ಕೋಲಾರ: ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ.ಕೇಶವ ಕೆಲವು ಪ್ರಭಾವಿ ಮುಖಂಡರ ಮರ್ಜಿಗೆ ಮಾತ್ರ ಸೀಮಿತರಾಗಿದ್ದು, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರೂ ಸೇರಿದಂತೆ ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದಾರೆ ಎಂದು ಪಕ್ಷದ ಅತೃಪ್ತ ಮುಖಂಡರು ಆರೋಪಿಸಿದ್ದಾರೆ.

ನಗರದ ಹೋಟೆಲ್ವೊಂದರಲ್ಲಿ ಶನಿವಾರ ಬೆಂಬಲಿಗರೊಡನೆ ಸಭೆ ನಡೆಸಿದ ನಗರಸಭೆ ಸದಸ್ಯರಾದ ಎಸ್.ಆರ್. ಮುರಳಿಗೌಡ, ಅಫ್ರೋಜ್ ಪಾಷಾ, ರವೀಂದ್ರ, ಕೇಶವ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈವರೆಗೂ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್ ನೇತೃತ್ವದಲ್ಲಿ ಒಂದೂ ಸಭೆಯನ್ನೂ ಕರೆದು ಚರ್ಚಿಸಿಲ್ಲ. ಕೇವಲ ಕೆಲವು ಮುಖಂಡರ ಮನೆಗಳಿಗೆ ಭೇಟಿ ನೀಡಿ ತಮ್ಮ ಕಾರ್ಯವ್ಯಾಪ್ತಿ ಸೀಮಿತಗೊಳಿಸಿದ್ದಾರೆ ಎಂದು ದೂರಿದರು.

ಅಭ್ಯರ್ಥಿಗೆ ಸ್ಥಳೀಯ ಮುಖಂಡರು ಹಾಗೂ ಪಕ್ಷದ ಜನಪ್ರತಿನಿಧಿಗಳ ಪರಿಚಯವನ್ನೂ ಮಾಡಿಸದೇ ಕೆಲವು ನಾಯಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಸರಿಯಲ್ಲ. ಸಾಮೂಹಿಕ ನಾಯಕತ್ವದಡಿ ಪಕ್ಷ ಸಾಗಿದರೆ ಮಾತ್ರ ಗೆಲುವು ದೊರಕುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ಮಾಜಿ ಸಚಿವ ಕೆ.ಶ್ರೀನಿವಾಸಗೌಡರ ಸುತ್ತ ಇರುವ ಕೆಲವು ಮುಖಂಡರು ಕೇಶವ ಅವರನ್ನು ತಾವು ಗೆಲ್ಲಿಸಿ ಬಿಡುತ್ತೇವೆ ಎಂದು ವರಿಷ್ಠರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಮತ ಹಾಕಿಸೋದು ಕಾರ್ಯಕರ್ತರೇ ಹೊರತೂ ನಾಯಕರಲ್ಲ ಎಂಬುದನ್ನು ಇನ್ನಾದರೂ ಮನಗಾಣಬೇಕು, ಅಭ್ಯರ್ಥಿ ನಗರದಲ್ಲಿ ಪಕ್ಷದ ಕಾಯಂ ಕಚೇರಿಯನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಅಭ್ಯರ್ಥಿಯನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಪರಿಚಯಿಸುವ ಕೆಲಸವೇ ಆಗಿಲ್ಲ. ಅಭ್ಯರ್ಥಿಯನ್ನು ನಾಯಕರ ಮನೆಯ ಕಾಂಪೌಂಡ್ಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಒತ್ತಾಯಿಸಿದರು.

ಪಕ್ಷದ ವಿದ್ಯಾರ್ಥಿ ಘಟಕದ ಮುಖಂಡ ಬಿ.ಸುರೇಶ್ಗೌಡ, ಮೂಲ ಕಾರ್ಯಕರ್ತರನ್ನು ಅಭ್ಯರ್ಥಿ ಕಡೆಗಣಿಸಿದ್ದಾರೆ ಎಂಬ ಆರೋಪವಿದ್ದು, ಇದು ಪ್ರಚಾರದ ಸಂದರ್ಭದಲ್ಲಿ ಪ್ರತಿಕೂಲ ಪರಿಣಾಮ ಬೀರದಂತೆ ವರಿಷ್ಠರು ಎಚ್ಚರವಹಿಸಿ ಅಸಮಾಧಾನ ನಿವಾರಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ್, ಸಭೆಯಲ್ಲಿ ಚರ್ಚಿಸಿದ್ದನ್ನು ಕೇಶವ ಹಾಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಗಮನಕ್ಕೆ ತಂದು ತಾಲ್ಲೂಕಿನ ಮುಖಂಡರು,ಪ್ರತಿನಿಧಿಗಳ ಸಭೆ ಏರ್ಪಡಿಸುವುದಾಗಿ ತಿಳಿಸಿದರು.

ಕುಮಾರ್, ಸತೀಶ್, ಪುಟ್ಟರಾಜು, ಅಬ್ದುಲ್ ರಹೀಂ, ನಟರಾಜು, ಹೈವೇ ಮಂಜು, ವಿಕಾಸ್ ಬೈರೇಗೌಡ, ಶಶಿಧರ್, ಪುರುಷೋತ್ತಮ್, ಮಂಜುನಾಥ್, ಕಠಾರಿಪಾಳ್ಯ ಮಂಜು, ಸಂತೋಷ್, ಕಾರ್ತಿಕ್, ಅನಿಕೇತ್, ಅರುಣ್, ಖುಷ್ವಂತ್ ಸಿಂಗ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.