ಕೊಪ್ಪಳದ ಗಣೇಶ ನಗರದಲ್ಲಿನ ಚರಂಡಿ
ಕೊಪ್ಪಳ ಕಲ್ಯಾಣ ನಗರದ ಹಿಂಭಾಗದಲ್ಲಿರುವ ಕೊಳಚೆ ನೀರು
ಕೊಪ್ಪಳದ ಗಣೇಶ ನಗರದಲ್ಲಿ ಅಳಿದುಳಿದ ವಸ್ತುಗಳಿಗಾಗಿ ದೇವಮ್ಮ ಅವರ ಮನೆಯಲ್ಲಿ ಕಳೆದ ವರ್ಷ ಹೊಕ್ಕಿದ್ದ ನೀರು

ಮಳೆ ನೀರಿನ ಜೊತೆಗೆ ಅದರಲ್ಲಿನ ಹಾವುಗಳು ಚೇಳುಗಳು ಕೂಡ ಮನೆಯ ಮೆಟ್ಟಿಲು ತನಕ ಬರುತ್ತವೆ. ಕೆಟ್ಟ ವಾಸನೆಯಂತೂ ನಿರಂತರ. ಈ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಬೇಕು. ಸಂಜೆಯಾದರೆ ಸಾಕು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಬೇಕಾದ ದುಸ್ಥಿತಿಯಿದೆ
ಕಮಲಮ್ಮ ಹಡಪದ ಗಣೇಶ ನಗರ
ಆರು ವರ್ಷಗಳಿಂದ ವಾಸವಾಗಿದ್ದೇನೆ. ಮಳೆ ಸ್ವಲ್ಪ ಜೋರಾಗಿ ಬಂದರೂ ಮನೆಯ ಮುಂದೆ ಚರಂಡಿ ನೀರು ಬರುವುದು ನಿಶ್ಚಿತ. ನಗರಸಭೆಯಿಂದ ಕಸ ಸಂಗ್ರಹ ವಾಹನ ಬಂದರೂ ಜನ ಕಸವನ್ನು ಚರಂಡಿಯಲ್ಲಿ ಚೆಲ್ಲುತ್ತಾರೆ
ಬಸಣ್ಣ ಮಂಗಳೂರು ಗಣೇಶ ನಗರ
ಖಾಲಿ ನಿವೇಶನಗಳಲ್ಲಿ ಕಸ ಹಾಕುವುದು ಮತ್ತು ಮನೆಯ ಮುಂದಿನ ಅವ್ಯವಸ್ಥೆಯ ಚರಂಡಿ ಇರುವುದು ನಮಗೆ ಶಾಪಗ್ರಸ್ತದಂತೆ ಆಗಿದೆ. ಬಡಾವಣೆಯ ಜನ ಕೂಡ ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ಕೊಡಬೇಕು. ನಗರಸಭೆ ಆಡಳಿತ ಮಳೆಗಾಲದ ಸಮಯದಲ್ಲಾದರೂ ಜನರ ಆರೋಗ್ಯ ರಕ್ಷಣೆಗೆ ಒತ್ತು ಕೊಡಬೇಕು
ರೇಣುಕಪ್ಪ ಹುರಿಗೆಜ್ಜಿ ಗಣೇಶ ನಗರದ ನಿವಾಸಿ