ಶುಕ್ರವಾರ, 29 ಆಗಸ್ಟ್ 2025
×
ADVERTISEMENT
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಗಣೇಶೋತ್ಸವ; ಯುವಕರ ಸಂಭ್ರಮ

Published : 29 ಆಗಸ್ಟ್ 2025, 5:02 IST
Last Updated : 29 ಆಗಸ್ಟ್ 2025, 5:02 IST
ಫಾಲೋ ಮಾಡಿ
Comments
ಕೋಲಾರದ ಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವದಿಂದ ಆಪರೇಷನ್ ಸಿಂಧೂರ ಸೈನಿಕ್‌ ವೇದಿಕೆ ರಚಿಸಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿದ್ದು ಮುಖಂಡರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು
ಕೋಲಾರದ ಅಖಂಡ ಭಾರತ ವಿನಾಯಕ ಮಹಾಸಭಾ ಗಣೇಶೋತ್ಸವದಿಂದ ಆಪರೇಷನ್ ಸಿಂಧೂರ ಸೈನಿಕ್‌ ವೇದಿಕೆ ರಚಿಸಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿದ್ದು ಮುಖಂಡರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು
ಬಾಲಗಂಗಾಧರ ತಿಲಕ್ ಗಣೇಶ ಸಮಿತಿಯಿಂದ ನಿರ್ಮಿಸಿರುವ ಗಣಪನ ಮೂರ್ತಿ
ಬಾಲಗಂಗಾಧರ ತಿಲಕ್ ಗಣೇಶ ಸಮಿತಿಯಿಂದ ನಿರ್ಮಿಸಿರುವ ಗಣಪನ ಮೂರ್ತಿ
ಧರ್ಮಸ್ಥಳ ದೇಗುಲ ಮಾದರಿ ಮಂಟಪ
ಕೋಲಾರದಲ್ಲಿ ಬಜರಂಗದಳ ಸಂಘಟನೆ ಯುವಕರು ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ನೇತೃತ್ವದಲ್ಲಿ ಧರ್ಮಸ್ಥಳ ದೇಗುಲ ಮಾದರಿ ಮಂಟಪ ಸ್ಥಾಪಿಸಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿರುವುದು ಗಮನ ಸೆಳೆಯುತ್ತಿದೆ. ಧರ್ಮಸ್ಥಳ ವಿರುದ್ಧ ಈಚೆಗೆ ನಡೆದ ಷಡ್ಯಂತ್ರ ಆರೋಪಕ್ಕೆ ಈ ಮಂಟಪ ಮೂಲಕ ತಿರುಗೇಟು ನೀಡಲಾಗಿದೆ ಎಂದು ಮುಖಂಡರು ಹೇಳಿದರು.
ಗಣೇಶ ಮೂರ್ತಿ ವಿಸರ್ಜನೆ
ಇಂದು ನಗರ ಮತ್ತು ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣಪನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಮೆರವಣಿಗೆಗೆ ಸಂಸದ ಮಲ್ಲೇಶ್‌ ಬಾಬು ಮಾಜಿ ಸಂಸದ ಮುನಿಸ್ವಾಮಿ ಮಾಜಿ ಸಚಿವ ವರ್ತೂರು ಪ್ರಕಾಶ್ ಚಾಲನೆ ನೀಡಲಿದ್ದಾರೆ. ಮೆರವಣಿಗೆಯ ನೇತೃತ್ವವನ್ನು ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಹಿಸಿಕೊಂಡಿದೆ. ಈಗಾಗಲೇ ವಿವಿಧ ಸಂಘಟನೆಗಳು ಯುವಕ ಸಂಘಗಳು ವಿವಿಧ ಬಡಾವಣೆಗಳಲ್ಲಿಟ್ಟಿರುವ ಗಣಪನ ಮೂರ್ತಿಗಳನ್ನು ಗಾಂಧಿವನದಿಂದ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಮುಖಂಡರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT