ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹುಲಿ– ಮಾನವ ಸಂಘರ್ಷ ದಿನ ಕಳೆದಂತೆ ಹೆಚ್ಚುತ್ತಿದೆ. ಹುಲಿಗಳು ತಮ್ಮ ಆವಾಸಸ್ಥಾನದಿಂದ ಹೊರ ಬಂದು ಕಾಡಂಚಿನ ಗ್ರಾಮಗಳ ಜಾನುವಾರುಗಳ ಮೇಲೆ ದಾಳಿ ನಡೆಸುವ ಪ್ರಕರಣಗಳು ಏರಿಕೆಯಾಗುತ್ತಿವೆ. ಅರಣ್ಯ ಇಲಾಖೆ ಶತಪ್ರಯತ್ನ ನಡೆಸಿದರೂ ಹುಲಿಗಳ ಚಲನವಲನಗಳು ಜನವಸತಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆಡೆ ಮಾಡಿದೆ.

ವಿಶೇಷವಾಗಿ, ದಕ್ಷಿಣ ಕೊಡಗಿನಲ್ಲಿ ಹುಲಿ– ಮಾನವ ಸಂಘರ್ಷ ಹೆಚ್ಚಿದೆ. 2023–24ನೇ ಸಾಲಿನಲ್ಲಿ 38 ಜಾನುವಾರುಗಳನ್ನು ಹುಲಿಗಳನ್ನು ಕೊಂದು ಹಾಕಿದ್ದು, ₹ 9.92 ಲಕ್ಷ ಪರಿಹಾರ ನೀಡಲಾಗಿತ್ತು. 2024–25ನೇ ಸಾಲಿನಲ್ಲಿ 57 ಜಾನುವಾರುಗಳು ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿವೆ. ಒಟ್ಟು ₹ 15.90 ಲಕ್ಷ ಪರಿಹಾರ ನೀಡಲಾಗಿದೆ. ಪ್ರಸಕ್ತ ವರ್ಷ ಏಪ್ರಿಲ್ 1ರಿಂದ ಇಲ್ಲಿಯವರೆಗೆ 18 ಜಾನುವಾರುಗಳು ಹುಲಿ ದಾಳಿಗೆ ಸಿಲುಕು ಮೃತಪಟ್ಟಿವೆ. ಎಲ್ಲರಿಗೂ ಪರಿಹಾರ ವಿತರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಂಕಿ, ಅಂಶಗಳು ಹೇಳುತ್ತವೆ.

ದಕ್ಷಿಣ ಕೊಡಗಿಗೆ ವ್ಯಾಪಿಸಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ 142 ಹುಲಿಗಳಿವೆ. ಮತ್ತೊಂದು ಕಡೆ ಬ್ರಹ್ಮಗಿರಿ, ತಲಕಾವೇರಿ ವನ್ಯಧಾಮವೂ ಹುಲಿಗಳ ಆವಾಸಸ್ಥಾನವಾಗಿವೆ. ಹೀಗಾಗಿ, ಅನೇಕ ಕಾರಣಗಳಿಂದ ಹುಲಿಗಳು ಜನವಸತಿ ಪ್ರದೇಶಗಳತ್ತ ಬರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎನಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಸೀಮಾ, ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹುಲಿ– ಮಾನವ ಸಂಘರ್ಷ ತಡೆಗೆ ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಡ್ರೋಣ್ ಅನ್ನೂ ಬಳಕೆ ಮಾಡಲಾಗುತ್ತಿದೆ. 2 ಗಾಯಗೊಂಡ ಹುಲಿಗಳಿಗೆ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಧಾಮದಲ್ಲಿ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿದೆ’ ಎಂದು ಹೇಳಿದರು.

ನಾಗರಹೊಳೆಯಲ್ಲಿ ವಿಶ್ವ ಹುಲಿ ದಿನಾಚರಣೆ ಇಂದು

ನಾಗರಹೊಳೆ ಹುಲಿ ರಕ್ಷಿತಾರಣ್ಯದ ವತಿಯಿಂದ ವಿಶ್ವ ಹುಲಿ ದಿನಾಚರಣೆ ಪ್ರಯುಕ್ತ ಜುಲೈ 29ರಂದು 2 ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹುಣಸೂರಿನ ವೀರನಹೊಸಹಳ್ಳಿಯಲ್ಲಿ 2 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಎಚ್.ಡಿ.ಕೋಟೆಯಲ್ಲಿರುವ ಕಬಿನಿ ಜಲಾಶಯದ ಸಮೀಪ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಗುತ್ತದೆ ಎಂದು ನಾಗರಹೊಳೆಯ ಹುಲಿ ಯೋಜನಾ ನಿರ್ದೇಶಕಿ ಸೀಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಟ್ಟಿಗೆಗಳನ್ನು ರಕ್ಷಣಾತ್ಮಕಾಗಿ ನಿರ್ಮಿಸಲು ಬೇಕಿದೆ ಸಹಾಯಧನ

ಹುಲಿ–ಮಾನವ ಸಂಘರ್ಷ ಹೆಚ್ಚಿರುವ ಭಾಗದ ಎಲ್ಲಾ ರೈತರಿಗೂ ಹುಲಿಗಳಿಂದ ರಕ್ಷಣೆ ಇರುವಂತಹ ಕೊಟ್ಟಿಗೆಗಳನ್ನು ನಿರ್ಮಿಸಲು ಸರ್ಕಾರ ಸಹಾಯಧನ ನೀಡಬೇಕಿದೆ. ಈ ಮೂಲಕ ಕೊಟ್ಟಿಗೆಗೆ ಬಂದು ದನಕರುಗಳ ಮೇಲೆ ಹುಲಿ ದಾಳಿ ನಡೆಸುವುದನ್ನು ತಪ್ಪಿಸಬಹುದಾಗಿದೆ. ಈಗಾಗಲೇ ಇಂತಹದ್ದೊಂದು ಚಿಂತನೆ ವಿರಾಜಪೇಟೆ ವಲಯದ ಅರಣ್ಯಾಧಿಕಾರಿಗಳಲ್ಲಿ ಮೂಡಿದೆ. ಇಂತಹದ್ದೊಂದು ಪ್ರಸ್ತಾವ ಸಲ್ಲಿಸುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ವಿರಾಜಪೇಟೆ ವಲಯದಲ್ಲಿ ₹ 2 ಲಕ್ಷ ಮೀಸಲು ಹಣ

ಹುಲಿ ದಾಳಿಗೆ ಸಿಲುಕಿ ಮೃತಪಡುವ ಜಾನುವಾರುಗಳ ಮಾಲೀಕರಿಗೆ ನೀಡಲೆಂದೇ ವಿರಾಜಪೇಟೆ ವಲಯದಲ್ಲಿ ₹ 2 ಲಕ್ಷ ಮೀಸಲು ನಿಧಿಯನ್ನು ಇಟ್ಟುಕೊಳ್ಳಲಾಗಿದೆ. ಜಾನುವಾರು ಮೃತಪಟ್ಟ ಕೂಡಲೇ ಸಂಬಂಧಪಟ್ಟ ಜಾನುವಾರು ಮಾಲೀಕರಿಗೆ ಪರಿಹಾರದ ಹಣ ನೀಡಲಾಗುತ್ತದೆ ಎಂದು ವಿರಾಜಪೇಟೆಯ ಡಿಸಿಎಫ್ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲಿ–ಮಾನವ ಸಂಘರ್ಷ ತಡೆಗೆ 17 ತಂಡ

ವಿರಾಜಪೇಟೆ ವಲಯದಲ್ಲಿ ಹುಲಿ– ಮಾನವ ಸಂಘರ್ಷ ತಡೆಗೆಂದೇ 17 ತಂಡಗಳನ್ನು ರಚಿಸಲಾಗಿದೆ. 3 ಹುಲಿಗಳ ಸೆರೆಗೆ ಅರಣ್ಯಾಧಿಕಾರಿಗಳು ಈಗಾಗಲೇ ಸರ್ಕಾರದ ಅನುಮತಿಯನ್ನೂ ಪಡೆದಕೊಂಡಿದ್ದಾರೆ. ಆದರೆ ಆ ನಿರ್ದಿಷ್ಟ ಹುಲಿಗಳು ಈಗ ಪತ್ತೆಯಾಗುತ್ತಿಲ್ಲ. ಬದಲಿಗೆ ಹೊಸ ಹೊಸ ಹುಲಿಗಳು ಬಂದು ಹೋಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಹುಲಿ ಬರುವುದಾದರೂ ಏಕೆ?

ಇತರ ಪ್ರಾಣಿಗಳೊಂದಿಗೆ ಕಾದಾಟಕ್ಕೆ ಇಳಿದು ಗಾಯಗೊಂಡ ಹುಲಿ ಸಾಮಾನ್ಯವಾಗಿ ಕಾಡಿನಿಂದ ಹೊರಬರುತ್ತವೆ. ಸಂಗಾತಿಯನ್ನು ಅರಸಿ ಹಾಗೂ ವಯಸ್ಸಾದ ಹುಲಿಗಳು ಕಾಡಿನಿಂದ ಆಚೆ ಬರುತ್ತವೆ. ಕಾಡಂಚಿನಲ್ಲಿ ಮೇಯುತ್ತಿರುವ ಜಾನುವಾರುಗಳು ಇಂತಹ ಹುಲಿಗಳಿಗೆ ಸುಲಭದ ತುತ್ತಾಗುತ್ತವೆ. ಇಲ್ಲವೇ ಕೊಟ್ಟಿಗೆಯಲ್ಲಿರುವ ದನಕರುಗಳೂ ಇವುಗಳಿಗೆ ಆಹಾರವಾಗುತ್ತವೆ. ಹಾಗಾಗಿ ಕಾಡಂಚಿನಲ್ಲಿ ದನಕರುಗಳನ್ನು ಮುಕ್ತವಾಗಿ ಮೇಯಲು ಬಿಡದೇ ಹುಲಿ ಪ್ರವೇಶಿಸಲು ಸಾಧ್ಯವಾಗದ ರೀತಿಯಲ್ಲಿ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಲ್ಲಿ ಜಾನುವಾರುಗಳ ಪ್ರಾಣಗಳನ್ನು ಉಳಿಸುವ ಅವಕಾಶಗಳಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಹುಲಿಗಳ ಚಲನವಲನ ಕಂಡ ಕೂಡಲೇ ಜನರು ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟು ಸಹಕರಿಸಬೇಕು. ಜಾನುವಾರುಗಳನ್ನು ರಕ್ಷಣಾತ್ಮಕವಾಗಿ ಕಣ್ಣಳತೆಯಲ್ಲೇ ಮೇಯಿಸುವುದು ಉತ್ತಮ
–ಜಗನ್ನಾಥ್, ವಿರಾಜಪೇಟೆ ವಲಯದ ಡಿಸಿಎಫ್

ನಾಗರಹೊಳೆಯಲ್ಲಿ 142 ಹುಲಿಗಳಿವೆ. ಅಸಹಜ ಸಾವಿನ ಪ್ರಕರಣಗಳು ಇಲ್ಲಿ ನಡೆದಿಲ್ಲ.
–ಸೀಮಾ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.