ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಟಿಕೊಪ್ಪ | ಬ್ರೆಸ್‌ಲೆಟ್‌ ಹಿಂತಿರುಗಿಸಿದ ಮಹಿಳೆ

Published 26 ನವೆಂಬರ್ 2023, 14:48 IST
Last Updated 26 ನವೆಂಬರ್ 2023, 14:48 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಾಲಯದ ಬಳಿ ಸಿಕ್ಕಿದ ಚಿನ್ನದ ಬ್ರೆಸ್‌ಲೆಟ್‌ ಅನ್ನು ಪಟ್ಟಣದಲ್ಲಿರುವ ಶ್ರೀ ರಾಮ ಕ್ಯಾಂಟೀನ್ ಮಾಲೀಕರು ಹಾಗೂ ಪಂಪ್ ಹೌಸ್ ರಸ್ತೆಯ ನಿವಾಸಿಯಾಗಿರುವ ಪಿ. ರಾಮು ಅವರ ಪತ್ನಿ ಇಂದಿರಾ  ಹಿಂತಿರುಸಿ ಪ್ರಮಾಣಿಕತೆ ಮೆರೆದಿದ್ದಾರೆ.

ಶನಿವಾರ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಬಂದಿದ್ದ ಹರೀಶ್ ಎಂಬುವವರು ತಮ್ಮ ಕೈಯಲ್ಲಿದ್ದ ಬ್ರೆಸ್‌ಲೆಟ್‌ ಕಳೆದುಕೊಂಡಿದ್ದರು. ಇದೇ ವೇಳೆ ದೇವಾಲಯಕ್ಕೆ ಬಂದಿದ್ದ ಇಂದಿರಾ ಅವರಿಗೆ ಸಿಕ್ಕಿದ್ದು, ಕೆಲವರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು.

ಇದರಿಂದ ವಿಚಲಿತರಾದ ಹರೀಶ್ ಅವರು ದೇವಾಲಯದ ಸುತ್ತ ಹುಡುಕಾಡಿ ಹಿಂತಿರುಗಿದ್ದಾರೆ. ನಂತರ ಸ್ಥಳೀಯ ವಾಟ್ಸ್ ಆಫ್ ಗುಂಪಿನಲ್ಲಿ ಬ್ರಾಸ್ ಲೇಟ್ ಕಳೆದುಹೋಗಿರುವ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಹರೀಶ್ ಅವರ ಸಂಖ್ಯೆಗೆ ಕರೆ ಮಾಡಿ ದೇವಾಲಯದ ಮುಂಭಾಗದಲ್ಲೇ ಅದನ್ನು ಹಿಂತಿರುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT