ಕೋಲಾರ: ಸಂಸದ ಎಂ.ಮಲ್ಲೇಶ್ ಬಾಬು ಶುಕ್ರವಾರ ನಗರದ ಹಳೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೂ ಮಾರಾಟಗಾರರು ಹಾಗೂ ಹೂ ಬೆಳೆಗಾರರ ಸಮಸ್ಯೆ ಆಲಿಸಿದರು.

ಹೂ ಮಾರಾಟಗಾರರಿಗೆ ಯಾವುದೇ ರೀತಿ ತೊಂದರೆ ನೀಡದಂತೆ ಹಾಗೂ ಮಾರುಕಟ್ಟೆಗೆ ಮೂಲ ಸೌರ್ಕಯ ಒದಗಿಸುವಂತೆ ಕೋಲಾರ ನಗರಸಭೆ ಆಯುಕ್ತ ನವೀನ್ ಚಂದ್ರ ಅವರಿಗೆ ಸೂಚನೆ ನೀಡಿದರು.

ಮೂರು ದಿನಗಳ ಹಿಂದೆ ಹೂ ಮಾರುಕಟ್ಟೆಗೆ ಭೇಟಿ ನೀಡಿದ್ಧ ನವೀನ್ ಚಂದ್ರ, ರೈತರ ಹೂ ಹರಾಜು ಹಾಕದಂತೆ ಹೇಳಿದ್ದರು. ಇದರಿಂದ ಕೆರಳಿದ್ದ ರೈತರು, ವ್ಯಾಪಾರಸ್ಥರು, ರೈತ ಸಂಘದವರು ಹೂವನ್ನು ರಸ್ತೆಗೆ ಸುರಿಯುವ ನಿರ್ಧಾರ ಕೈಗೊಂಡ ವಿಷಯ ತಿಳಿದು ಸಂಸದರು ಮಾರುಕಟ್ಟೆಗೆ ಭೇಟಿ ನೀಡಿದರು.

ಹೂ ಬೆಳೆಗಾರರು ಹಾಗೂ ರೈತರ ಜೊತೆ ಚರ್ಚೆ ಮಾಡಿದರು. ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಸ್ಥಳವನ್ನು ಅಭಿವೃದ್ಧಿಪಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಂದು ಹೇಳಿದರು.

ವ್ಯಾಪಾರಸ್ಥರು, ರೈತರು ಸಹ ಮಾರುಕಟ್ಟೆಯಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸಹಕರ ನೀಡಬೇಕೆಂದು ಸಲಹೆ ನೀಡಿದರು. .

50 ವರ್ಷಗಳಿಂದ ಹಳೇ ಬಸ್ ನಿಲ್ದಾಣದಲ್ಲಿ ರೈತರು ತರುವ ಹೂವನ್ನು ಹರಾಜು ಹಾಕಿ ಉತ್ತಮ ಬೆಲೆ ನೀಡುತ್ತಿದ್ದು, ಈಗ ಏಕಾಏಕಿ ನಗರಸಭೆ ಹೊಸ ಕಾನೂನು ತರುವುದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಇನ್ಸ್ಪೆಕ್ಟರ್ ಭಾರತಿ ಮಾತನಾಡಿ, ‘ರೈತರು ಹೂತಂದ ಗಾಡಿಗಳನ್ನು ಬೇರೆ ಕಡೆ ಪಾರ್ಕಿಂಗ್ ಮಾಡಿ ಸಂಚಾರ ಅಡಚಣೆ ಆಗದಂತೆ ಸಹಕರಿಸಬೇಕು’ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದು, ರೋಗಬಾಧೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪರ್ಯಾಯವಾಗಿ ಜಿಲ್ಲೆಯಲ್ಲಿ ರೈತರು ಹೂ ಬೆಳೆದು ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಅಧಿಕಾರಿಗಳ ದೌರ್ಜನ್ಯದಿಂದ ಹರಾಜು ಪ್ರಕ್ರಿಯೆ ಸ್ಥಗಿತ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳೆ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶದ ನೆಪದಲ್ಲಿ ಹೂ ಬೆಳೆಗಾರರು ಮತ್ತು ರೈತರ ಮೇಲೆ ಅಧಿಕಾರಿಗಳ ದೌರ್ಜನ್ಯ ಸಹಿಸುವುದಿಲ್ಲ. ಮೊದಲು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿ ಎಂದರು.

ನಗರಸಭೆ ಆಯುಕ್ತ ನವೀನ್ ಚಂದ್ರ ಮಾತನಾಡಿ, ‘ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆ ನೀಡುವುದಿಲ್ಲ. ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ ಇಂದಿರಾ ಕ್ಯಾಂಟೀನ್ ಪಕ್ಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಇರಗಸಂದ್ರ ವಿಶ್ವನಾಥ, ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ, ಕೆ.ಎಂ.ಕೆ ಹೂ ಮಾರಾಟಗಾರರಾದ ಗೋಪಾಲ ಕೃಷ್ಣ, ಕಿಲಾರಿಪೇಟೆ ಮಣಿ, ಮುನಿಯಪ್ಪ ವಿನಯ್, ಕೃಷ್ಣಮೂರ್ತಿ ಚಲಪತಿ, ಗಿರೀಶ್, ನಟರಾಜ್ ದಿಂಬ ನಾಗರಾಜ್, ನೂರಾರು ರೈತರರು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.