟ್ಟೆಯಲ್ಲೇ ಸಿಗುವ ಕಾರಣ ನಮ್ಮ ಆಸೆ ಈಡೇರುತ್ತದೆ ಎಂದು ಮಡಿಕೇರಿಯ ಶ್ರೀದೇವಿ ಹೇಳಿದರು.

ಮರಕೆಸುವಿನ ಪತ್ರೊಡೆಯ ರುಚಿ ಬಲ್ಲವರು ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಿಂದ ಮರಕೆಸುವಿನ ಎಲೆಗಳನ್ನು ಸಂಗ್ರಹಿಸಿ ಸೇವಿಸುತ್ತಾರೆ. ಮಳೆಗಾಲದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಬೇಕೆನ್ನುವ ಸಂಪ್ರದಾಯ ಆರೋಗ್ಯ ಕಾಪಾಡುತ್ತಿದೆ
ಡಾ.ಶುಭಾ ವೈದ್ಯೆ.

ಪತ್ರೊಡೆ ಮಾಡೋದು ಹೇಗೆ?:

ಕೆಸುವಿನ ಎಲೆಗಳನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಹಚ್ಚಿ ಅದನ್ನು ಅಕ್ಕಿಯ ಹಿಟ್ಟಿನೊಂದಿಗೆ ಕಲಸಿ ರುಚಿಗೆ ಬೇಕಾದ (ಜೀರಿಗೆ ಮೆಣಸು ಮತ್ತಿತರ ಸಾಂಬಾರ ಪದಾರ್ಥ) ವಸ್ತು ಹಾಕುತ್ತಾರೆ. ಬಳಿಕ ಅದನ್ನು ಬಾಳೆ ಎಲೆಯಲ್ಲಿ ಕಟ್ಟಿ ಶಾಖದಲ್ಲಿ ಬೇಯಿಸಲಾಗುತ್ತದೆ. ನಂತರ ಅದನ್ನು ಮಧ್ಯಮ ಗಾತ್ರಕ್ಕೆ ಕತ್ತರಿಸಿ ಪ್ರತ್ಯೇಕ ಮಸಾಲೆಯೊಂದಿಗೆ ಬೆರೆಸಿ ಒಂದೆರಡು ಕುದಿಯವರೆಗೆ ಬೇಯಿಸಲಾಗುತ್ತದೆ. ಆಗ ಪತ್ರೊಡೆ ಸಿದ್ಧ. ಇನ್ನೊಂದು ಶೈಲಿಯ ಪತ್ರೊಡೆಯನ್ನು ಪ್ರತ್ಯೇಕ ಮಸಾಲೆಯಲ್ಲಿ ಬೇಯಿಸುವ ಕ್ರಮವಿಲ್ಲ. ಇಲ್ಲಿ ಕೆಸುವಿನ ಎಲೆಗೆ ಮಸಾಲೆ ಹಚ್ಚಿ ಅದನ್ನೇ ಹಲವು ಪದರಗಳಲ್ಲಿ ಸುತ್ತಿ ಬೇಯಿಸಿದ ಬಳಿಕ ಕತ್ತರಿಸಿ ತಿನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.