ಗುರುವಾರ , ಮೇ 13, 2021
22 °C

ದೇವರಪುರ: ಮೂರು ಹಸುಗಳ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಣಿಕೊಪ್ಪಲು (ಕೊಡಗು): ತಿತಿಮತಿ ಸಮೀಪದ ದೇವರಪುರ ಪಂಚಾಯಿತಿಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್‌ನಲ್ಲಿ ಮೂರು ಹಸುಗಳನ್ನು ಗುಂಡು ಹೊಡೆದು, ಕತ್ತಿನ ಭಾಗವನ್ನು ಕೊಯ್ದು ಸಾಯಿಸಲಾಗಿದೆ.

ಮಾಂಸಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಸುಗಳ ಕಳೇಬರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಹಸುಗಳು ಕಳ್ಳಿಚಂಡ ಪುಣಚ್ಚ, ಕಳ್ಳಿಚಂಡ ಗಣಪತಿ ಹಾಗೂ ಸುಬ್ರ ಅವರಿಗೆ ಸೇರಿವೆ. ಭಾನುವಾರ ಸಂಜೆ ಆರು ಗಂಟೆ ಸಮಯದಲ್ಲಿ ಎಸ್ಟೇಟ್‌ ಒಳಗೆ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವುದಿನಗಳಿಂದ ದೇವರಪುರ ತಿತಿಮತಿ ಭಾಗದಲ್ಲಿ ಹಸುಗಳ ಕಳವು ಹೆಚ್ಚಾಗಿದೆ. ಈಚೆಗೆ ಕೈಕೇರಿ ಗ್ರಾಮದ ಗುಡ್ಡೆಮನೆ ಪ್ರಾಣೇಶ್ ಅವರು ಹಸು ಕಾಣೆಯಾಗಿತ್ತು ಎಂದು ದೂರು ನೀಡಿದ್ದರು.

ಘಟನಾ ಸ್ಥಳಕ್ಕೆ ಸಿಪಿಐ ಜಯರಾಮ್ ಹಾಗೂ ಎಸ್ಐ ಸುಬ್ಬಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು