ಬಂಗಾರಪೇಟೆ: ಹೂವಿನ ಬೆಲೆ ಏಕಾಏಕಿ ಕುಸಿದ ಕಾರಣ ಸೋಮವಾರ ಮಾರುಕಟ್ಟೆಗೆ ತಂದಿದ್ದ ಹೂವುಗಳನ್ನು ಬೆಳೆಗಾರರು ರಸ್ತೆ ಬದಿ ಚೆಲ್ಲಿ ಹೋದರು.

ಸಾಲು, ಸಾಲು ಹಬ್ಬಗಳು ಮುಗಿಯುತ್ತಿದ್ದಂತೆ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ. ಹೂವು ಕೀಳುವ ಕೂಲಿ ವೆಚ್ಚ, ಸಾಗಾಟ ಭರಿಸಲಾಗದ ಸ್ಥಿತಿ ಬಂದಿದೆ. ಹೂವು ಬೆಳೆಯಲು ಮಾಡಿದ ಖರ್ಚು ಕೂಡ ಕೈಗೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೂವು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಎಲ್ಲ ಹೂವುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೆ.ಜಿ ಚೆಂಡು ಹೂವು ಬೆಲೆ ₹10, ಸೇವಂತಿಗೆ ₹10–₹20 ಮತ್ತು ಗುಲಾಬಿ ₹30ಕ್ಕೆ ಕುಸಿತ ಕಂಡಿವೆ. ಕೆಲವು ಹೂವು ₹3 ರಿಂದ ₹5ಗೆ ಕೇಳುವವರಿಲ್ಲದಂತಾಗಿದೆ.

ಒಂದು ಎಕರೆ ಚೆಂಡು ಹೂ ಬೆಳೆಯಲು ಬೀಜ, ಸಸಿ, ಗೊಬ್ಬರ, ಕೀಟನಾಶಕ, ಕೂಲಿ ಹಾಗೂ ಸಾಗಾಣಿಕೆ ವೆಚ್ಚ ಸೇರಿ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಆದರೆ, ಈಗಿನ ಬೆಲೆಯಲ್ಲಿ ಹೂ ಕೀಳುವ ಕೂಲಿ ಹಣವೂ ಬರುತ್ತಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.