ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸಾಣಾಪುರ ಗ್ರಾಮದ ತುಂಗಭದ್ರಾ ನದಿಯಲ್ಲಿ ಈಜಲು ಹೋದ ಹೈದರಾಬಾದ್ ಮೂಲದ ಖಾಸಗಿ ಆಸ್ಪತ್ರೆಯ ವೈದ್ಯೆ ನೀರಿನಲ್ಲಿ ಮುಳುಗಿ ಬುಧವಾರ ಮೃತಪಟ್ಟಿದ್ದಾರೆ. ಮೃತ ಯುವತಿ ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ ನಾಂಪಲ್ಲಿ ನಿವಾಸಿ ಡಾ.ಅನನ್ಯರಾವ್ (26) ಎಂದು ತಿಳಿದು ಬಂದಿದೆ.

ರಜೆಯ ದಿನಗಳನ್ನು ಕಳೆಯಲು ಸ್ನೇಹಿತರಾದ ಆಶಿತಾ ಮತ್ತು ಸಾತ್ವಿಕ್ ಜೊತೆ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿಕೊಂಡು ಬಂದು ಸಾಣಾಪುರ ಗ್ರಾಮದ ತುಂಗಾಭದ್ರಾ ನದಿಪಾತ್ರದ ಗೆಸ್ಟ್ಹೌಸ್ನಲ್ಲಿ ತಂಗಿದ್ದರು.

ಬುಧವಾರ ಬೆಳಿಗ್ಗೆ ಗೆಸ್ಟ್ ಹೌಸ್ ಹಿಂಬದಿಯಲ್ಲಿನ ತುಂಗಾಭದ್ರ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ, ಬೃಹತ್ ಕೊರಕಲು ಕಲ್ಲಿನ ಮೇಲಿಂದ ನೀರಿಗೆ ಜಿಗಿದಿದ್ದು, ವಾಪಸ್ ಬರಲು ಆಗದೇ ನೀರಿನಲ್ಲಿ ಮುಳುಗಿದ್ದಾರೆ. ಈಜಲು ಜಿಗಿಯುವ ದೃಶ್ಯವನ್ನು ಸ್ನೇಹಿತರು ಸೆರೆ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.