ನಮ್ಮ ಭಾಗದಲ್ಲಿ ಭತ್ತ ಖರೀದಿ ಕೇಂದ್ರದಿಂದ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಂಡ್ಯ ಮೈಸೂರು ಹಾಗೂ ಹಾಸನ ಭಾಗದಲ್ಲಿ ಹೆಚ್ಚು ಬೆಂಬಲ ಬೆಲೆ ಕೇಳುತ್ತಾರೆ. ಅಲ್ಲಿನ ಜನರಿಗೆ ಮಾತ್ರ ಕೇಂದ್ರಗಳ ಉಪಯೋಗ ಆಗುತ್ತದೆ.
ಸಾವಿತ್ರಿ ಪುರುಷೋತ್ತಮ ಅಕ್ಕಿ ಗಿರಣಿ ಮಾಲೀಕರ ಸಂಘ ರಾಜ್ಯಾಧ್ಯಕ್ಷ
ರಾಜ್ಯದ ಭತ್ತ ಖರೀದಿ ಕೇಂದ್ರಗಳ ಮಾನದಂಡಗಳು ರೈತರಿಗೆ ಕಂಟಕವಾಗಿವೆ. ಬೆಂಬಲ ಬೆಲೆ ಜೊತೆಗೆ ತೆಲಂಗಾಣ ₹500 ಹೆಚ್ಚುವರಿಯಾಗಿ ನೀಡುತ್ತಿದ್ದು ಅದೇ ರೀತಿ ರಾಜ್ಯ ಸರ್ಕಾರವೂ ಹೆಚ್ಚುವರಿ ಹಣ ಕೊಡಲಿ.
ವೆಂಕಟರಾವ್ ನಾಡಗೌಡ ಮಾಜಿ ಸಚಿವ
ಕೃಷಿ ಚಟುವಟಿಕೆ ಕೈಗೊಳ್ಳಲು ರಸಗೊಬ್ಬರದ ಅಂಗಡಿಯವರು ಹಾಗೂ ಹಲವರ ಬಳಿ ಕೈಗಡ ಸಾಲ ಪಡೆದಿರುತ್ತೇವೆ. ಫಸಲು ಬಂದ ತಕ್ಷಣವೇ ಮಾರಾಟ ಮಾಡಿ ಸಾಲ ವಾಪಸ್ ಕೊಡಬೇಕು. ಖರೀದಿ ಕೇಂದ್ರದ ಮಾನದಂಡಕ್ಕೆ ಅನುಗುಣವಾಗಿ ಮಾರಾಟ ಕಷ್ಟ.