ಕೋಲಾರ: ಕೆಲ ಗಣತಿದಾರರು ಸಮೀಕ್ಷೆ ಆ್ಯಪ್ಗೆ ಲಾಗಿನ್ ಆಗದೆ ಇರುವುದು, ವಿಳಂಬ ಪ್ರಕ್ರಿಯೆ, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಸಂಬಂಧ ಕಾರಣ ಕೇಳಿ ಜಿಲ್ಲೆಯ ಆರೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ (ಬಿಸಿಎಂ) ಜಿಲ್ಲಾಧಿಕಾರಿ ಎಂ.ಆರ್.ರವಿ ನೋಟಿಸ್ ನೀಡಿದ್ದಾರೆ.

‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆ.22ರಂದು ಪ್ರಾರಂಭವಾಗಿದ್ದು, ಗಣತಿದಾರರು ತಮ್ಮ ವ್ಯಾಪ್ತಿಯಲ್ಲಿ ಮೊಬೈಲ್ ಆ್ಯಪ್ನಲ್ಲಿ ಕಡ್ಡಾಯವಾಗಿ ಲಾಗಿನ್ ಆಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಆದರೆ, ಹಲವು ಗಣತಿದಾರರು ತಮ್ಮ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಲಾಗಿನ್ ಆಗದೆ ಇರುವುದು ಕಂಡುಬಂದಿದೆ’ ಎಂದಿದ್ದಾರೆ.

ಆರು ತಾಲ್ಲೂಕುಗಳ ಒಟ್ಟು 645 ಗಣತಿದಾರರು ತಮಗೆ ವಹಿಸಿದ ಸಮೀಕ್ಷೆ ವ್ಯಾಪ್ತಿಯಲ್ಲಿ ಸೆ.25ರ ಸಂಜೆ 4.30ರವರೆಗೆ ಮೊಬೈಲ್ ಆ್ಯಪ್ನಲ್ಲಿ ಲಾಗಿನ್ ಲಾಗಿನ್ ಆಗಿಲ್ಲ. ಇದರಿಂದಾಗಿ ಈ ಅವಧಿವರೆಗೆ ಸಮೀಕ್ಷೆ ಕಾರ್ಯದಲ್ಲಿ ಕುಂಠಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಸಂಬಂಧ ಕೋಲಾರ ತಾಲ್ಲೂಕಿನ ಬಿಇಒ ಮಧುಮಾಲತಿ ಪಿ., ಬಂಗಾರಪೇಟೆ ತಾಲ್ಲೂಕಿನ ಬಿಇಒ ಶಶಿಕಲಾ ಎಂ.ಕೆ., ಕೆಜಿಎಫ್ ಬಿಇಒ ಅನಿತಾ, ಮಾಲೂರು ಬಿಇಒ ಕೆಂಪಯ್ಯ, ಮುಳಬಾಗಿಲು ಬಿಇಒ ರಾಮಚಂದ್ರಪ್ಪ, ಶ್ರೀನಿವಾಸಪುರ ಬಿಇಒ ಮುನಿವೆಂಕಟ ಲಕ್ಷ್ಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ.

ಇದಲ್ಲದೇ, ಕೋಲಾರದ ಬಿಸಿಎಂ ಅಧಿಕಾರಿ ಮಂಜುಳಾ ಕೆ., ಮಾಲೂರಿನ ಬಿಸಿಎಂ ಅಧಿಕಾರಿ ಅಂಬಿಕಾ ಎಚ್.ಎ., ಮುಳಬಾಗಿಲಿನ ಬಿಸಿಎಂ ಅಧಿಕಾರಿ ನರಸಿಂಹಮೂರ್ತಿ ಕೆ., ಕೆಜಿಎಫ್ನ ಬಿಸಿಎಂ ಅಧಿಕಾರಿ ರಾಜಣ್ಣ ಆರ್.ಎ., ಶ್ರೀನಿವಾಸಪುರದ ಬಿಸಿಎಂ ಅಧಿಕಾರಿ ಪ್ರಸನ್ನ ಎಚ್.ಎಂ., ಬಂಗಾರಪೇಟೆ ಬಿಸಿಎಂ ಅಧಿಕಾರಿ ಅನಿತಾ ವಿ. ಅವರಿಗೆ ನೋಟಿಸ್ ನೀಡಲಾಗಿದೆ.

645 ಗಣತಿದಾರರು ತಮ್ಮ ತಾಲ್ಲೂಕಿನಲ್ಲಿ ಲಾಗಿನ್ ಆಗಿ ಕರ್ತವ್ಯ ನಿಭಾಯಿಸುವಂತೆ ಮಾಡಲು ತಾವು ವಿಫಲರಾಗಿದ್ದಿರಿ. ತಾವು ಸರಿಯಾಗಿ ಮೇಲ್ವಿಚಾರಣೆ ಮಾಡದೆ ನಿರ್ಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಸರ್ಕಾರದ ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ತೋರಿದ್ದೀರಿ. ಹೀಗಾಗಿ, ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಈ ನೋಟಿಸ್ ತಲುಪಿದ 24 ಗಂಟೆಗಳಲ್ಲಿ ಖುದ್ದು ಹಾಜರಾಗಿ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಂ.ಆರ್.ರವಿ, ‘ಸೆ.25ರ ಸಂಜೆವರೆಗೆ ವಿವಿಧ ಕಾರಣಗಳಿಂದ ಸಮೀಕ್ಷೆಯಲ್ಲಿ ಕುಂಠಿತವಾಗಿದೆ. ಅದರಲ್ಲಿ ಇದು ಕೂಡ ಒಂದು ಕಾರಣ. ಗಣತಿದಾರರು ಆ್ಯಪ್ ಬೆಳಿಗ್ಗೆ 9 ಗಂಟೆಯೊಗೆ ಲಾಗಿನ ಆಗಿ ಫೀಲ್ಡ್ಗೆ ಹೋಗಬೇಕು. ಆದರೆ, ಹಲವರು ಇನ್ನೂ ಲಾಗಿನ್ ಆಗಿಲ್ಲ. ಸಮಯ ಸರಿಯಾಗಿ ಸಮೀಕ್ಷೆ ನಡೆಸಲು ಬಂದಿಲ್ಲ. ಈ ಸಂಬಂಧ ತಮಗೆ ನಿಗದಿಪಡಿಸಿದ ಜವಾಬ್ದಾರಿ ನಿಭಾಯಿಸುವಲ್ಲಿ ಬಿಇಒಗಳು ವಿಫಲರಾಗಿದ್ದಾರೆ’ ಎಂದರು.

‘ಸಮೀಕ್ಷೆ ಸೂಪರ್ವೈಸರ್ಗಳು ಬಿಇಒಗೆ ವರದಿ ಮಾಡಬೇಕು. ಬಿಇಒಗಳು ತಹಶೀಲ್ದಾರ್ಗೆ ವರದಿ ನೀಡಬೇಕು. ತಹಶೀಲ್ದಾರ್ ನನಗೆ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಮೀಕ್ಷೆ ಬೆಳವಣಿಗೆ ಕುರಿತು ವರದಿ ನೀಡಬೇಕು. ಈ ರೀತಿ ಜವಾಬ್ದಾರಿ ನಿಗದಿಪಡಿಸಿ ಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕರೆ ಸ್ವೀಕರಿಸದ ಬಿಸಿಎಂ ಜಿಲ್ಲಾ ಅಧಿಕಾರಿ: ಸಮೀಕ್ಷೆ ಕಾರ್ಯದಲ್ಲಿ ವಿಳಂಬ ಕುರಿತು ಮಾಹಿತಿ ಕೇಳಲು ಹಾಗೂ ಗಣತಿದಾರರು ಎದುರಿಸುತ್ತಿರುವ ಸಮಸ್ಯೆ ಕೇಳಲು ಕರೆ ಮಾಡಿದರೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯು ಮೂರು ದಿನಗಳಿಂದ ಪ್ರತಿಕ್ರಿಯಿಸುತ್ತಿಲ್ಲ.

ಗಣತಿದಾರರು ಗೈರು ಹಾಜರಿ ಆಗಿರುವ ಸಾಧ್ಯತೆ | ಲಾಗಿನ್ ಆಗದ ಕಾರಣ ಸಮೀಕ್ಷೆಯಲ್ಲಿ ಕುಂಠಿತ | ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಎಂ.ಆರ್.ರವಿ

645 ಗಣತಿದಾರರು ಸಮೀಕ್ಷೆಗೆ ಗೈರು!

ಕೋಲಾರ ಜಿಲ್ಲೆಯಲ್ಲಿ ಸೆ.25ರ ಸಂಜೆ 4.30ರವರೆಗೆ ಆರು ತಾಲ್ಲೂಕುಗಳ ವ್ಯಾಪ್ತಿಯ ಒಟ್ಟು 645 ಗಣತಿದಾರರು ತಮಗೆ ವಹಿಸಿದ ಸಮೀಕ್ಷೆಯ ವ್ಯಾಪ್ತಿಯಲ್ಲಿ ಮೊಬೈಲ್ ಆ್ಯಪ್ನಲ್ಲಿ ಲಾಗಿನ್ ಆಗದೆ ಇರುವುದು ಕಂಡುಬಂದಿದೆ. ಇದನ್ನು ಗೈರು ಎಂದು ಕೂಡ ಪರಿಗಣಿಸಲಾಗುತ್ತದೆ. ಕೋಲಾರ ತಾಲ್ಲೂಕಿನ 179 ಗಣತಿದಾರರು ಬಂಗಾರಪೇಟೆ ತಾಲ್ಲೂಕಿನ 96 ಗಣತಿದಾರರು ಕೆಜಿಎಫ್ ತಾಲ್ಲೂಕಿನ 88 ಗಣತಿದಾರರು ಮಾಲೂರು ತಾಲ್ಲೂಕಿನ 141 ಗಣತಿದಾರರು ಮುಳಬಾಗಿಲು ತಾಲ್ಲೂಕಿನ 127 ಗಣತಿದಾರರು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 14 ಗಣತಿದಾರರು ಲಾಗಿನ್ ಆಗಿಲ್ಲ. ಇದರಿಂದ ಸಮೀಕ್ಷೆ ಕಾರ್ಯದಲ್ಲಿ ಕುಂಠಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಾರೆ.

5 ದಿನದಲ್ಲಿ 11 ಸಾವಿರ ಮನೆ ಸಮೀಕ್ಷೆ

ಸೆ.22ರಂದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು ಮೊದಲ ನಾಲ್ಕು ದಿನ ವಿಳಂಬವಾಗಿತ್ತು. ಸರ್ವರ್ ಸಮಸ್ಯೆ ಸಮೀಕ್ಷೆ ಆ್ಯಪ್ ತೆರೆದುಕೊಳ್ಳದೆ ಇರುವುದು ಓಟಿಪಿ ಬಾರದಿರುವುದು ಸೇರಿದಂತೆ ವಿವಿಧ ತಾಂತ್ರಿಕ ಅಡಚಣೆ ಕಾರಣ ಈ ರೀತಿ ಆಗಿತ್ತು. ಹೀಗಾಗಿ ಮೊದಲ ಮೂರು ದಿನ ಮೂರು ರೀತಿಯ ಆ್ಯಪ್ಗಳ ಮಾದರಿ ಬಿಟ್ಟಿದ್ದರು. ನಿಗದಿತ ಗುರಿ ಮುಟ್ಟಲು ಸಾಧ್ಯ ಆಗಿರಲಿಲ್ಲ. ಶುಕ್ರವಾರ (ಸೆ.26) ಒಮ್ಮೆಲೇ ಪ್ರಗತಿ ಆಗಿದೆ. ಒಂದೇ ದಿನ ಸುಮಾರು 7 ಸಾವಿರ ಮನೆಗಳ ಸಮೀಕ್ಷೆ ನಡೆದಿದೆ. ಸದ್ಯ ಐದು ದಿನಗಳಲ್ಲಿ 11 ಸಾವಿರಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಎಂ.ಆರ್.ರವಿ ಹೇಳಿದರು.

ಶೇ 95 ಸಮಸ್ಯೆ ಪರಿಹಾರ

ಸಮೀಕ್ಷೆಗೆ ವೇಗ ಸಮೀಕ್ಷೆಯ ಐದನೇ ದಿನ ಶೇ 95ರಷ್ಟು ತಾಂತ್ರಿಕ ಸಮಸ್ಯೆ ಬಗೆಹರಿದಿದ್ದು ಸಮೀಕ್ಷೆಗೆ ವೇಗ ಸಿಕ್ಕಿದೆ. ಗಣತಿದಾರರು ಕೂಡ ಸಮೀಕ್ಷೆಗೆ ಹೊಂದಿಕೊಂಡಿದ್ದಾರೆ ಎಂದು ಎಂ.ಆರ್.ರವಿ ಹೇಳಿದರು. ಜಿಲ್ಲೆಯಲ್ಲಿ ಒಟ್ಟು 4.17 ಲಕ್ಷ ಕುಟುಂಬಗಳಿವೆ. ನಿಗದಿತ ಗುರಿಯಂತೆ ಪ್ರತಿ ದಿನ 34 ಸಾವಿರ ಮನೆಗಳನ್ನು ಸಮೀಕ್ಷೆ ನಡೆಸಬೇಕು. 3471 ಗಣತಿದಾರರು ಇದ್ದಾರೆ. ಪ್ರತಿಯೊಬ್ಬರಿಗೆ ನಿತ್ಯ 10 ಮನೆ ನಿಗದಿಪಡಿಸಲಾಗಿದೆ 15 ದಿನಗಳಲ್ಲಿ ಒಬ್ಬೊಬ್ಬ ಗಣತಿದಾರರಿಗೆ 100ರಿಂದ 120 ಮನೆಗಳ ಸಮೀಕ್ಷೆ ನಡೆಸಲು ಸಿಗಬಹುದು ಎಂದರು. ಸಮೀಕ್ಷೆ ವೇಳೆ ಏನಾದರೂ ತಾಂತ್ರಿಕ ತೊಂದರೆ ಉಂಟಾದರೆ ಮೂರು ಮನೆಗಳ ಮಾಹಿತಿಯನ್ನು ಮಾತ್ರ ಆ್ಯಪ್ನ ಡ್ರಾಫ್ಟ್ನಲ್ಲಿ ಸಂರಕ್ಷಿಸಿಕೊಂಡು ಸಮಸ್ಯೆ ಹೋದ ಮೇಲೆ ನಮೂದು ಮಾಡಲು ಅವಕಾಶವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.