ಬೇತಮಂಗಲ: ಬೆಂಗಳೂರು-ಚೈನ್ನೈ ನಿರ್ಮಿಸಿರುವ ಕಾರಿಡಾರ್ ರಸ್ತೆ ಸುಂದರಪಾಳ್ಯ ಟೋಲ್ ಗೇಟ್ನಲ್ಲಿ ವಾಹನಗಳಿಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾರಿಡಾರ್ ಟೋಲ್ ಗೇಟ್ ರಸ್ತೆ ಹಾಗೂ ಬೇತಮಂಗಲ ಮತ್ತು ವಿ.ಕೋಟ ಮಾರ್ಗದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುವ ದೃಷ್ಟಿಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಕಾರಿಡಾರ್ ರಸ್ತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆ ನೀಡಿದರು.

ಗ್ರಾ.ಪಂ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಬೇತಮಂಗಲದಿಂದ ವಿ.ಕೋಟಕ್ಕೆ ಹೋಗುವ ವಾಹನಗಳು ಮತ್ತು ಕಾರಿಡಾರ್ ರಸ್ತೆಯಿಂದ ಬರುವ ವಾಹನಗಳು ಒಂದೇ ಜಾಗದ ಸರ್ಕಲ್ನಲ್ಲಿ ಸೇರಲಿವೆ. ಅಂದರೆ, ಈ ಸರ್ಕಲ್ನಲ್ಲಿ ಯಾವುದೇ ರೀತಿಯ ರಸ್ತೆ ಉಬ್ಬು ಹಾಗೂ ಎಚ್ಚರಿಕೆ ನಾಮಫಲಕ ಅಳವಡಿಸುವಲ್ಲಿ ಕಾರಿಡಾರ್ ರಸ್ತೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ವಾಹನ ಸವಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.