ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ | ಕಾಡಾನೆ ಉಪಟಳ: ಬೆಳೆ ನಷ್ಟ

Published 1 ಜುಲೈ 2024, 13:28 IST
Last Updated 1 ಜುಲೈ 2024, 13:28 IST
ಅಕ್ಷರ ಗಾತ್ರ

ಸಿದ್ದಾಪುರ: ಬೆಟ್ಟದಕಾಡು ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಭಾನುವಾರ ರಾತ್ರಿ ವೇಳೆ ಮನೆಯ ಅಂಗಳಕ್ಕೆ ಬಂದು ಕಾಡಾನೆಗಳು ದಾಂಧಲೆ ನಡೆಸಿದ ಘಟನೆ ನಡೆದಿದೆ.

ನೆಲ್ಯಹುದಿಕೇರಿ ಗ್ರಾಮದ ಸನ್‌‌‌ರೈಸ್ ಎಸ್ಟೇಟ್‌‌‌ಗೆ ಬಂದ ಕಾಡಾನೆಗಳು ಮನೆಯ ಅಂಗಳದ ಹೂ ಕೊಂಡ, ಇತರೆ ಸಾಮಾಗ್ರಿಗಳನ್ನು ನಾಶ ಮಾಡಿವೆ. ಗ್ರಾಮದ ನಿವಾಸಿ ಕಾವೇರಪ್ಪ ಎಂಬುವರ ತೋಟದ ಮನೆ ಅಂಗಳಕ್ಕೆ ಬಂದಿರುವ ಕಾಡಾನೆಗಳು ನೀರಿನ ತೊಟ್ಟಿ, ಹೂ ಕುಂದಗಳನ್ನು ನಾಶ ಪಡಿಸಿವೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳು ಮನೆಯ ಸಮೀಪದಲ್ಲೇ ಘೀಳಿಡುತ್ತಿದ್ದು, ಮನೆಯ ಮಂದಿ ಭಯಭೀತರಾಗಿದ್ದಾರೆ.

ಕಾಡಾನೆಗಳ ಹಾವಳಿಯಿಂದ ಬೆಳೆಗಾರರು ಹಾಗೂ ಕಾರ್ಮಿಕರು ಆತಂಕಕ್ಕೆ ಸಿಲುಕಿದ್ದಾರೆ. ಮಳೆಯ ವೇಳೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆ ಶೀಘ್ರದಲ್ಲಿ ಕಾಡಿಗೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT