ಕೊಪ್ಪಳ: ಕಿರಿದಾದ ಕಾಂಪೌಂಡ್ನಿಂದ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದ ಕಾರಣ ತಾಲ್ಲೂಕಿನ ಬಹದ್ದೂರ್ ಬಂಡಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಗೆ ದೊಡ್ಡ ಕೌಂಪೌಂಡ್ ನಿರ್ಮಿಸಲಾಗಿದೆ. ಇದಕ್ಕೆ ಗ್ರಾಮಸ್ಥರು, ಶಾಲೆಯ ಹಳೆ ವಿದ್ಯಾರ್ಥಿಗಳು, ದಾನಿಗಳು ಮತ್ತು ಅದೇ ಶಾಲೆಯ ಶಿಕ್ಷಕರು ನೆರವಾಗಿದ್ದಾರೆ.

ಕಿರಿದಾದ ಕಾಂಪೌಂಡ್ನಿಂದಾಗಿ ಶಾಲೆಯ ಅನೇಕ ವಸ್ತುಗಳಿಗೆ ಹಿಂದೆ ಹಾನಿಯಾಗಿತ್ತು. ಇದನ್ನು ಮನಗಂಡ ಶಾಲೆಯ ಮುಖ್ಯಶಿಕ್ಷಕ ಬೀರಪ್ಪ ಅಂಡಗಿ ಹಳೆಯ ವಿದ್ಯಾರ್ಥಿಗಳು, ಊರಿನವರನ್ನು ಸೇರಿಸಿ ಸಭೆ ಮಾಡಿದರು. ಎಲ್ಲರೂ ನೆರವಾದರು. ಕೆಲವರು ಹಣ ನೀಡಿದರೆ, ಇನ್ನೂ ಕೆಲವರು ಕಾಂಪೌಂಡ್ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ ಒದಗಿಸಿದರು.

‘ಶನಿವಾರ ಕಾಂಪೌಂಡ್ ಎತ್ತರಿಸುವ ಕಾರ್ಯ ಆರಂಭವಾಗಿದ್ದು, ಭಾನುವಾರ ಈ ಕೆಲಸ ಪೂರ್ಣಗೊಳ್ಳಲಿದೆ. ಎಲ್ಲರೂ ಸೇರಿ ನೆರವಾಗಿದ್ದರಿಂದ ಸುಲಭವಾಗಿ ಕೆಲಸವಾಗಿದೆ. ಇದಕ್ಕಾಗಿ ಒಟ್ಟು ₹3 ಲಕ್ಷ ವೆಚ್ಚವಾಗಿದೆ’ ಎಂದು ಬೀರಪ್ಪ ಅಂಡಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.