ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆಗೊಂದಿ: ರಸ್ತೆಗೆ ಉರುಳಿದ ಮರ; ವಾಹನ ಸಂಚಾರಕ್ಕೆ ಅಡ್ಡಿ

Published 14 ಜೂನ್ 2024, 5:59 IST
Last Updated 14 ಜೂನ್ 2024, 5:59 IST
ಅಕ್ಷರ ಗಾತ್ರ

ಗಂಗಾವತಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಆನೆಗೊಂದಿ ಗ್ರಾಮ ಸಮೀಪ ಮರವೊಂದು ಶುಕ್ರವಾರ ರಸ್ತೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ರಸ್ತೆ ಬದಿಯಲ್ಲಿರುವ ಬೃಹತ್ ಮರಗಳು ಬಾಗಿದ್ದು, ಅದರಲ್ಲಿ‌ ಒಂದು ಮರ ಆನೆಗೊಂದಿ-ಕಡೆಬಾಗಿಲು ಮಧ್ಯಭಾಗದಲ್ಲಿ ರಸ್ತೆಗೆ ಉರುಳಿ ಸಂಚಾರ ದಟ್ಟಣೆಯಾಗಿದೆ.

ಮರ ಸಂಪೂರ್ಣವಾಗಿ ರಸ್ತೆಗೆ ಉರುಳಿದ್ದು, ದ್ವಿಚಕ್ರ ವಾಹನಗಳ ಸಂಚಾರ ಮಾತ್ರ ಸಾಧ್ಯವಿದ್ದು, ಬಸ್, ಕಾರು, ಲಾರಿ, ಟ್ರಾಕ್ಟರ್ ಎಲ್ಲವೂ ಸಾಕಷ್ಟು ದೂರದಲ್ಲಿ ಸಾಲಾಗಿ ರಸ್ತೆಗೆ ನಿಂತಿವೆ.

ಶುಕ್ರವಾರ ಆದ ಕಾರಣ ಬಹುತೇಕ ವಾಹನಗಳು ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದು, ಎಲ್ಲ ವಾಹನಗಳು ರಸ್ತೆಯಲ್ಲಿ ನಿಂತಿವೆ. ಸಂಚಾರ ದಟ್ಟಣೆದಿಂದ ಗಂಟೆಗೂ ಹೆಚ್ಚಿನ ಸಮಯ ಬಸ್, ಟ್ರಾಕ್ಟರ್, ಲಾರಿಗಳು ರಸ್ತೆಬದಿ ನಿಂತ ಚಿತ್ರಣ ಕಂಡು‌ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT