ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪೂರ ಗ್ರಾಮವನ್ನು ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಎಂದು ಘೋಷಣೆ ಮಾಡಲು ಮುಂದಾಗಿರುವ ಹಿನ್ನಲೆಯಲ್ಲಿ ಶಾಸಕ ಜಿ.ಜನಾರ್ದನ ರೆಡ್ಡಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳೀಯ ಜನರದೊಂದಿಗೆ ಸಮಾಲೋಚನೆ ಸಭೆ ನಡೆಸಿದರು.

ನಂತರ ಮಾತನಾಡಿ, ‘ತಾಲ್ಲೂಕಿನ ಆನೆಗೊಂದಿ ಸಮೀಪದ ಚಿಕ್ಕರಾಂಪೂರ, ಲಕ್ಷ್ಮೀಪುರ ಗ್ರಾಮಗಳು ಸೇರಿದಂತೆ ಒಟ್ಟು 192.82 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಲು ಮುಂದಾಗಿದೆ. ಇದರ ಭಾಗವಾಗಿಯೇ ಈ ಗ್ರಾಮಗಳ ಜನರಿಗೆ ನೋಟಿಸ್ ಸಹ ನೀಡಿದ್ದಾರೆ.

ಈ ನೋಟಿಸ್ ವಿಷಯಕ್ಕೆ ಜನರು ಆತಂಕಪಡುವ ಅವಶ್ಯ ಕತೆಯಿಲ್ಲ. ಯಾವುದೇ ಕಾರಣಕ್ಕೂ ಗ್ರಾಮಗಳು ಖಾಲಿ ಮಾಡಿಸಲು ಬಿಡುವುದಿಲ್ಲ. ಸುಮಾರು ವರ್ಷಗಳಿಂದ ವಾಸಿ ಸುತ್ತಿರುವ ನಿಮಗೆ ತೊಂದರೆ ನೀಡುವುದು ಸರಿಯಲ್ಲ. ಈ ಗ್ರಾಮಗಳಲ್ಲಿ ವಾಸಕ್ಕೆ ಸಂಬಂಧಪಟ್ಟಂತೆ ಗ್ರಾ.ಪಂ ಸೇರಿದಂತೆ ಇತರೆ ಇಲಾಖೆ ನೀಡಿದ ದಾಖಲೆಗಳು ಸಲ್ಲಿಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂದೆ ಅಧಿಕಾರಿಗಳ ಜೊತೆಗೆ ಹಾಗೂ ಸರ್ಕಾರದ ಜೊತೆಗೆ ಸ್ವತಃ ನಾನೆ ಚರ್ಚೆ ನಡೆಸಿ, ಸೂಕ್ತ ರೀತಿಯಲ್ಲಿ ಕ್ರಮಕೈಗೊ ಳ್ಳುವ ಭರವಸೆ ನೀಡುವೆ ಎಂದರು.

ತಹಶೀಲ್ದಾರ ಯು.ನಾಗರಾಜ, ಡಿವೈಎಸ್ಪಿ ಜೆ.ನ್ಯಾಮಗೌಡರ, ತಾ.ಪಂ ಇಒ ರಾಮರೆಡ್ಡಿ, ಗ್ರಾಮೀಣ ಠಾಣೆಯ ಪಿಐ ರಂಗಪ್ಪ ದೊಡ್ಡಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.