ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024: ಅಮರಜ್ಯೋತಿ ಶಾಲೆಗೆ 100ರಷ್ಟು ಫಲಿತಾಂಶ

Published 9 ಮೇ 2024, 12:54 IST
Last Updated 9 ಮೇ 2024, 12:54 IST
ಅಕ್ಷರ ಗಾತ್ರ

ಮುಳಬಾಗಿಲು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಅಮರಜ್ಯೋತಿ ಶಾಲೆ ಶೇಕಡಾ 100ರಷ್ಟು ಫಲಿತಾಂಶ ಪಡೆದಿದೆ.

ಪ್ರಸಕ್ತ ಸಾಲಿನಲ್ಲಿ 145 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 57 ವಿದ್ಯಾರ್ಥಿಗಳು ಅತ್ಯುತ್ತಮ, 76 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 12 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಸ್.ಧನ್ಯಾ 619 ಅಂಕ ಪಡೆದು ಶೇ 99.04 ರಷ್ಟು, ಎಸ್.ಎಚ್.ವಿಶಾಲ್ 616 ಅಂಕಗಳೊಂದಿಗೆ ಶೇ 98.56 ರಷ್ಟು, ಎಂ.ಲಲಿತಾ 615 ಅಂಕಗಳೊಂದಿಗೆ 98.04 ರಷ್ಟು, ಕೆ.ಎಂ.ಲಿಖಿತ್ ಕುಮಾರ್, ಎಸ್.ಜೀವಿತಾ 611 ಅಂಕದೊಂದಿಗೆ 97.76 ರಷ್ಟು ಹಾಗೂ ಆರ್.ಸಿ.ವರ್ಷ 610 ಅಂಕ ಪಡೆದು 97.06ರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಮರಜ್ಯೋತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT