ಮಾಲೂರು: ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಪುಂಸಕ ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಟೀಕಿಸಿರುವುದನ್ನು ಖಂಡಿಸಿ ಬಿಜೆಪಿ ತಾಲ್ಲೂಕು ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದ ಮಾರಿಕಾಂಬ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ, ಸಚಿವರ ಪ್ರತಿಕೃತಿ ದಹಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಸ್.ಎನ್.ರಾಜು ಮಾತನಾಡಿ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿಕೆ ಹಿಂಪಡೆಯಬೇಕು ಎಂದರು.

ಪಟ್ಟಣದ ಮಹಾರಾಜ ವೃತ್ತದಿಂದ ಮೆರವಣಿಗೆ ನಡೆಸಿ, ಮಾರಿಕಾಂಬ ವೃತ್ತದಲ್ಲಿ ಸಚಿವ ಸಲ್ಮಾನ್ ಖುರ್ಷಿದ್ ಪ್ರತಿಕೃತಿ ದಹಿಸಿ, ನಂತರ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.

ಪುರಸಭೆ ಸದಸ್ಯರಾದ ಹನುಮಂತರೆಡ್ಡಿ, ಭಾರತಮ್ಮ, ರಾಮಮೂರ್ತಿ, ಬಾರ್ ಸೋಮು, ಮುಖಂಡರಾದ ಜಿ.ಇ.ರಾಮೇಗೌಡ, ಸುಬ್ರಮಣ್ಯಂರೆಡ್ಡಿ, ಸೊಸೈಟಿ ವೆಂಕಟೇಶ್, ಯುವಮೋರ್ಚಾ ಉಪಾಧ್ಯಕ್ಷ ಬೋರ್ ಮಂಜು, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ ರಾವ್ ಕದಂ, ಗುರುನಾಥ್ ರೆಡ್ಡಿ, ಮಹಾವೀರ್ ಜೈನ್, ಆಂಜಿನಪ್ಪ, ಸಿಎಂಸಿ ಮುನಿರಾಜು, ವೇಣು, ಸಾಬೂಸಾಬ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.