ಗಂಗಾವತಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ₹25 ಕೋಟಿ ಅನುದಾನದಲ್ಲಿ, ₹20 ಕೋಟಿ ಅನುದಾನವನ್ನು ನಗರದ ನೀಲಕಂಠೇಶ್ವರ, ಗಾಂಧಿವೃತ್ತ, ಬಸ್ ನಿಲ್ದಾಣ, ಮಹಾವೀರ ವೃತ್ತದ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗಂಗಾವತಿ ರಸ್ತೆಗಳು ವಿಶಾಲವಾಗಿ ಕಾಣಲಿವೆ’ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದರು.

ನಗರದ ನಗರಸಭೆ ಕಾರ್ಯಾಲಯ ಸಭಾಂಗಣದಲ್ಲಿ ಗುರುವಾರ ನಗರಸಭೆ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ತುರ್ತುಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗಂಗಾವತಿ ನಗರದ ಅಭಿವೃದ್ಧಿ ಮೊದಲ ಆದ್ಯತೆ. ಇಲ್ಲಿನ ಪಕ್ಷಗಳ ಅಗತ್ಯ ನನಗೆ ಬೇಕಿಲ್ಲ. ಮಾಜಿ ಸಚಿವ ಅನ್ಸಾರಿ ಬಿಜೆಪಿ ನಗರಸಭೆ ಸದಸ್ಯರ ವಾರ್ಡ್ಗಳಿಗೆ ಮಾತ್ರ ಅನುದಾನ ನೀಡುತ್ತಾರೆಂದು ಆರೋಪಿಸುತ್ತಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ, ಬಿಜೆಪಿಗರಿಗೆ ಮಾತ್ರ ಸ್ವಂತ ಅಲ್ಲ. ಹಿಂದಿನ ನಗರೋತ್ಥಾನ, ಇಂದಿನ ನಗರೋತ್ಥಾನ ಎಲ್ಲ ಅನುದಾನ ಬಳಸಿ, ಗಂಗಾವತಿ ನಗರದ ಎಲ್ಲ ಸದಸ್ಯರ ವಾರ್ಡ್ಗಳು ಅಭಿವೃದ್ಧಿಪಡಿಸಲಾಗುತ್ತದೆ. ನಗರದ ರಸ್ತೆಗಳ ಅಭಿವೃದ್ಧಿ ವೇಳೆ ಸಾರ್ವಜನಿಕರು ರಸ್ತೆ ಒತ್ತುವರಿ ಮಾಡಿಕೊಂಡಿದ್ದರೇ, ನಗರಸಭೆ ಸದಸ್ಯರು ಒತ್ತುವರಿ ತೆರವುಗೊಳಿಸಿ, ರಸ್ತೆ ಕಾಮಗಾರಿ ನಡೆಸಲು ಸಹಕಾರ ಮಾಡಬೇಕಿದೆ’ ಎಂದರು

‘ಗಂಗಾವತಿ ನಗರದ ಮುಖ್ಯದ್ವಾರಗಳಲ್ಲಿ ಭತ್ತನಾಡಿಗೆ ಸ್ವಾಗತ ಎನ್ನುವ ನಾಮಫಲಕಗಳಿದ್ದು, ಇನ್ನುಮುಂದೆ ಅವುಗಳನ್ನು ಹನುಮನನಾಡಿಗೆ ಸ್ವಾಗತ ಎನ್ನುವ ನಾಮಫಲಕಗಳಾಗಿ ಬದಲಾಯಿಸಬೇಕು’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಹೀರಬಾಯಿ ನೇತೃತ್ವದಲ್ಲಿ ಎಸ್ಬಿಎಂ ಅನುದಾನದಡಿ ವಾರ್ಡ್ ನಂ3, 17, 15ರಲ್ಲಿ ನಿರ್ಮಿಸಲು ಅನುಮೋದನೆಗೊಂಡ ಸಮುದಾಯ ಶೌಚಾಲಯಗಳಿಗೆ ಆಕ್ಷೇಪಣೆ ವ್ಯಕ್ತವಾದ ಕಾರಣ ಅವುಗಳನ್ನು ವಾರ್ಡ್ ನಂಬರ್ 23, 8, 9ಕ್ಕೆ ಸ್ಥಳಾಂತರಿಸುವ ಬಗ್ಗೆ ಸದಸ್ಯರಿಂದ ಮಾಹಿತಿ ಪಡೆದರು.

ಈ ವೇಳೆ ಉಪಾಧ್ಯಕ್ಷ ಸುಧಾ ಸೋಮನಾಥ, ಸದಸ್ಯರಾದ ಅಬ್ದುಲ್ ಜಬ್ಬಾರ್, ಪರಶುರಾಮ ಮಡ್ಡೇರಾ, ಅಜಯಕುಮಾರ ಬಿಚ್ಚಾಲಿ, ಹುಲಿಗೆಮ್ಮ ಕಿರಿಕಿರಿ, ಸುನೀತಾ ಶ್ಯಾವಿ, ಪಾರ್ವತಿ ದುರ್ಗಪ್ಪ, ಮೌಲಸಾಬ, ಶರಭೋಜಿರಾವ್ ಗಾಯಕವಾಡ, ಉಸ್ಮಾನ್, ನೀಲಕಂಠ ಕಟ್ಟಿಮನಿ ಸೇರಿ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿ ರಚನೆಗೆ ವಿರೋಧ

ತುರ್ತು ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಕಾರ್ಯ ಕಾನೂನುಬಾಹಿರ ಎಂಬ ನಗರಸಭೆ ವಿರೋಧ ಪಕ್ಷದ ನಾಯಕ ಮನೋಹರ ಸ್ವಾಮಿ ವಿರೋಧದಂತೆ ಸ್ಥಾಯಿ ಸಮಿತಿ ಸದಸ್ಯರ ರಚನೆಗೆ ಮಾತ್ರ ನಗರಸಭೆ ಅಧ್ಯಕ್ಷರು ಸದಸ್ಯರಿಂದ ನಾಮಪತ್ರಗಳು ಸ್ವೀಕರಿಸಿದರು. ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ನಗರಸಭೆ ಸದಸ್ಯರಾದ ಉಸ್ಮಾನ್ ಬಿಚ್ಚಿಗತ್ತಿ ಉಮೇಶ ಸಿಂಗನಾಳ ವಾಸುದೇವ ನವಲಿ ಸೋಮನಾಥ ಬಂಡಾರಿ ಜಯಶ್ರೀ ಸಿದ್ದಾಪುರ ಸುಚೇತಾ ಸಿರಿಗೇರಿ ನವೀನ್ ಮಾಲಿಪಾಟೀಲ ಮುಸ್ತಕ್ ರಮೇಶ ಚೌಡ್ಕಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.