ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರಮ ಹುದ್ದೆಗಳಲ್ಲಿ ಮುಂದುವರೆಸಲು ಮನವಿ

Last Updated 5 ಜನವರಿ 2020, 13:33 IST
ಅಕ್ಷರ ಗಾತ್ರ

ಕೋಲಾರ: ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆಒಸಿ ನೌಕರರ ಸೇವೆಯನ್ನು ಪರಿಗಣಿಸಿ ಸಕ್ರಮ ಹುದ್ದೆಗಳಲ್ಲಿ ಮುಂದುವರೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜೆಒಸಿ ನೌಕರರ ಸಂಘದ ಸಂಘದ ಪ್ರತಿನಿಧಿಗಳು ವಿಧಾನ ಪರಿಷತ್ ಪುಟ್ಟಣ್ಣ ಅವರಿಗೆ ಭಾನುವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಸಂಘದ ರಾಜ್ಯ ಘಟಕದ ಪ್ರತಿನಿಧಿ ಶರಣಪ್ಪಗುಡ್ಡೆ ಮಾತನಾಡಿ, ‘ಜೆಒಸಿ ಪದವಿ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸೇವೆಯನ್ನು ಸಕ್ರಮಗೊಳಿಸಿಲ್ಲ, ಸೇವೆಯನ್ನು ಪರಿಗಣಿಸಿ ಅಕ್ರಮಗೊಳಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ೨5 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಇತರೆ ನೌಕರರ ಸಮಾನ ಅವಕಾಶ ನೀಡಬೇಕು. ಯಾರಿಗೇನು ಕಡಿಮೆ ಸೇವೆ ಸಲ್ಲಿಸುತ್ತಿಲ್ಲ. ಕಡಿಮೆ ವೇತನಕ್ಕೂ ಕೆಲಸ ಮಾಡುತ್ತಿರುವವರು ಇದ್ದಾರೆ’ ಎಂದು ಹೇಳಿದರು.

‘ಜೆಒಸಿ ಪದವಿಯನ್ನು ರದ್ದು ಪಡಿಸಿದಾಗ ರಾಜ್ಯದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದವು. ಆನಂತರ ನೌಕರರ ಸತತ ಹೋರಾಟದಿಂದ ನ್ಯಾಯಾಲಯದ ಆದೇಶದ ಮೇರೆಗೆ ಆಗಿನ ಸರ್ಕಾರ ಸರ್ಕಾರ ೨೦೧೨ರಲ್ಲಿ ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಿ ಸೇವಾ ಸಕ್ರಮಾತಿ ಮಾಡಿದ್ದು, ನಮ್ಮ ಬದುಕಿಗೆ ಭದ್ರತೆ ಮಾಡಿಕೊಟ್ಟರು’ ಎಂದು ತಿಳಿಸಿದರು.

‘ಹಿಂದಿನ ಸೇವೆಯನ್ನು ಮಾತ್ರ ಕೇಳುತ್ತಿದ್ದೆವೆ, ಯಾವುದೇ ಆರ್ಥಿಕ ಸೌಕರ್ಯ ಕೇಳುತ್ತಿಲ್ಲ. ಇದೀಗ ಕೆಲವರಿಗೆ ಒಂದೆರಡು ವರ್ಷ ಸೇವಾವಧಿ ಸಿಗುವುದರಿಂದ ಬದುಕು ಅತಂತ್ರವಾಗಿದೆ, ಪಿಂಚಿಣಿ ಸೌಕರ್ಯವೂ ಸಿಗುವುದಿಲ್ಲ, ಇದರಿಂದಾಗಿ ನಮ್ಮ ಹಿಂದಿನ ಸೇವೆ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

‘ಅಧಿಕ ಕಾಲ ಸಂಭಾವನೆಯ ಆಧಾರದ ಮೇಲೆ ಕೆಲಸ ಮಾಡಿದ ಜೆಒಸಿ ನೌಕರರು ಇದೀಗ ಸಕ್ರಮಗೊಂಡಿದ್ದು, ಹಲವಾರು ಮಂದಿ ನಿವೃತ್ತಿ ಹಂಚಿನಲ್ಲಿದ್ದಾರೆ. ಸೇವೆಯನ್ನು ಮಾತ್ರ ಪರಿಗಣಿಸಿರವುದರಿಂದ ನಿವೃತ್ತಿ ವೇತನ, ಬಡ್ತಿ ಯಾವುದೂ ಸಿಗುದಿಲ್ಲ, ನಂತರದ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂಬ ಆತಂಕ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನೌಕರರ ಸಂಘದ ಮುಖಂಡರಾದ ಜೆ.ಮಣಿಕಂಠ, ಶಶಿಧರ್, ಬಿ.ಶ್ರೀನಿವಾಸ್,ರೇಣುಕಾ, ಸುಧಾ, ಕೆ.ಆರ್.ವೆಂಕಟೇಶ್, ರಾಮಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT