ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ನೌಕರರು, ಆದಾಯ ತೆರಿಗೆ ಪಾವತಿದಾರರಿಗೂ ಬಿಪಿಎಲ್‌ ಕಾರ್ಡ್!

ಪಡಿತರ ಪಡೆಯದ 1,250 ಬಿಪಿಎಲ್‌ ಕಾರ್ಡ್ ಅಮಾನತು, 19 ಸರ್ಕಾರಿ ನೌಕರರು ಪತ್ತೆ
Published : 2 ಡಿಸೆಂಬರ್ 2024, 5:51 IST
Last Updated : 2 ಡಿಸೆಂಬರ್ 2024, 5:51 IST
ಫಾಲೋ ಮಾಡಿ
Comments
ನೌಕರರ ವಿರುದ್ಧ ಶಿಸ್ತು ಕ್ರಮ
ತಾಲ್ಲೂಕಿನಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿರುವ ನೌಕರರು ಪತ್ತೆಯಾಗಿದ್ದು ನೋಟಿಸ್‌ ನೀಡಲಾಗುತ್ತದೆ. ಅವರ ತಪ್ಪು ಕಂಡುಬಂದರೆ ಅಂತಹವರು ನೌಕರಿಗೆ ಸೇರಿದಾಗಿನಿಂದ ಇಲ್ಲಿವರೆಗೂ ನಿಯಮಗಳ ಪ್ರಕಾರ ದಂಡ ವಸೂಲಿ ಮಾಡಲಾಗುತ್ತದೆ. ಅಲ್ಲದೆ ಸೇವಾ ಅವಧಿಯಲ್ಲಿ ಸರ್ಕಾರದ ಸೌಲಭ್ಯ ಪಡೆದಿದ್ದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಅಶೋಕ್‌ ಶಿಗ್ಗಾವಿ ತಿಳಿಸಿದರು.
ರೈತರ ಮೇಲೆ ಆದಾಯದ ಗುಮ್ಮ
ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರ ₹1.20 ಲಕ್ಷ ವಾರ್ಷಿಕ ಆದಾಯ ನಿಗದಿಪಡಿಸಿದೆ. ಆದರೆ ತಾಲ್ಲೂಕಿನಲ್ಲಿ ಅದಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿದವರೂ ಬಿಪಿಎಲ್‌ ಕಾರ್ಡ್ ಪಡೆದು ಸರ್ಕಾರದ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ ಕೆಲ ರೈತರ ಜಮೀನುಗಳನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಹಲವು ಲಕ್ಷ ಪರಿಹಾರಧನ ನೀಡಿದೆ. ಸಹಜವಾಗಿ ಅಂತಹವರ ಆದಾಯವೂ ಹೆಚ್ಚಿಗೆ ಎಂದೇ ಪರಿಗಣಿಸಲಾಗುತ್ತಿದ್ದು, ಅನೇಕ ಅರ್ಹರೂ ಬಿಪಿಎಲ್‌ ಅವಕಾಶದಿಂದ ವಂಚಿತರಾಗುವ ಅನಿವಾರ್ಯತೆ ಇದೆ ಎಂಬುದು ಆಹಾರ ಇಲಾಖೆ ಮೂಲಗಳ ವಿವರಣೆ.
ಕಲಾವಿದನ ಪರದಾಟ
ಕುಷ್ಟಗಿಯ ಚನ್ನಪ್ಪ ಭಾವಿಮನಿ ಎಂಬ ಕಲಾವಿದ ಬಿಪಿಎಲ್‌ಗೆ ಅರ್ಹರಾಗಿದ್ದಾರೆ. ಆದರೆ ಅವರ ಬ್ಯಾಂಕ್‌ ಖಾತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇತರೆ ಕಲಾವಿದರಿಗೂ ಸೇರಿದ ಎಲ್ಲ ಮೊತ್ತ ಸೇರಿ ಸುಮಾರು ₹3 ಲಕ್ಷ ಗೌರವ ಧನ ಜಮೆ ಆಗಿದೆ. ಆದರೆ ಅಧಿಕ ಆದಾಯ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರ ಬಿಪಿಎಲ್‌ ಕಾರ್ಡ್ ಅನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಗೊಂದಲಕ್ಕೆ ಒಳಗಾಗಿರುವ ಚನ್ನಪ್ಪ ಪುನಃ ಬಿಪಿಎಲ್ ಕಾರ್ಡ್ ನೀಡುವಂತೆ ಅರ್ಜಿ ಸಲ್ಲಿಸಿರುವುದು ತಿಳಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT