ಗೋಣಿಕೊಪ್ಪಲು: ಪಟ್ಟಣದ ನೂತನ ಬಡಾವಣೆಗಳಲ್ಲಿ ಗ್ರಾಮ ಪಂಚಾಯಿತಿ ನಿಯಮ ಉಲ್ಲಂಘಿಸಿ ನಿವೇಶನ ಹಂಚ ಲಾಗಿದೆ ಎಂದು ಸಾರ್ವಜನಿಕರು ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಆರೋಪಿಸಿದರು.

ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ನೂತನ ಬಡಾವಣೆಗಳಲ್ಲಿ ಮೂಲ ಸೌಕರ್ಯ ಗಳಿಲ್ಲದೆ ಅನೇಕ ಸಮಸ್ಯೆಗಳು ಎದುರಾಗಿವೆ. ಬಡಾವಣೆ ನಿರ್ಮಿಸುವಾಗ ಮೂಲಸೌಕರ್ಯ ಒದಗಿಸಲು ಗ್ರಾ.ಪಂ. ಗೆ ಶೇ.40ರಷ್ಟು ಜಾಗ ಬಿಟ್ಟು ಕೊಡಬೇಕು ಎಂಬ ನಿಯಮವಿದೆ. ಆದರೆ ಪಟ್ಟಣದ ಯಾವುದೇ ಬಡಾವಣೆಗಳಲ್ಲಿ ಇದನ್ನು ಪಾಲಿಸಲಾಗಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಸಭೆ ನಿಯಮವನ್ನು ಮರುಪರಿಶೀಲಿಸುವ ನಿರ್ಣಯ ಕೈಗೊಂಡಿತು.

ನೋಡಲ್ ಅಧಿಕಾರಿ ನಾಯ್‌ಕೋಡ್ ಮಾತನಾಡಿ `ನಿಮಯದ ಪ್ರಕಾರ ಶೇ.40ರಷ್ಟು ಭೂಮಿಯನ್ನು ಬಡಾವಣೆಯ ಮಾಲೀಕರು ಗ್ರಾ.ಪಂ.ಗೆ ಬಿಟ್ಟುಕೊಡದಿದ್ದರೆ ವಿದ್ಯುತ್, ಪೈಪ್‌ಲೈನ್ ನಿರ್ಮಾಣ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ತಾವೇ ಒದಗಿಸಿ ಕೊಡಬೇಕು. ಜತೆಗೆ ಶೇ.10ರಷ್ಟು ಜಾಗವನ್ನು ಕಡ್ಡಾಯವಾಗಿ ಗ್ರಾ.ಪಂಗೆ ನೀಡಬೇಕು ಎಂದು ಹೇಳಿದರು. ಈ ಬಗ್ಗೆ ನಡೆದಿರುವ ಲೋಪವನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಕೀರೆಹೊಳೆ ಒತ್ತುವರಿಯಾದ ಬಗ್ಗೆ ಸರ್ವೆಕಾರ್ಯ ಸಮರ್ಪಕವಾಗಿ ನಡೆ ದಿಲ್ಲ ಎಂದು ಸ್ಥಳೀಯ ನಿವಾಸಿ ಟಿ.ಎಲ್ ಶ್ರೀನಿವಾಸ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪೊನ್ನಂಪೇಟೆ ಕಂದಾಯಾ ಧಿಕಾರಿ ಶಿವಶಂಕರ್ ಸರ್ವೆ ಕಾರ್ಯ ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ. ಯಾವುದೇ ಲೋಪ ಕಂಡು ಬಂದಲ್ಲಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸ ಬಹುದು ಎಂದರು.

ಸ್ಥಳೀಯ ಹಿಂದೂ ರುದ್ರಭೂಮಿ ಯಲ್ಲಿ ಕಸ ಹಾಕಲು 6 ಹಂತದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರಾದ ಡಾಲು. ಅರವಿಂದ್ ಕುಟ್ಟಪ್ಪ, ನಾರಾಯಣಸ್ವಾಮಿ ನಾಯ್ಡು ದೂರಿದರು. ಬಿಜೆಪಿ ಮುಖಂಡ ಕೆ.ಬಿ.ಗಿರೀಶ್ ಗಣಪತಿ ಮಾತನಾಡಿ ಮಾಂಸ ಮಾರುಕಟ್ಟೆಯಲ್ಲಿ ಹಳೆಯ ಮತ್ತು ಕಳಪೆ ಗುಣಮಟ್ಟದ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯಾ ಧಿಕಾರಿ ಡಾ. ರಮೇಶ್ ಮಾಂಸ ಪರೀ ಶೀಲನೆ ನಡೆಸಿ ಮೊಹರು ಹಾಕಲಾ ಗುತ್ತಿದೆ. ಕಸಾಯಿಖಾನೆ ಇಲ್ಲದ್ದರಿಂದ ಹೊರಗಿನಿಂದ ಬರುವ ಮಾಂಸದಲ್ಲಿ ಗುಣಮಟ್ಟ ರಕ್ಷಿಸಲು ಕಾಣಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಸಾಯಿಖಾನೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಮಳಿಗೆಗಳನ್ನು ಕೃಷಿಯೇತರರಿಗೆ ನೀಡುವ ಬದಲು ಕೃಷಿ ಬಳಕೆದಾರರಿಗೆ ನೀಡಬೇಕು ಎಂದು ತಾ.ಪಂ.ಮಾಜಿ ಅಧ್ಯಕ್ಷ ವಿ.ಎ.ವೆಂಕಟೇಶ್ ಒತ್ತಾಯಿ ಸಿದರು. ಈ ಬಗ್ಗೆ ಚರ್ಚೆ ನಡೆದು ಕೃಷಿಯೇತರರಿಂದ ಪಡೆದ ಠೇವಣಿ ಹಣ ವನ್ನು ಹಿಂದಿರುಗಿಸಿ ಕೃಷಿ ಚಟುವಟಿಕೆಗೆ ಮಳಿಗೆಗಳನ್ನು ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಕಸ ವಿಲೇವಾರಿ ಬಗ್ಗೆ ಸ್ಥಳೀಯ ಉದ್ಯಮಿ ಪೊನ್ನಿಮಾಡ ಸುರೇಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಾಯ್‌ಕೋಡ್ ಎಲ್ಲಿ ಕಸ ಹಾಕಿದರು ಜನತೆ ಜನತೆ ಅದನ್ನು ವಿರೋಧಿಸು ತ್ತಿದ್ದಾರೆ. ಇದಕ್ಕೆ ಸೂಕ್ತ ಸ್ಥಳವನ್ನು ತಾವೇ ದೊರಕಿಸಿಕೊಡಿ ಎಂದು ಗ್ರಾ.ಪಂ.ಉಪಾಧ್ಯಕ್ಷೆ ಬೋಜಮ್ಮ, ಸದಸ್ಯ ಸಿ.ಕೆ.ಬೋಪಣ್ಣ ಅವರಿಗೆ ಸೂಚಿಸಿದರು. ಗ್ರಾ.ಪಂ.ಪಿಡಿಒ ಚಂಗಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.