

ಸಾಗರೋಪಾದಿಯಲ್ಲಿ ಬಂದಿದ್ದ ಭಕ್ತರು ಗವಿಸಿದ್ಧೇಶ್ವರ ಗದ್ದುಗೆಯ ದರ್ಶನ ಪಡೆದು ಮಹಾದಾಸೋಹ ಸವಿದ ಬಳಿಕ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಚಿತ್ರ

ಗವಿಮಠದ ಆವರಣದಿಂದ ಒಂದು ಕಿ.ಮೀ. ದೂರದ ಬಸವೇಶ್ವರ ವೃತ್ತದ ತನಕ ಕಣ್ಣು ಹಾಯಿಸಿದಷ್ಟೂ ದೂರ ಜನಜಂಗುಳಿಯಿದ್ದರೂ ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಗಾಢಮೌನ ಆವರಿಸಿತ್ತು.
ಪ್ರಜಾವಾಣಿ ಚಿತ್ರ

ಗವಿಮಠಕ್ಕೆ ಬರುವ ಎಲ್ಲಾ ದಿಕ್ಕುಗಳಿಂದಲೂ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.
ಪ್ರಜಾವಾಣಿ ಚಿತ್ರ

ಗವಿಮಠದ ವಿಶಾಲವಾದ ಆವರಣದಿಂದ ಆರಂಭವಾದ ಮಹಾರಥೋತ್ಸವದ ಯಾತ್ರೆ ಸುರಕ್ಷಿತವಾಗಿ ಪಾದಗಟ್ಟೆ ಮುಟ್ಟಿ ವಾಪಸ್ ಸ್ವ ಸ್ಥಾನಕ್ಕೆ ಬರುತ್ತಿದ್ದಂತೆ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಪ್ರಜಾವಾಣಿ ಚಿತ್ರ

ಕೈಯಲ್ಲಿ ಸತ್ಕಾರ್ಯ ತಲೆಯಲ್ಲಿ ಸದ್ವಿಚಾರ ಬಾಯಲ್ಲಿ ಸವಿ ಮಾತು ಮನದಲ್ಲಿ ಸವಿಪ್ರೇಮ ಇದ್ದರೆ ಬದುಕು ಸಾರ್ಥಕವಾಗುತ್ತದೆ. ಆಗ ಗವಿಸಿದ್ಧೇಶ್ವರನೇ ಬಂದು ನಿಮ್ಮ ಮನೆ ಜಗುಲಿ ಮೇಲೆ ದೀಪ ಹಚ್ಚುತ್ತಾನೆ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನುಡಿದರು
ಪ್ರಜಾವಾಣಿ ಚಿತ್ರ

ಬೆಳಕಿನ ಅಲಂಕಾರದಲ್ಲಿ ಗವಿಮಠ ಕಂಗೊಳಿಸುತ್ತಿತ್ತು.
ಪ್ರಜಾವಾಣಿ ಚಿತ್ರ

ಜಾತ್ರಾ ಮಹೋತ್ಸವದ ನಡುವೆ ಕಲಾವಿದರ ಕೈಚಳ ಗಮನ ಸೆಳೆಯಿತು.
ಪ್ರಜಾವಾಣಿ ಚಿತ್ರ

ಜಾತ್ರೆಯಲ್ಲಿ ಜಾಗೃತಿ ಮೂಡಿಸುವ ರಂಗೋಲಿಗಳು ಆಕರ್ಷಣೀಯವಾಗಿದ್ದವು
ಪ್ರಜಾವಾಣಿ ಚಿತ್ರ

ಅಪಾರ ಭಕ್ತರ ಸಮ್ಮುಖದಲ್ಲಿ ತೇರು ಸಾಗಿದ ದೃಶ್ಯ
ಪ್ರಜಾವಾಣಿ ಚಿತ್ರ

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ನೋಟ
ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.