ಭಾನುವಾರ, ಅಕ್ಟೋಬರ್ 24, 2021
20 °C

ಅಸ್ಪೃಶ್ಯತೆ ಆಚರಣೆ ಬಿಡಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಜಾತಿ, ಬೇಧ ಬಿಟ್ಟು ಎಲ್ಲರೂ ಮನುಷ್ಯರೆಂಬ ಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಹೋಟೆಲ್, ಅಂಗಡಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಿಸಲು ಮುಕ್ತ ಅವಕಾಶ ಇದೆ. ಗ್ರಾಮಗಳಲ್ಲಿ ಅಸ್ಪೃಶ್ಯತಾ ಆಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದ್ದು, ನಿವಾರಣೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಕಿಶೋರ್ ವಿಕಾಸ ಸುರಳ್ಕರ್‌ ಹೇಳಿದರು.

ತಿಗರಿ ಗ್ರಾಮದಲ್ಲಿ ತಾಲೂಕು ಆಡಳಿತ, ತಾಲ್ಲೂಕ ಪಂಚಾಯಿತಿ, ಪೋಲಿಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಸ್ಪೃಶ್ಯತಾ ನಿವಾರಣೆ ಕುರಿತು ಶುಕ್ರವಾರ ನಡೆದ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾತನಾಡಿ, ಎಲ್ಲರಿಗೂ ಸಂವಿಧಾನ ಸಮಾನ ಹಕ್ಕು ನೀಡಿದೆ. ಹಾಗಾಗಿ ಜಾತಿ ಮತ, ಮೇಲು ಕೀಳು ಎಂಬ ಭಾವನೆ ತೊಲಗಲಿ. ನಾವೆಲ್ಲ ಮನುಷ್ಯರೆಂಬ ಭಾವನೆ ಮೊಳಗಬೇಕು. ಎಲ್ಲಾ ಸಮುದಾಯಗಳನ್ನು ಗೌರವಿಸಿ ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮದಲ್ಲಿ ಪ್ರತಿಯೊಬ್ಬರೂ ಶಾಂತಿ , ಸಹಬಾಳ್ವೆ, ಸಮಾನತೆ,ಸಹೊದರತ್ವ ಗುಣದಿಂದ ಬಾಳೋಣ ಎಂದರು.

ಸಿಇಒ ಪೌಜಿಯಾ ತರುನ್ನುಮ ಮಾತನಾಡಿ, ಗಾಂಧೀಜಿ ಕನಸು ನನಸಾಗಿಸಲು ಎಲ್ಲರೂ ಒಂದೇ ಭಾವನೆಯಿಂದ ಜೀವನ ನಡೆಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಜಾತಿ, ಮತ, ಬೇಧ ಬಿಟ್ಟು ಸಹಬಾಳ್ವೆಯಿಂದ ಬಾಳೋಣ ಎಂದರು.

ಗ್ರಾ.ಪಂ ಅಧ್ಯಕ್ಷೆ ರೇಣುಕಾ ಹರಿಜನ, ತಹಶೀಲ್ದಾರ್ ಅಮರೇಶ ಬಿರಾದಾರ್, ಡಿವೈಎಸ್ಪಿ ಗೀತಾ, ತಾ.ಪಂ ಇಒ ಮಲ್ಲಿಕಾರ್ಜುನ, ಸಿಡಿಪಿಒ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆ ಶ್ರೀಧರ್, ಆರ್. ಐ. ಶ್ರೀನಾಥ್ ಜೋಶಿ, ಗ್ರಾಮ ಲೆಕ್ಕಾಧಿಕಾರಿ ಸುಪ್ರೀತಾ, ಪಿಡಿಒ ಅಕ್ಬರ್, ಮುಖಂಡರಾದ ಹನುಮನಗೌಡ , ಸತ್ಯನಾರಾಯಣರಾವ್, ರಾಮಣ್ಣ ಬಿಸರಳ್ಳಿ, ಶಂಕರ ಅಂಬಳಿ, ಗಣೇಶ ಪೂಜಾರ್, ಸಂಗಪ್ಪ ಕವಲೂರು, ಮುದಿಯಪ್ಪ ಅಡವಳ್ಳಿ, ಭೀಮನಗೌಡ, ದೇವಪ್ಪ ಹರಿಜನ, ದುರುಗಪ್ಪ ಹರಿಜನ , ಹನುಮಂತ, ಮಾರುತಿ, ಬಸವನಗೌಡ, ಮಹೇಶ, ಈರಪ್ಪ, ಕೋಟ್ರಪ್ಪ, ಮಹೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು