ಪೊಲೀಸ್ ಕಣ್ಗಾವಲು; ಬಳ್ಳಾರಿಯಿಂದ ಬಂದ ಹೋಂ ಗಾರ್ಡ್
ಪ್ರತಿ ಬಾರಿಯೂ ಹುಲಿಗಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಣ್ಗಾವಲು ವಹಿಸಲಾಗಿದೆ.
125 ಪೊಲೀಸ್ ಸಿಬ್ಬಂದಿ, 25 ಜನ ಅಧಿಕಾರಿಗಳು, ಎರಡು ಕೆಎಸ್‌ಆರ್‌ಪಿ ತುಕಡಿ, ಐದು ಡಿ.ಆರ್. ಹಾಗೂ ಬಳ್ಳಾರಿಯಿಂದ 100 ಜನ ಹೋಂಗಾರ್ಡ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಯಾಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ದೇವಸ್ಥಾನದ ಎದುರಿನ ಜಾಗದಲ್ಲಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಸರಾಗ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ., ಮುನಿರಾಬಾದ್ ಪಿಎಸ್‌ಐ ಸುನಿಲ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.