ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು ನಿಂತಿರುವ ವಿದ್ಯಾರ್ಥಿಗಳು
ಬ್ಯಾಂಕ್ ಮಾದರಿಯಂತೆ ಶಾಲಾ ಬ್ಯಾಂಕಿನ ವಿದ್ಯಾರ್ಥಿಗಳ ಪಾಸ್ ಬುಕ್
ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿಗಳು

ಈ ಹಿಂದೆ ಮನೆಯಲ್ಲಿ ನನಗೆ ಹಣ ನೀಡಿದರೇ ಅಂಗಡಿ ತಿನಿಸುಗಳಿಗೆ ಖರ್ಚು ಮಾಡುತ್ತಿದ್ದೆ. ಬ್ಯಾಂಕ್ ರಚನೆ ನಂತರ ಹಣ ಉಳಿತಾಯ ಮಾಡುತ್ತಿದ್ದು ಆ ಹಣದಿಂದ ಅಗತ್ಯವಿದ್ದಾಗ ಪೆನ್ ಪೆನ್ಸಿಲ್ ನೋಟ್ ಬುಕ್ ಖರೀದಿ ಮಾಡುತ್ತಿದ್ದೇನೆ.
ಯಮನೂರ 4ನೇ ತರಗತಿ ವಿದ್ಯಾರ್ಥಿ ಸವಳ ಕ್ಯಾಂಪ್ ಸರ್ಕಾರಿ ಶಾಲೆ
ಮಕ್ಕಳಿಂದ ವ್ಯರ್ಥ ಖರ್ಚು ತಡೆದು ಹಣ ಉಳಿತಾಯ ಮಾಡುವ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಬ್ಯಾಂಕ್ ಆರಂಭಿಸಿದ್ದು ವಿದ್ಯಾರ್ಥಿಗಳಿಂದ ಪಾಲಕರಿಂದ ಉತ್ತಮ ಸಹಕಾರ ದೊರೆಯುತ್ತಿದೆ. ಈ ಹಿಂದೆ ಭಟ್ಟರನರಸಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗಲೂ ಸಹ ಶಾಲಾ ಬ್ಯಾಂಕ್ ಆರಂಭಿಸಿದ್ದೆ.
ಸುರೇಶ್ ಜಿ.ಎಸ್ ಶಿಕ್ಷಕ