ಕೊಪ್ಪಳ: ‘ಕ್ಷೇತ್ರದಲ್ಲಿ ಪರಿಸರ ಉಳಿಸಿ ಹಾಗೂ ಅಭಿವೃದ್ಧಿ ಮಾಡಿ ನಿಮ್ಮ ದಮ್ಮು, ತಾಕತ್ತು ತೋರಿಸಿ’ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಹಿಟ್ನಾಳ್ ರಾಬಕೊವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರಿಗೆ ದಮ್ಮು, ತಾಕತ್ತು ಸವಾಲು ತೋರಿಸುವ ಸಲುವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರೆ. ಇದು ಅಹಂಕಾರದ ಪರಮಾವಧಿ. ಅಧಿಕಾರ ಇರುವುದು ಅಹಂಕಾರ ಪ್ರದರ್ಶನಕ್ಕೆ ಅಲ್ಲ, ಅಭಿವೃದ್ಧಿ ಮಾಡಲು. 15 ವರ್ಷ ಶಾಸಕರಾಗಿ ಆಯ್ಕೆಯಾದರೂ ಅಭಿವೃದ್ಧಿಯಲ್ಲಿ ಕೊಪ್ಪಳ ತೀರಾ ಹಿಂದುಳಿದಿದೆ. ರಸ್ತೆಗಳು ಮಾಯವಾಗಿ ಜನ ನಿಮಗೆ ಶಾಪ ಹಾಕುತ್ತಿದ್ದಾರೆ. ನಿಮಗೆ ನಿಜವಾದ ದಮ್ಮು, ತಾಕತ್ತು ಇದ್ದರೆ ಅಭಿವೃದ್ಧಿ ಮಾಡಿ ತೋರಿಸಿ’ ಎಂದು ಆಗ್ರಹಿಸಿದ್ದಾರೆ.

‘ಕೊಪ್ಪಳವನ್ನು ಮಲೀನ ಮಾಡುತ್ತಿರುವ ಕಾರ್ಖಾನೆಗಳನ್ನು ಹಿಮ್ಮೆಟ್ಟಿಸುವ ನಿಜವಾದ ದಮ್ಮು ತಾಕತ್ತು ನಿಮಗೆ ಇದ್ದರೆ ಅದನ್ನು ತೋರಿಸಿ. ಇಲ್ಲಿನ ಜನತೆ ನಾಲ್ಕು ತಿಂಗಳಿನಿಂದಲೂ ಮಲೀನ ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೂ ನೀವು ಮೌನವಾಗಿದ್ದಾರೆ. ಈ ವಿಷಯದಲ್ಲಿ ನಿಮ್ಮ ದಮ್ಮು ಹಾಗೂ ತಾಕತ್ತು ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಅಭಿವೃದ್ಧಿ ಮರೆತಿರುವ ಹಾಗೂ ಜನರಿಗೆ ನಿಮ್ಮ ಅಹಂಕಾರ ಪ್ರದರ್ಶಿಸುವ ಸಮಯ ಕೊನೆಗೊಳ್ಳುತ್ತಿದೆ. ಜನರು ನಿಮ್ಮನ್ನು ಕಿತ್ತೊಗೆಯುವ ದಿನ ದೂರವಿಲ್ಲ. ಉಳಿದ ಅವಧಿಯಲ್ಲಾದರೂ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಋಣ ತೀರಿಸಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.