ಬಂಗಾರಪೇಟೆ: ತಾಲ್ಲೂಕಿನ ಒಂಭತ್ತುಗುಳಿ, ಕಾರಮಂಗಲ, ಹುಲಿಬೆಲೆ, ಅಬ್ಬಿಗಿರಿಹೊಸಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆ ಭಾನುವಾರ ನಡೆಯಿತು.

‘ಕೋಮುಲ್ ವಿರುದ್ಧ ನಾನು ಹೋರಾಟ ಮಾಡುತ್ತಿಲ್ಲ. ಎಂ.ವಿ.ಕೃಷ್ಣಪ್ಪ ಅವರನ್ನು ದೇವರಂತೆ ಪೂಜಿಸುತ್ತೇನೆ. ಆದರೆ, ಅವರ ಹೆಸರಿನಲ್ಲಿ ಅಧಿಕಾರ ಅನುಭವಿಸಿ, ಕೋಟ್ಯಾಂತರ ಹಣ ಲೂಟಿ ಮಾಡುತ್ತಿರುವವರ ವಿರುದ್ಧ ನನ್ನ ಹೋರಾಟ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.

‘ಕೋಮುಲ್ ಆಡಳಿತ ಮಂಡಳಿಯಲ್ಲಿ ಭ್ರಷ್ಟಾಚಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಎಲ್ಲಾ ಅಕ್ರಮಗಳನ್ನು ಒಂದೇ ಬಾರಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಶುದ್ಧೀಕರಣ ಮಾಡುತ್ತೇನೆ. ಅದಕ್ಕೆ ಕಾಲಾವಕಾಶ ಬೇಕು. ನನಗೆ ಯಾವ ನಿರ್ದೇಶಕರು ಸಹಕಾರ ನೀಡದಿದ್ದರೂ ಹಾಲು ಉತ್ಪಾದಕರಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುತ್ತೇನೆ’ ಎಂದರು.

ಕೋಮಲ್ ಅಭಿವೃದ್ಧಿ ಹೆಸರಿನಲ್ಲಿ ನೂರಾರು ಕೋಟಿ ಸಾಲವನ್ನು ರೈತರ ಮೇಲೆ ಹೊರಿಸಲಾಗಿದೆ. ಗಡಿ ಭಾಗದಲ್ಲಿ ಖಾಸಗಿ ಡೇರಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.

ಸಭೆಯಲ್ಲಿ ಕೋಮಲ್ ಉಪ ವ್ಯವಸ್ಥಾಪಕ ಡಾ.ಸಿ.ಎನ್.ಗಿರೀಶ್ ಗೌಡ, ವಿಸ್ತರಣಾಧಿಕಾರಿ ಸಿ.ಎಸ್.ಕಿರಣ್ ಕುಮಾರ್, ಭಾನುಪ್ರಕಾಶ್, ನಟರಾಜ್, ವಿ.ರಾಮರೆಡ್ಡಿ, ನಾರಾಯಣಸ್ವಾಮಿ, ಕೆ.ಸಿ.ಮುನಿರಾಜು, ಮಂಜುಳಮ್ಮ, ಎಚ್.ಕೆ.ನಾರಾಯಣಸ್ವಾಮಿ, ಎಚ್.ಎನ್. ಗೋವಿಂದಪ್ಪ, ಬಿ.ನಾರಾಯಣಗೌಡ, ಸಿ.ವೆಂಕಟಪ್ಪ, ಬಿ.ವೆಂಕಟೇಶ್ ರೆಡ್ಡಿ, ರಾಜಣ್ಣ, ಎಚ್.ವಿ.ರಮೇಶ್, ಎ.ಜಿ.ತೇಜಸ್ವಿ, ಕೆ.ಎನ್.ಪ್ರಕಾಶ್, ಪ್ರಸನ್ನ ಕುಮಾರ್, ಡಿ.ನಾಸಪ್ಪ, ಎಂ.ಸೊಣ್ಣಪ್ಪ, ತಿಪ್ಪಮ್ಮ, ಸುಬ್ರಮಣಿ, ಅಶ್ವತ್ಥಮ್ಮ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಕ್ಷೇತ್ರಕ್ಕೆ ಬಂದು ನೋಡಲಿ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳ ಕಾರ್ಯ ವೈಖರಿಯನ್ನು
ಎಸ್.ಎನ್. ನಾರಾಯಣಸ್ವಾಮಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.