ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕರಡಿ ದಾಳಿ: ಕಲ್ಲಂಗಡಿ ಹಾನಿ

Last Updated 14 ಜುಲೈ 2021, 6:37 IST
ಅಕ್ಷರ ಗಾತ್ರ

ಕನಕಗಿರಿ: ತಾಲ್ಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ಕರಡಿಗಳ ದಾಳಿ ಮತ್ತೆ ಮುಂದುವರೆದಿದ್ದು ಮಂಗಳವಾರ ನಸುಕಿನ ಜಾವ ಹಲವಾರು ರೈತರ ಹೊಲದಲ್ಲಿ ಬೀಜೋತ್ಪಾದನೆಗೆ ಹಾಕಿದ್ದ 1500ಕ್ಕೂ ಹೆಚ್ಚು ಕಲ್ಲಂಗಡಿಗಳನ್ನು ತಿಂದು ಹಾಕಿವೆ ಎಂದುರೈತರು ತಿಳಿಸಿದ್ದಾರೆ.

ದೇವಪ್ಪ ಹನುಮಂತಪ್ಪ ತಳವಾರ ಹಾಗೂ ಮಂಜುನಾಥ ದುರಗಪ್ಪ ವಂಕಲಕುಂಟಿ ಅವರ ಹೊಲದಲ್ಲಿ ಬೆಳೆದ 780 ಕಲ್ಲಂಗಡಿಗಳನ್ನು ಎರಡು ದಿನಗಳಿಂದ ತಿಂದು ಹಾಕಿವೆ. ಯಲ್ಲಪ್ಪ ಮ್ಯಾದನೇರಿ ಅವರ ಹೊಲದಲ್ಲಿ ಬೆಳೆದ 70, ಕನಕಮ್ಮ ಭೋಜಪ್ಪ ಅವರ ಹೊಲದಲ್ಲಿ 40, ಹನುಮಂತಪ್ಪ ಅವರ ಹೊಲದಲ್ಲಿ 80 ಹಣ್ಣುಗಳು ಸೇರಿದಂತೆ ಹಲವು ರೈತರ ಹೊಲಗಳಿಗೆ
ನುಗ್ಗಿ ಬೆಳೆ ನಾಶ ಮಾಡಿದೆ.

ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ಮಿತಿ ಮೀರಿದೆ. ಈ ಹಿಂದೆ ದ್ರಾಕ್ಷಿ ಬೆಳೆ ನಾಶ ಮಾಡಿದ್ದ, ಕಾಡು ಪ್ರಾಣಿಗಳು ಈಗ ಕಲ್ಲಂಗಡಿ ಹಣ್ಣನ್ನು ನಾಶ ಮಾಡುತ್ತಿವೆ. ಬೋನಿನ ವ್ಯವಸ್ಥೆ ಮಾಡಿ ಕರಡಿ, ಚಿರತೆಗಳನ್ನು ಸೆರೆ ಹಿಡಿಯಿರಿ ಎಂದು ಹತ್ತಾರು ಸಲ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮುಖಂಡ ಸೋಮನಾಥ ತಳವಾರ ದೂರಿದ್ದಾರೆ.

ಹಲವು ರೈತರ ಹೊಲದಲ್ಲಿ ಕರಡಿ, ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ ಎಂದು
ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT