ಸಾರಿಗೆ ನಿಯಂತ್ರಕರು ಇರುವ ವಿಚಾರಣಾ ಕೌಂಟರ್ ಧೂಳು ಹಿಡಿದಿರುವುದು
ಸಿಬ್ಬಂದಿ ಕೊರತೆ ಕಾರಣಕ್ಕೆ ಕೌಂಟರ್‌ಗಳಲ್ಲಿ ನಿಯಂತ್ರಕರು ಇರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.
ನೀಲಪ್ಪ ನಾಸಿಪುಡಿ ಘಟಕ ವ್ಯವಸ್ಥಾಪಕ
ಪೊಲೀಸರು ಕೌಂಟರ್ ಒಳಗಿದ್ದರೆ ಕಿಸೆಗಳ್ಳರಿಗೆ ಅನುಕೂಲವಾಗುತ್ತದೆ. ಹಾಗಾಗಿ ಪೊಲೀಸರು ನಿಲ್ದಾಣದಲ್ಲಿ ಅಲ್ಲಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ವರದಿಯಾಗಿಲ್ಲ.
ಹನುಮಂತಪ್ಪ ತಳವಾರ ಸಬ್ ಇನ್‌ಸ್ಪೆಕ್ಟರ್
ಉಪಯೋಗವಿಲ್ಲವೆಂದಾದರೆ ಕೌಂಟರ್‌ಗಳನ್ನು ನಿರ್ಮಿಸುವ ಅಗತ್ಯ ಇರಲಿಲ್ಲ. ಅನಗತ್ಯವಾಗಿ ಸರ್ಕಾರದ ಹಣ ಖರ್ಚು ಮಾಡಲಾಗಿದೆ
ಈಶ್ವರಪ್ಪ ಬಲಕುಂದಿ ಪ್ರಯಾಣಿಕ
ನಿಲ್ದಾಣದ ಒಳ ಹೊರಗೆ ಅವ್ಯವಸ್ಥೆ
ಕುಷ್ಟಗಿ ಬಸ್ ನಿಲ್ದಾಣದ ಒಳ ಮತ್ತು ಹೊರ ಆವರಣದಲ್ಲಿ ಅವ್ಯವಸ್ಥೆ ಕಣ್ಣಿಗೆ ರಾಚುತ್ತಿದೆ. ಘಟಕದ ಮುಂದೆ ಬಹಳಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದ್ದು ಸಕಾಲದಲ್ಲಿ ವಿಲೇವಾರಿಯಾಗುವುದಿಲ್ಲ. ಮೂತ್ರಾಲಯ ಶೌಚಾಲಯದ ಬಳಿಯ ಚರಂಡಿಗಳು ಕಟ್ಟಿಕೊಂಡಿದ್ದು ಅವುಗಳಲ್ಲಿನ ಕೊಳಚೆ ಕೊಪ್ಪಳ ಮಾರ್ಗದ ಗೇಟ್ ಬಳಿ ಹರಿಯುತ್ತಿರುತ್ತದೆ. ಕ್ಯಾಂಟಿನ್ ಬಳಿ ರಸ್ತೆಗೆ ಅಡ್ಡಲಾಗಿ ಗುಂಡಿ ತೆಗೆದು ಹಾಗೆ ಬಿಟ್ಟಿದ್ದು ವಾಹನಗಳ ಸಂಚಾರಕ್ಕೆ ಬಹಳಷ್ಟು ಅಡ್ಡಿಯಾಗಿದೆ. ನಿಲ್ದಾಣದ ಬಳಿ ಬೈಕ್ ಸ್ಟ್ಯಾಂಡ್ ಇದ್ದು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿರುತ್ತದೆ. ಶುಲ್ಕ ವಸೂಲಿ ಮಾಡುವವರು ನಿಲ್ದಾಣದಲ್ಲೇ ಅಡ್ಡಲಾಗಿ ಬೊಂಬುಗಳನ್ನು ಕಟ್ಟಿದ್ದು ಮಹಿಳೆಯರು ಮಕ್ಕಳು ವೃದ್ಧರು ಒಳಗೆ ಬರುವುದಕ್ಕೆ ಪರದಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆ ಕಣ್ಣಿಗೆ ಕಾಣುತ್ತಿದ್ದರೂ ಘಟಕದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.