ಮಂಗಳವಾರ, ಆಗಸ್ಟ್ 16, 2022
22 °C

ಚಿಕ್ಕಬಗನಾಳ: ಕ್ರಿಕೆಟ್ ಟೂರ್ನಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ತಾಲ್ಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಲಕ್ಷ್ಮೀ ನರಸಿಂಹೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಗೆ ಗ್ರಾಮದ ಹಿರಿಯ ಮುಖಂಡರಾದ ಬನ್ನೆಪ್ಪಗೌಡ ಕೆ.ಪೊಲೀಸ್ ಪಾಟೀಲ ಹಾಗೂ ಬಸವರಾಜ ಬಂಗಾಳಿ ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,‘ಯುವಜನತೆ ಮೊಬೈಲ್‍ಗಳಿಗೆ ಮಾರು ಹೋಗದೆ ಕ್ರಿಕೆಟ್, ಕಬಡ್ಡಿ, ವಾಲಿಬಾಲ್‌ನಂಥ ಕ್ರೀಡೆಗಳ ಬಗ್ಗೆ ಒಲವು ತೋರಬೇಕು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ. ಗ್ರಾಮದಲ್ಲಿ ಸುಮಾರು ಸತತ 15 ವರ್ಷಗಳಿಂದ ಕ್ರಿಕೆಟ್ ಟೂರ್ನಿ ಏರ್ಪಡಿಸುತ್ತ ಬಂದಿರುವುದು ಶ್ಲಾಘನೀಯ’ ಎಂದರು.

ನಂತರ ಎಸ್‍ಡಿಎಂಸಿ ಅಧ್ಯಕ್ಷ ಎಂ.ಡಿ.ಬೆಟಗೇರಿ ಮಾತನಾಡಿ,‘ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ. ಆಟಗಳೆಂದರೇ ಒಬ್ಬರು ಸೋಲೊಪ್ಪಲೇಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಎಲ್ಲವನ್ನು ಸಮನಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದರು.

ಗ್ರಾಮದ ಮುಖಂಡರಾದ ಕನಕಪ್ಪ ಮುಂಡರಗಿ, ರಾಮಣ್ಣ ಚೌಡ್ಕಿ, ದಾದಾಪೀರ್ ಬೆಟಗೇರಿ, ರಾಜಕುಮಾರ, ಹುಸೇನಪ್ಪ, ಶೇಖಪ್ಪ ಬಂಗಾಳಿ, ಮಾರುತಿ ಪಿ, ಮಂಜುನಾಥ ಪೊಲೀಸ್ ಪಾಟೀಲ, ಗುರುರಾಜ ಮಾಲಿಪಾಟೀಲ., ಬಸವರಾಜ, ನಾಗರಾಜ ಉಬ್ಬಲಗುಂಡಿ, ಕೃಷ್ಣಪ್ಪ ಮ್ಯಾಗೇರಿ, ರಾಜಾಸಾಬ್ ಪಿಂಜಾರ್‌, ರವಿಚಂದ್ರ ಬಿ.ಬಡಿಗೇರ, ರಾಮಣ್ಣ ನಿಂಗಾಪುರ, ಅಶೋಕ ದಾಸರ, ನಿಂಗರಾಜ ವೀರಾಪುರ, ಕ್ರಿಕೆಟ್ ಕ್ಲಬ್‍ನ ಮುಖ್ಯಸ್ಥರಾದ ಶಂಕರಗೌಡ, ಜಗದೀಶಗೌಡ, ಮುಕ್ಕಣ್ಣ ಹಾಗೂ ನಿಂಗನಗೌಡ ಇದ್ದರು.

ಈ ಕ್ರೀಡೆಯಲ್ಲಿ 5 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಒಟ್ಟು 34 ತಂಡಗಳು ಭಾಗವಹಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.