ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ದಾಳಿ ನಿಯಂತ್ರಣಕ್ಕೆ ನಿರಂತರವಾಗಿ ತೊಡಗಿದ್ದಾರೆ. ಹಲವು ದಿನಗಳಿಂದ ಕಾಣಿಸಿಕೊಳ್ಳದ ಆನೆಗಳು ತುಳುನಾಡಿನ ಕಡೆಯಿಂದ ಒಂಟಿ ಆನೆ ಸೋಮವಾರ ರಾತ್ರಿ ಕದರಿನತ್ತ ಗ್ರಾಮದ ಬಳಿ ಕಾಣಿಸಿಕೊಂಡಿದೆ. ಈಗಾಗಲೇ ತಮಿಳುನಾಡಿನ ಕಾಡಿಗೆ ಓಡಿಸಲಾಗಿದೆ.- ನಾಗೇಶ್ ಜಿ, ಉಪ ವಲಯ ಅರಣ್ಯಾಧಿಕಾರಿ, ತೋಪ್ಪನಹಳ್ಳಿ ಅರಣ್ಯ ಉಪ ವಲಯ
ಆನೆ ಹಾವಳಿ ತೀವ್ರವಾಗಿದ್ದು, ತ್ವರಿತವಾಗಿ ಸ್ಪಂದಿಸಲು ಮತ್ತು ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ವಿಶೇಷ ಆನೆ ಕಾರ್ಯಪಡೆ ರಚಿಸಲಿ.
ಮಲ್ಲಿಕಾರ್ಜುನ ರೆಡ್ಡಿ, ಸಮಾಜ ಸೇವಕ
ಆನೆ ದಾಳಿಯಿಂದ ಬೆಳೆ ನಾಶವಾದಾಗ ಬೆಳೆ ಸಾಲ ಮತ್ತು ಜೀವನ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಆನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಲಿ