ಕೊಪ್ಪಳ: ತಂತ್ರಜ್ಞಾನದ ಭರಾಟೆಯಲ್ಲಿ ಸಿಲುಕಿ ಹಿಂದಿನ ಕಾಲದಲ್ಲಿ ಕೃಷಿ ಕುಟುಂಬಗಳು ಉಪಯೋಗಿಸುತ್ತಿದ್ದ ಕೃಷಿ ಉಪಕರಣಗಳನ್ನು ಮರೆಯುತ್ತಿದ್ದು, ಜೊತೆಗೆ ಕಣ್ಮರೆಯಾಗುತ್ತಿವೆ. ಇಂತಹ ದಿನಗಳಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮತ್ತೊಮ್ಮೆ ಜನರಿಗೆ ನೋಡುವ ಭಾಗ್ಯ ಸಿಕ್ಕಿದೆ.

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಗವಿಮಠದ ಆವರಣದಲ್ಲಿ ಕೃಷಿ ಇಲಾಖೆಯ ವತಿಯಿಂದ ಕೃಷಿ ವಸ್ತು ಪ್ರದರ್ಶನ ನಡೆಯುತ್ತಿದ್ದು, ಜಾತ್ರೆಯ ಆಗಮಿಸುವ ಜನರು ಕೃಷಿ ಉಪಕರಣಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜಾತ್ರೆಯ ಅಂಗವಾಗಿ ಕೃಷಿ ಇಲಾಖೆ ಏರ್ಪಡಿಸಿದ ಕೃಷಿ ವಸ್ತು ಪ್ರದರ್ಶನದ ಮಳಿಗೆಗಳಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದ ನಿವಾಸಿ ಮಲ್ಲಯ್ಯ ಗುರುಬಸಯ್ಯ ಗುರುಬಸಪ್ಪಜ್ಜನಮಠ ಅವರು ಒಕ್ಕಲುತನಕ್ಕೆ ಸಂಬಂಧಿಸಿದ ಸಾವಿರಾರು ಪಾರಂಪರಿಕ ಕೃಷಿ ಉಪಕರಣಗಳ ಮಾದರಿ ಸಂಗ್ರಹ ಪ್ರದರ್ಶನವು ಜನರನ್ನು ಆಕರ್ಷಿಸುತ್ತಿದೆ.

ಕೃಷಿ ಉಪಕರಣಗಳಾದ ನೇಗಿಲು, ಕುಡುಗೋಲು, ಕುಂಟೆ, ಗುರದಾಳ, ಬೀಜ ನಾಟಿ ಸಾಧನ, ಜಂತು ಕುಂಟಿ, ನಗ, ಚಿಮ್ಮಣಿ, ಲಾಟಾನಗಳು, ಕೊರೊನಾ ನಾರಿನ ಕಲ್ಲಿ, ಅಳತೆ ಮಾಪನಗಳಾದ ಎರಡು ಶೇರು, ಪಾವು, ಶೇರು, ಅರಕಾಲು, ಚಟಾಕ್, ನೌಟಾಕ್, ಜಾರೀಪು ಹಾಗೂ ನಾನಾ ರೀತಿಯ ಬೀಜಗಳು ಸೇರಿದಂತೆ ನಾನಾ ಕೃಷಿ ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಜಲಾನಯನ ಮಾದರಿ ಪ್ರದರ್ಶನ: ಜಲಾನಯನ ನಿರ್ವಹಣೆ ಮಾದರಿ ಪ್ರಾತ್ಯಕ್ಷಿಕೆ, ಕೃಷಿ ಹೊಂಡ, ಕೋಡಿ ನಿರ್ಮಾಣ, ಕಂದಕ ಬದು, ಖುಷ್ಕಿ ತೋಟಗಾರಿಕೆ, ತಡೆ ಅಣೆಕಟ್ಟು, ಸಮುದಾಯ ಹೊಂಡ, ಸೇತುವೆ, ಕೃಷಿ ಅರಣ್ಯ, ರಸ್ತೆ ನೆಡುತೋಪ, ಮೇಲುಸ್ದರ ನಿರ್ಮಾಣ ಮಾಡಲಾಗಿದೆ. ರಸಾಯನಿಕ ರಹಿತ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದ ಕೃಷಿ ಪದ್ಧತಿ ವಿಧಾನ, ರೈತರಿಗೆ ಏಳಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳ ಮಾಹಿತಿ, ಸಿರಿಧ್ಯಾನ ಕುರಿತು ಜನರು ಮಾಹಿತಿಯನ್ನು ಇಲ್ಲಿನ ಕೃಷಿ ವಸ್ತು ಪ್ರದರ್ಶನದಲ್ಲಿ ಜನರು ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.